ವೇದ ಧರ್ಮ ೩೫

📗🌾📙 ವೇದ-ಧರ್ಮ 📗🌾📙 ಭಾಗ-೩೫

~ವೇದ ಪ್ರಾಮಾಣ್ಯ~

_ವೇದದ ಅಸ್ತಿತ್ವವನ್ನು ಒಪ್ಪಿದರೂ ಅದರ ಪ್ರಾಮಾಣ್ಯ ಹೇಗೆ ಒಪ್ಪಲು ಸಾಧ್ಯ? ಏಕೆಂದರೆ *ಸೃಣ್ಯೇವ ಜರ್ಭರೀ ತುರ್ಭರೀತೂ* ಮುಂತಾದ ವೇದಮಂತ್ರಗಳಿಗೆ ಅರ್ಥವೇ ಇಲ್ಲ. ಹಾಗಾಗಿ ಅರ್ಥವಿಲ್ಲದ ಮಂತ್ರಗಳು ಹೇಗೆ ಪ್ರಮಾಣವಾಗುವವು?_

_ಇದಕ್ಕುತ್ತರ- ಅರ್ಥ ಸುಲಭವಾಗಿ ತಿಳಿಯಲಿಲ್ಲ ಎಂದರೆ ಅದು ಅರ್ಥವತ್ತೇ ಅಲ್ಲ ಎಂಬ ಮೊಂಡುವಾದ ಸಲ್ಲದು. ಜರ್ಭರೀ ಅಂದರೆ ಪೋಷಿಸುವವರು, ತುರ್ಭರೀ ಎಂದರೆ ಕೊಲ್ಲುವವರು ಎಂಬ ಅರ್ಥ ನಿರುಕ್ತದಲ್ಲಿದೆ. ಹಾಗಾಗಿ ವೇದ ಮಂತ್ರಗಳಿಗೆ ಮೇಲ್ನೋಟಕ್ಕೆ ಅರ್ಥ ಅರಿಯದಿದ್ದಾಗ ಅದರ ನಿಘಂಟು ನಿರುಕ್ತವನ್ನು ಓದಬೇಕು. ಯಾವ ರೀತಿ ಮಾಘನ ಕಾವ್ಯ ಓದಲು ಸಂಸ್ಕೃತ ಭಾಷೆಯ ಬಹಳ ಪದಗಳ ಜ್ಞಾನ ಅವಶ್ಯವೋ, ಶೇಕ್ಸ್ ಪಿಯರ್ ನ ಕವಿತೆ ಅರ್ಥೈಸಿಕೊಳ್ಳಲು ಆಂಗ್ಲಭಾಷೆಯ ಆಳ ಅಧ್ಯಯನ ಅವಶ್ಯವೋ ಅದರಂತೆ ಇಲ್ಲೂ ಕೂಡ ಅಪಾರ ಅಧ್ಯಯನ ಅವಶ್ಯಕ._

_ಇರುವ ವಿಷಯವನ್ನೇ ವೇದ ಹೇಳಿದೆ. ಹೊಸತನವೇನಿಲ್ಲ. ಪ್ರಮಾಣವೆಂದಾಗಲು ಉಳಿದವುಗಳಿಂದ ತಿಳಿಯದ ವಿಷಯವನ್ನು ಇದು ತಿಳಿಸುತ್ತಿರಬೇಕು. ಏಕೆಂದರೆ *ಅನಧಿಗತಾಬಾಧಿತಾರ್ಥಬೋಧಕತ್ವಂ ಪ್ರಮಾಣತ್ವಂ* ಎಂಬ ಲಕ್ಷಣದಂತೆ ಬೇರೆ ಪ್ರಮಾಣದಿಂದ ತಿಳಿಯದಂತಿರಬೇಕು. ಆದರಿಲ್ಲಿ *ಶುಭೀಕೇ ಶಿರ ಆರೋಹ ಶೋಭಯಂತೀ ಮುಖಂ ಮಮ* ಬಾಸಿಂಗವೇ ನನ್ನ ತಲೆ ಏರಿ ಮುಖದ ಅಂದವನ್ನು ಹೆಚ್ಚಿಸು ಎಂಬ ಬಾಸಿಂಗ ಕಟ್ಟುವಾಗಿನ ಮಂತ್ರ ಗೊತ್ತಿರುವುದನ್ನೇ ಹೇಳುತ್ತಿದೆಯಲ್ಲ, ಹಾಗೆಯೇ *ಶೃಣೋತ ಗ್ರಾವಾಣೋ ವಿದುಷೋನು* ಎಂದು ಕಲ್ಲುಗಳೇ ಕೇಳಿರಿ ಎಂದು ಅಚೇತನ ವಸ್ತುವನ್ನು ಸಂಬೋಧಿಸುವುದಲ್ಲ, ಇದನ್ನು ಹೇಗೆ ಪ್ರಮಾಣವೆನ್ನಲುಸಾಧ್ಯ_

_ಬಾಸಿಂಗ ಅಥವಾ ಕಲ್ಲಿಗೆ ಹೇಳುವುದಲ್ಲ ಆ ಮಂತ್ರಗಳ ಉದ್ದೇಶ. ಪ್ರತಿಯೊಂದು ಕ್ರಿಯೆಯಲ್ಲೂ ದೈವತ್ವದ ಕಲ್ಪನೆಗೆ ಪ್ರಾರ್ಥನೆಯು ಪೂರಕ. ಪ್ರತಿಯೊಂದು ವಸ್ತುವಲ್ಲೂ ದೇವರಿರುವನೆಂದೇ ನಮ್ಮ ನಂಬಿಕೆ. ಒಂದು ಗಿಡದ ಹೂವು ಕೀಳುವಾಗಲೂ ಆ ಗಿಡದ ಬಳಿ ಬೇಡಿಕೊಳ್ಳಬೇಕಂತೆ. ಅದರಂತೆ ಇಲ್ಲೂ ಬಾಸಿಂಗದ ಅಥವಾ ಕಲ್ಲಿನ ಅಭಿಮಾನಿ ದೇವತೆಗೆ ಹೇಳಿವ ಮಾತು. ಆ ಮಂತ್ರದ ಮೂಲಕ ದೇವರ ಅನುಗ್ರಹವನ್ನು ಬಯದುವುದೇ ಮುಖ್ಯ ಉದ್ದೇಶ. ಹಾಗಾಗಿ ಯಾವ ಮಂತ್ರವೂ ನಿರರ್ಥಕವಲ್ಲ._

ಮುಂದುವರಿಯುವುದು......

📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩