ರಾಮಾಯಣ ೫೩

📙🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌾📙
ಭಾಗ-೫೩

*ಋತೇ ನಿಯೋಗಾತ್ಸಾಮರ್ಥ್ಯಮವಬೋದ್ಧುಂ ನ ಶಕ್ಯತೇ ಸಹಸಾ ವಿನಿಯೋಗೋ ಹಿ ದೋಷವಾನ್ಪ್ರತಿಭಾತಿ ಮೇ*

_ಹನುಮನು ತನ್ನ ಮಾತು ಮುಂದುವರೆಸುತ್ತಿದ್ದಾನೆ. ವಿಭೀಷಣ ಆಶ್ರಯ ಕೊಡಲು ಯೋಗ್ಯನೋ ಅಲ್ಲವೋ ಎಂಬುದನ್ನು ಯಾವುದಾದರೂ ಕಾರ್ಯವನ್ನು ನೀಡುವ ಮೂಲಕ ನಿರ್ಣಯಿಸಬೇಕು. ಆದರೆ ಬಂದೊಡನೆಯೇ ಕಾರ್ಯ ಹೇಳುವುದೂ ಕಷ್ಟ. ನಮಗೂ ಕೆಲವೊಮ್ಮೆ ಇಂತಹ ಪ್ರಸಂಗ ಬರುತ್ತದೆ. ಹೊಸಜನರು ಬಂದಾಗ ಅವರೊಡನೆ ಹೇಗೆ ವ್ಯವಹಾರ ತೋರಬೇಕೆಂಬ ವಿಷಯದಲ್ಲಿ ಸಂಶಯವುಂಟಾಗುತ್ತದೆ. ಪ್ರಕೃತ ವಿಭೀಷಣನ ಆಗಮನದಲ್ಲೂ ಅಂತಹದೇ ಗೊಂದಲ ಉಂಟಾಗಿದೆ. ಕಾರ್ಯ ವಹಿಸಿದರೆ ಮಾಡುವ ಸಾಮರ್ಥ್ಯ ಅನುಸರಿಸಿ ನಿರ್ಣಯಿಸಬಹುದು. ಆದರೆ ಶತ್ರುಪಕ್ಷದವನಿಗೆ ಅಪರಿಚಿತನಿಗೆ ನಮ್ಮ ಕಾರ್ಯವನ್ನು ಹೇಗೆ ವಹಿಸಿಕೊಡುವುದು!_

*ಸ ಏಷ ದೇಶಃ ಕಾಲಶ್ಚ ಭವತೀತಿ ಯಥಾ ತಥಾ ಪುರುಷಾತ್ಪುರುಷಂ ಪ್ರಾಪ್ಯ ತಥಾ ದೋಷಗುಣಾವಪಿ, ದೌರಾತ್ಮ್ಯಂ ರಾವಣೇ ದೃಷ್ಟ್ವಾ ವಿಕ್ರಮಂ ಚ ತಥಾ ತ್ವಯಿ ಯುಕ್ತಮಾಗಮನಂ ಹ್ಯತ್ರ ಸದೃಶಂ ತಸ್ಯ ಬುದ್ಧಿತಃ*

_ವಿಭೀಷಣ ಬಂದ ಕಾಲ ಸೂಕ್ತವಾಗಿ ಇದೆ. ಇವನು ನೀಚಪುರುಷನ ಸಂಗವನ್ನು ತ್ಯಜಿಸಿ ಸತ್ಪುರುಷನ ಬಳಿ ಬಂದಿದ್ದಾನೆ. ಗುಣ ದೋಷಗಳನ್ನು ವಿವೇಚಿಸಿಯೇ ಅವನು ಇಲ್ಲಿಗೆ ಬಂದಿದ್ದಾನೆ. ರಾವಣನ ದುಷ್ಟತೆಯನ್ನೂ ನಿನ್ನ ಪರಾಕ್ರಮವನ್ನೂ ಕಂಡು ರಾವಣನನ್ನು ಬಿಟ್ಟು ಬಂದಿದ್ದಾನೆ. ಹಾಗಾಗಿ ಅವನ ಆಗಮನ ಸರ್ವಥಾ ಯುಕ್ತವಾಗಿದೆ. ಅವನ ಬುದ್ಧಿಯ ಮಟ್ಟವನ್ನೂ ಇದು ನಿರ್ಣಯಿಸುತ್ತದೆ. ಯಾರೊಡನೆ ವ್ಯವಹರಿಸುವ ಮೊದಲು ನಾವು ಸಮಯ ಸಂದರ್ಭ ದೇಶ ಕಾಲ ಮುಂತಾದವನ್ನು ಪರಿಗಣಿಸಿ ವಿವೇಚಿಸಬೇಕೆಂಬ ಹನುಮನ ಈ ಭಾವ ನಮಗೂ ಮಾರ್ಗದರ್ಶಕ._

📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩