ಗೋತ್ರ ಮಾಹಿತಿ

ಗೋತ್ರವನ್ನು ಹೇಳುವಾಗ *ಸ* ಕಾರವನ್ನು ಸೇರಿಸಿ ಹೇಳುವ ಪದ್ಧತಿಗೆ ಕಾರಣ ಹೀಗಿದೆ. ಭಾಸನ ಸ್ವಪ್ನವಾಸವದತ್ತ ನಾಟಕದಲ್ಲಿ ಕಂಚುಕಿಯೊಬ್ಬ ತನ್ನನ್ನು ತಾನು *ರೈಭ್ಯಸ* ಗೋತ್ರದವನೆಂದು ಪರಿಚಯ ಮಾಡಿಕೊಳ್ಳುತ್ತಾನೆ. ಆಗ ವ್ಯಾಖ್ಯಾನದಲ್ಲಿ *ರೈಭ್ಯ* ಗೋತ್ರದವನಾದರೂ  ಹೀಗೆ ಹೇಳಲು ಕಾರಣವನ್ನು ನಮೂದಿಸಿದ್ದಾರೆ. ಧರ್ಮಶಾಸ್ತ್ರದ ಮಾತಿದು-

*सकारेण  तु वक्तव्यं गोत्रं सर्वत्र धीमता । सकार: कुतुपो ज्ञेयस्तस्माद्यत्नेन तं वदेत् ।।*

_ಗೋತ್ರದ ಉಲ್ಲೇಖ ಮಾಡುವಾಗ ಸಕಾರವನ್ನು ಸೇರಿಸಿ ಉಲ್ಲೇಖಿಸಬೇಕು. ಏಕೆಂದರೆ ಸಕಾರವು ಸ್ನೇಹವನ್ನು ಸೂಚಿಸುತ್ತದೆ. ಹಾಗಾಗಿಯೇ ಅನೇಕ ಪ್ರದೇಶಗಳಲ್ಲಿ ಭಾರದ್ವಾಜಸ, ಕಾಶ್ಯಪಸ ಹೀಗೆ ಉಲ್ಲೇಖ ಮಾಡಲಾಗುತ್ತದೆ. ಇದು ಧರ್ಮಶಾಸ್ತ್ರದ ಮಾತು ಎಂದಷ್ಟೇ ಪುಸ್ತಕದಲ್ಲಿ ಇದೆ. ಯಾವ ಪುಸ್ತಕದಲ್ಲಿ ಇದೆ ಎಂಬುದು ತಿಳಿದಿಲ್ಲ._

ಸಂಗ್ರಹ : ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩