ಕಿರಾತಾರ್ಜುನೀಯ

🌸 ಕಿರಾತಾರ್ಜುನೀಯದ ಒಂದು ಸಾಯಕ 🌸

*अवन्ध्यकोपस्य विहन्तुरापदां भवन्ति वश्याः स्वयमेव देहिनः | अमर्षशून्येन जनस्य जन्तुना न जातहार्देन न विद्विषादरः ||*

_ದ್ರೌಪದಿ ಧರ್ಮಜನಿಗೆ ಹೇಳುವ ಮಾತು. ವ್ಯರ್ಥವಾಗದ ಕೋಪ ಯಾವನು ಹೊಂದಿರುವನೋ ಅವನಿಗೆ ಆಪತ್ತುಗಳು ಎದುರಾಗದು. ಅಂತಹವನಿಗೆ ಜೀವಿಗಳು ತಾವಾಗಿಯೇ ವಶರಾಗುವರು. ಯಾರು ಸರಿಯಾದ ಸಂದರ್ಭದಲ್ಲಿ ಕೋಪಗೊಳ್ಳುವರೋ, ಅಥವಾ ತಮ್ಮ ಕೋಪ ವ್ಯರ್ಥವಾಗದಂತೆ ಸಾಧಿಸುವರೋ ಅಂತಹವರಿಗೆ ಆಪತ್ತುಗಳು ಎದುರಾಗದು. ಎದುರಾದರೂ ಸುಲಭವಾಗಿ ಪರಿಹರಿಸುವವು. ಶತ್ರುಗಳೂ ಅಂತಹ ವ್ಯಕ್ತಿಗಳಿಗೆ ಹೆದರಿ ಶರಣಾಗುವಾಗ ಉಳಿದವರ ಕಥೆಯೇನು! ಅದೇ ಆಪತ್ತು ಅಥವಾ ಅವಮಾನ ಇದಿರಾದಾಗ ಕೋಪಗೊಳ್ಳದೆ ಅನಂತರ ಮಾಡುವ ವ್ಯರ್ಥ ಕೋಪವು ಯಾರಿಗೂ ಹೆದರಿಕೆಯನ್ನೂ ಹುಟ್ಟಿಸಲಾರದು. ಅಂತಹ ಕೋಪದಿಂದ ಯಾವ ಲಾಭವೂ ಉಂಟಾಗದು. ಶತ್ರುಗಳಂತೂ ಅಂತಹ ವ್ಯಕ್ತಿಗಳನ್ನು ಕಡೆಗಣಿಸುತ್ತಾರೆ. ಅವರ ವ್ಯಕ್ತಿತ್ವ ಮರೆಯಾಗಿ ಹೋಗುವುದು. ನೀನು ದುರ್ಯೋಧನನಿಂದ ಅವಮಾನಿತನಾದಾಗ ಅಥವಾ ವಂಚನೆಯಿಂದ ಸೋತಾಗ ಕೋಪಗೊಳ್ಳದೆ ಪ್ರತೀಕಾರ ತೀರಿಸದೆ ಸುಮ್ಮನಿದ್ದೆ. ಈಗ ಅವಸ್ಥೆ ಅವಲೋಕಿಸುತ್ತಾ ಬುಸುಗುಟ್ಟರೆ ಪ್ರಯೋಜನವಾದರೂ ಏನು? ಯಾರೂ ನಿನ್ನ ಕೋಪವನ್ನು ಗಮನಿಸುವುದೂ ಇಲ್ಲ. ಬೆಲೆಯೇ ಕೊಡಲಾರರು. ನಮಗೂ ಈ ಮಾತು ಅನ್ವಯಿಸುತ್ತದೆ. ಸುಮ್ಮ ಸುಮ್ಮನೆ ಕೋಪಗೊಂಡರೆ ಆ ಕೋಪವು ಮೌಲ್ಯ ಕಳೆದುಕೊಳ್ಳುತ್ತದೆ. ಸರಿಯಾದ ಸಂದರ್ಭದಲ್ಲಿ, ಶತ್ರುಗಳಲ್ಲಿ, ದುಷ್ಟರಲ್ಲಿ, ಹಿತಶತ್ರುಗಳಲ್ಲಿ ಕೋಪ ಮಾಡಿದರೆ ಅದು ಫಲಕಾರಿಯಾಗುವುದು. ಅಂತಹ ಸದುದ್ದೇಶದ ಕೋಪವು ನಮಗೆ ಅನ್ಯಾಯ ಮಾಡಲೆಣಿಸುವವರನ್ನು ಹೆದರಿಸುವುದು. ಶತ್ರುಗಳಿಗೂ ನಮ್ಮ ವಿಷಯದಲ್ಲಿ ಪ್ರವೃತ್ತಿ ಮಾಡದಂತೆ ತಡೆಯುವುದು. ಹಾಗಾಗಿ ಕೋಪ ಸಲ್ಲದು. ಸಲ್ಲುವುದಾದರೂ ಎಲ್ಲ ಸಮಯದಲ್ಲಿ ಅಲ್ಲ ಅನ್ನುವ ಸತ್ಯ ಅರಿಯೋಣ._

📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩