ಪದಸಂಪದ೧
📝📕ಪದ ಸಂಪದ ೧📕📝
ಕೆಲವು ಸಂಸ್ಕೃತ ಪದಗಳ ಅರ್ಥ ಅರಿಯುವ ಹಾಗೂ ಬಳಕೆಯ ಸ್ಥಳ ಗುರುತಿಸುವಹೊಸ ಲೇಖನ ಮಾಲಿಕೆ ಇಂದಿನಿಂದ ಆರಂಭ. ತಪ್ಪನ್ನು ಕೂಡಲೇ ನಮೂದಿಸಿ.
*ನಾಕ*
_ಕ ಎಂದರೆ ಸಂಸ್ಕೃತ ಭಾಷೆಯಲ್ಲಿ ಸುಖ. ಅದಕ್ಕೆ ವಿರುದ್ಧವಾದುದು ದುಃಖ. ದುಃಖ ಇಲ್ಲದ ಪ್ರದೇಶ ಅದು ನಾಕ ಅಂದರೆ ಸ್ವರ್ಗ. ವೇದದ ಉಲ್ಲೇಖ *ನಾಕೇ ಸುಪರ್ಣಮುಪಯತ್ಪತಂತಂ*. ಇಲ್ಲಿ ಗರುಡನು ಸ್ವರ್ಗದ ಕಡೆಗೆ ನೆಗೆದ ವರ್ಣನೆ ಇರಬಹುದು. ಕನ್ನಡದಲ್ಲಿ ಕುಮಾರ ವ್ಯಾಸ ಭಾರತದ ಈ ಪದ್ಯದಲ್ಲಿ ಈ ಪದ ಇದೆ- *ಕಳುಹಿಸುವುದೋಲೆಯನು ಪಾರ್ಥನ
ಬಲುಹಿನೋಲೆಯನರಿವುದಾತನ
ನೆಲೆಯನರಿದಟ್ಟುವುದು ನಾಕದೊಳುಳ್ಳವಸ್ತುಗಳ
ಹಲವು ಮಾತೇನೆಂದು ನಾರದ
ತಿಳುಹಿದೊಡೆ ಸುರನಾಥ ದೂತರ
ಕಳಹಿ ಕರೆಸಲು ಬಂದ ಖಚರ ಪ್ರಜಂಘನೆಂಬವನು.*
ನಾಕ= ಸ್ವರ್ಗ. ದೇವ ನಿವಾಸದಲ್ಲಿ ದುಃಖ ಇಲ್ಲ, ಕೇವಲ ಸುಖವೆಂಬ ನಂಬುಗೆ ಸಕಲ ಧರ್ಮೀಯರದ್ದು.
ಸಂಗ್ರಹ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ