ಪ್ರತಿಮಾ ನಾಟಕ
🌺 ಪ್ರತಿಮಾ ನಾಟಕದ ಒಂದು ಸುಮ 🌺
*हन्त भो: ! सत्वयुक्तानामिक्ष्वाकूणां मनस्विनाम् | वधूप्रधर्षणं प्राप्तं प्राप्यात्रभवतीं वधूम् ||*
_ಕವಿ ಒಂದೇ ವಧೂ ಎಂಬ ಪದವನ್ನು ಎರಡು ಬಾರಿ ಬಳಸಿ ಉತ್ತಮ ಧ್ವನಿಯನ್ನು ನೀಡಿದ್ದಾನೆ. ಭರತ ಕೈಕೇಯಿಯ ಬಳಿ ವ್ಯಂಗ್ಯವಾಗಿ ಹೇಳುವ ಮಾತು. ಲೋಕದಲ್ಲಿ ಅಸದೃಶ ಪರಾಕ್ರಮವುಳ್ಳ ಯಾವ ಸಂದರ್ಭದಲ್ಲೂ ಮರ್ಯಾದೆಗೆ ಅಂಜುವ ಅಥವಾ ಮಾನವಂತರಾದ ಇಕ್ಷ್ವಾಕುವಿನ ಶ್ರೇಷ್ಠ ವಂಶಜರು ನಿನ್ನಂತಹವಳನ್ನು ವಧುವಾಗಿ ತಂದು ಇಂದು ತಮ್ಮ ವಧುವನ್ನು ಅಪಹರಿಸುವುತ್ತಿರುವುದನ್ನು ನೋಡಿಯೂ ಮಾನವಂತರಾಗಿದ್ದಾರೆ! ಮಾನವಂತರಿಂದು ತಮ್ಮ ಮಾನವನ್ನು ಅಭಿಮಾನವನ್ನು ಕಳೆದುಕೊಂಡಿದ್ದಾರೆ. ಲೋಕವೀರರ ವಧುವನ್ನು ಅಪಹರಿಸುವ ಧೈರ್ಯ ತೋರುತ್ತಿರುವರೆಂದರೆ ನಮ್ಮ ಮಾನ ಎಲ್ಲಿ ಕಳೆದುಹೋಗಿದೆ? ಇದಕ್ಕೆಲ್ಲ ಕಾರಣ ನಿನ್ನಂತಹ ಮಾನವಿಲ್ಲದ ಮಾನಿನಿಯನ್ನು ವಧುವಾಗಿ ತಂದಿರುವುದೇ ಆಗಿದೆ. ನಿನ್ನ ದೆಸೆಯಿಂದಲೇ ರಾಮ ವನವಾಸಕ್ಕೆ ಹೋಗಿ ಇಕ್ಷ್ವಾಕುವಂಶದ ಸೊಸೆ ಅಪಹೃತಳಾಗಬೇಕಾಯಿತು. ಶ್ರೇಷ್ಠ ವಂಶಕ್ಕೆ ಸೊಸೆಯಾಗಿ ಬಂದ ಅವಳು ದುಷ್ಟರ ದಾಳವಾಗಬೇಕಾಯಿತು. ಛೀ ನಿನ್ನಂತಹ ವಧುಗಳನ್ನು ತಂದರೆ ಯಾರ ವಂಶಕ್ಕಾದರೂ ಇದೇ ಗತಿ! ಭರತನ ಮನದ ಭಾವ ಕವಿಯ ಮಾತಿನಲ್ಲಿ ಧ್ವನಿರೂಪದಲ್ಲಿದೆ._
📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ