ಧರ್ಮಾಚರಣೆ ೧೭

        ಧರ್ಮಾಚರಣೆ---೧೭

ವೇದಸ್ವೀಕರಣಂ ಪೂರ್ವಂ ವಿಚಾರೋಭ್ಯಸನಂ ಜಪಃ | ತದ್ದಾನಂ ಚೈವ ಶಿಷ್ಯೇಭ್ಯೋ ವೇದಾಭ್ಯಾಸೋ ಹಿ ಪಂಚಧಾ || ದಕ್ಷವಚನ||

ವೇದಾಭ್ಯಾಸವೆಂದರೆ ಅದು ಕೇವಲ ಯಾರದ್ದೋ ಉಪದೇಶ ಅಥವಾ ಧ್ವನಿ ಸುರುಳಿ ಕೇಳಿ ಅಥವಾ ಪುಸ್ತಕ ಓದಿ ನಡೆಯುವಂತಹದಲ್ಲ. ಐದು ಹಂತಗಳಲ್ಲಿ ವೇದಾಭ್ಯಾಸ ಶಾಸ್ತ್ರೋಕ್ತವಾಗಿದೆ. ಮೊದಲು ಗುರುಗಳ ಬಳಿ ನಿಯಮದಿಂದ ಕಲಿಯುವುದು, ನಂತರ  ವೇದಾರ್ಥದ ಹಾಗೂ ಮಂತ್ರಗಳ ಪ್ರಯೋಗದ ಬಗ್ಗೆ ಅಭ್ಯಾಸ ಮಾಡಬೇಕು. ಸದಾ ವೇದಚಿಂತನೆಯಲ್ಲಿ ಅಲ್ಲಿ ಪರಮಾತ್ಮನ ಬಗೆಗಿನ ಜ್ಞಾನದ ಚಿಂತನೆಯಲ್ಲಿ ತೊಡಗಬೇಕು. ಅನಂತರ ಕಲಿಯಲು ಬಯಸುವ ಯೋಗ್ಯ ಶಿಷ್ಯರಿಗೆ ಉಪದೇಶಿಸಬೇಕು. ಹೀಗೆ ಐದು ಹಂತದ ಅಭ್ಯಾಸ ಮಾಡಿದವನನ್ನು ವೇದಮೂರ್ತಿ ಅಂತಲೋ, ವಿಪ್ರನೆಂದೋ, ವೇದಬ್ರಹ್ಮನೆಂದೋ ಕರೆಯಬಹುದು. ಉಳಿದವರು ಮೂರ್ತಿಗಳು ಮಾತ್ರ.

ಸಂಗ್ರಹ: ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩