ಕಿರಾತಾರ್ಜುನೀಯ

🌸 ಕಿರಾತಾರ್ಜುನೀಯದ ಒಂದು ಸಾಯಕ 🌸

*तुषारलेखाsकुलितोत्पलाभे पर्यश्रुणी मँगलभँगभीरु: । अगूढभावापि विलोकने सा न लोचने मीलयितुं विषेहे ।।*

_ಅರ್ಜುನ ಬಹುಕಾಲ ದೂರ ಹೋಗುತ್ತಿದ್ದಾನೆ. ಅರ್ಜುನನ ವಿರಹ ಸಹಿಸಲು ಕಷ್ಟ. ಆದರೂ ಒಬ್ಬರು ಒಳ್ಳೆಯ ಉದ್ದೇಶದಿಂದ ಪ್ರಯಾಣ ಹೊರಟಾಗ ಕಣ್ಣೀರು ಸುರಿಸಿ ಕಳಿಸುವುದು ಅಮಂಗಳಕರ. ಕಣ್ಣೀರು ಒತ್ತರಿಸಿದರೂ ಮೊಗದಲ್ಲಿ ಕೃತಕ ನಗುವನ್ನಾದರೂ ತೋರಬೇಕು. ಕೃಷ್ಣೆಯ ಮುಖ ನೋಡಿದ ಯಾರಿಗಾದರೂ ಅವಳ ಭಾವದ ಬದಲಾವಣೆ ದುಃಖ ಅರ್ಥವಾಗುತ್ತದೆ. ಎಂದಿನ ಮಂದಹಾಸ, ಗೆಲುವು, ಪ್ರಸನ್ನತೆ ಕಂಡುಬರುತ್ತಲ್ಲ. ಆತಂಕ, ಬೇಸರ, ಚಿಂತೆಗಳು ಮುಖದಲ್ಲಿ ಮಡುಗಟ್ಟಿವೆ. ಆ ನಾಯಕಿಯ ಕಣ್ಣನ್ನು ಕವಿ ಕಮಲಕ್ಕೆ ಹೋಲಿಸುತ್ತಿದ್ದಾನೆ. ಮುಂಜಾನೆಯ ಮಂಜು ತುಂಬಿದ ಕಮಲದ ಕಾಂತಿ ಸ್ಪಷ್ಟವಾಗಿ ತೋರುತ್ತಿಲ್ಲ. ಮಂಜು ಕರಗಿ ಇಳಿದುಹೋದರೆ ಕಮಲ‌ ತನ್ನ ನಗು ಬೀರೀತು. ದ್ರೌಪದಿಗೆ ಉಕ್ಕಿಬರುತ್ತಿರುವ ಕಣ್ಣೀರನ್ನು ಹತ್ತಿಕ್ಕುವುದೇ ಕಷ್ಟವಾಗಿದೆ. ಆದರೆ ಒಂದು ವೇಳೆ ರೆಪ್ಪೆಗಳನ್ನು ಒಂದು ಮಾಡಿ ಅರೆಘಳಿಗೆ ಕಣ್ಣು ಮುಚ್ಚಿದರೂ ಕಣ್ಣೀರು ಇಳಿಯುತ್ತಿರುವುದು ಎಲ್ಲರ ದೃಷ್ಟಿಗೆ ಕಾಣುತ್ತದೆ. ಹಾಗಾಗಿ ಅವಳು ರೆಪ್ಪೆ ಮಿಟುಕಿಸದೇ ಕಣ್ಣೀರನ್ನು ಕಣ್ಣುಗಳಲ್ಲೇ ತಡೆದು ಅರ್ಜುನನನ್ನು ಬೀಳ್ಕೊಟ್ಟಳು. ಕಮಲದ ಕಾಂತಿ ಮೊಗದಲ್ಲೂ ತುಂಬಿದೆ. ಮಂಜಿನ ಸ್ಥಾನದಲ್ಲಿ ಒರತೆಯಿಂದ ಕಣ್ಣನ್ನು ತುಂಬುತ್ತಿರುವ ಕಣ್ಣೀರಿದೆ. ಕವಿ ಸಾಕ್ಷಾತ್ ಕಂಡವನಂತೆ ಈ ದೃಶ್ಯವನ್ನು ವರ್ಣಿಸಿದ್ದಾನೆ._

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩