ಸ್ವಪ್ನ ವಾಸವದತ್ತ ೯
🌼 ಸ್ವಪ್ನವಾಸವದತ್ತ ಎಸಳು-೯🌼
*गुणानां वा विशालानां सत्काराणां च नित्यश: । कर्तार: सुलभा: लोके विज्ञातारस्तु दुर्लभा: ।।*
_ಉದಯನನ ಮಾತು. ವಿದೂಷಕನು ನಿನ್ನ ಮಾವ ಮಗಧಾಧಿಪತಿ ನಿನ್ನನ್ನು ಸತ್ಕರಿಸಲು ಬಂದಿರುವನು. ಅವನನ್ನು ಆದರಿಸು ಎಂದಾಗ ಅವನಾಡುವ ಮಾತು- ಲೋಕದಲ್ಲಿ ಪರೋಪಕಾರವೇ ಮೊದಲಾದ ಕರ್ಮಗಳನ್ನು ಮಾಡುವವರು ಅಥವಾ ಪರರನ್ನು ಬಹಳ ಗೌರವದಿಂದ ಆದರಿಸುವ ವ್ಯಕ್ತಿಗಳು ಬಹಳ ಮಂದಿ ಇದ್ದಾರೆ. ಕೆಲವರು ಪುಣ್ಯದ ಅಥವಾ ಹೆಸರಿನ ಅಥವಾ ಜನಪ್ರಿಯತೆಯ ಆಸೆಯಿಂದ ಅಥವಾ ಸಹಜವಾಗಿ ಇಂತಹ ಕಾರ್ಯಗಳನ್ನು ನಡೆಸುತ್ತಾರೆ. ಇದನ್ನು ಪಡೆಯುವವರು ಅಥವಾ ಉಪಕೃತರಾದವರು ಅಂತಹ ಉಪಕಾರದ ಸ್ಮರಣೆ ಎಷ್ಟು ಜನರಿಗಿರುತ್ತದೆ! ಅಂತಹ ಗೌರವವನ್ನು ಆದರದಿಂದ ಸ್ವೀಕರಿಸುವವರು ಎಷ್ಟು ಜನ! ಅಂತಹ ವ್ಯಕ್ತಿಗಳು ದುರ್ಲಭ. ಕೆಲವೇ ಕೆಲವರು ಕೊಟ್ಟ ಗೌರವವನ್ನೂ ಪ್ರೀತಿಯಿಂದ ಸ್ವೀಕರಿಸುತ್ತಾರೆ. ಇನ್ನು ಕೆಲವರು ಅದನ್ನು ಅರಿಯುವುದೇ ಇಲ್ಲ. ನಮಸ್ಕಾರಕ್ಕೆ ಪ್ರತಿನಮಸ್ಕಾರ, ನಗುಗೆ ಪ್ರತಿನಗು, ಗೌರವಕ್ಕೆ ಪ್ರತಿಗೌರವ, ಮೃದು ವಚನಕ್ಕೆ ಕಿವಿಯಾಗುವುದು, ಸಣ್ಣ ಉಪಕಾರವನ್ನೂ ಸದಾ ಸ್ಮರಣೆ ಮಾಡುವುದು, ಗೌರವಿಸುವವರನ್ನೂ ಆದರಿಸಯವುವ ಜನ ಲೋಕದಲ್ಲಿ ತುಂಬಾ ಕಡಿಮೆ. ಕವಿ ನಾಯಕನ ಮೂಲಕ ಈ ಅಭಿಪ್ರಾಯವನ್ನು ಹೇಳಿದ್ದಾನೆ. ಪ್ರಕೃತ ಮಾವ ಪುರಸ್ಕರಿಸಲೆಂದು ಬಂದಾಗ ಅವನೆಡೆಗೆ ತಾತ್ಸಾರ ತೋರದೇ ತಾನೂ ಪ್ರೀತಿ ತೋರಿ ಮತ್ತಷ್ಟು ಗೌರವ ಪಾತ್ರನಾಗಬೇಕು. ಅದಿಲ್ಲದಿದ್ದಲ್ಲಿ ಆ ಗೌರವದ ಯೋಗ್ಯತೆ ಹೊರಟುಹೋಗುತ್ತದೆ. ಅರಿಯುವವರು ಕಡಿಮೆ ಎಂಬ ಮಾತು ಅದನ್ನೇ ಧ್ವನಿಸುತ್ತದೆ._
http://shreenidhiabhyankar.blogspot.in/
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ