ಪದಸಂಪದ೨

📝📕ಪದ ಸಂಪದ ೨📕📝

*ಸುಮನಸ*

_ಯಾರು ಒಳ್ಳೆಯ ಮನಸ್ಸುಳ್ಳವರೋ ಅವರೆಲ್ಲರೂ ಸುಮನಸರು. ಮಾನವರಾದ ನಮ್ಮ ಮನಸ್ಸು ಕೆಡುತ್ತಲೇ ಇರುತ್ತದೆ. ಹಾಗಾಗಿ ದೇವತೆಗಳು ಸುಮನಸರು. ನಾವು ಒಳ್ಳೆಯ ಮನಸ್ಸನ್ನೇ ಸದಾ ರೂಢಿಸಿಕೊಂಡರೆ ನಾವೂ ಉಳಿದವರ ಪಾಲಿಗೆ ದೇವರಾಗುವೆವು._

ಕನ್ನಡದ ಹರಿಕಥಾಮೃತಸಾರದ ಗಣಪತಿ ಸಂಧಿಯ ಈ ಪದ್ಯದಲ್ಲಿ ಈ ಪದವಿದೆ.

*ಪ್ರಾರ್ಥಿಸುವೆನೀಗ//14// ನಿತ್ಯ ಮಂಗಳ ಚರಿತ ಜಗದ ಉತ್ಪತ್ತಿ ಸ್ಥಿತಿ ಲಯ ನಿಯಮನ ಜ್ಞಾನ ತ್ರಯಪ್ರದ ಬಂಧಮೋಚಕ ಸುಮನಸ ಅಸುರರ ಚಿತ್ತ ವೃತ್ತಿಗಳಂತೆ ನಡೆವ ಪ್ರಮತ್ತನಲ್ಲ ಸುಹೃತ್ ಜನಾಪ್ತನ ನಿತ್ಯದಲಿ ನೆನೆನೆನೆದು*

ಸಂಸ್ಕೃತದ ರಸಗಂಗಾಧರದ ಈ ಮಾತಲ್ಲಿ ಈ ಪದವಿದೆ.

*“किं सेव्यते सुमनसां मनसापि गन्धः” इति रसगङ्गाधारः ।*

ನಾವೂ ಸುಮನಸರಾಗೋಣ.

ಸಂಗ್ರಹ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩