ಕಿರಾತಾರ್ಜುನೀಯ

🌸 ಕಿರಾತಾರ್ಜುನೀಯದ ಒಂದು ಸಾಯಕ 🌸

*कृतानतिर्व्याहृतसान्त्ववादे जातस्पृह: पुण्यजन: स जिष्णौ । इयाय सख्याविव सम्प्रसादं विश्वासयत्याशु सतां हि योग: ।।*

_ಸಜ್ಜನರ ಸಂಗ ಕಡಿಮೆ ಸಮಯದಲ್ಲಿ ವಿಶ್ವಾಸವನ್ನು ಹುಟ್ಟಿಸುತ್ತದೆ. ಅವರ ನಡೆ ನುಡಿ  ಭಾವ ಇವುಗಳನ್ನು ಕೆಲಕಾಲ ಗಮನಿಸಿದರೆ ಅನುಮಾನಿಸಲು ಕಾರಣಗಳೇ ಸಿಗಲಾರವು. ಕನ್ನಡಿಯಂತೆ ತಿಳಿಯಾದ ಅವರ ಮನಸ್ಸಿನಲ್ಲಿ  ಕಲ್ಮಶ ಇಲ್ಲದ ಕಾರಣ ವಿಶ್ವಾಸವೂ ಬೇಗ ಉಂಟಾಗುತ್ತದೆ. ಎಲ್ಲಿ ಸಂಶಯ- ಭಯ- ವಂಚನೆಯ ಗಾಳಿ ಬೀಸುವುದೋ ಅಲ್ಲಿ ಮಾತ್ರ ವಿಶ್ವಾಸದ ದೀಪ ಬಹಳ ಕಾಲ ಉರಿಯಲಾರದು. ಪ್ರಕೃತ ವ್ಯಾಸರ ಆದೇಶದಂತೆ ಬಂದ ಯಕ್ಷನು ಅರ್ಜುನನ ಜೊತೆಗೆ ಸಂಭಾಷಿಸುತ್ತಾ ಅವನ ಮೃದುಮಧುರ ಮಾತಿನಿಂದ ವಿಶ್ವಾಸಿತನಾಗಿ ಅವನನ್ನು ಆಪ್ತ ಸಖನೆಂದೇ ಭಾವಿಸಿದನು. ವ್ಯಾಸರ ಮಾತಿನಂತೆ ಪಾರ್ಥನನ್ನು ಇಂದ್ರಕೀಲ ಪರ್ವತಕ್ಕೆ ತಲುಪಿಸಲು ಬಂದ ಕುಬೇರನ ಅನುಚರ ಅವನು‌. ಈವರೆಗೆ ಅರ್ಜುನನನ್ನು ಕಂಡದ್ದಿಲ್ಲ, ಮಾತಾಡಿದ್ದಿಲ್ಲ. ಆದರೆ ಭೇಟಿ ಮಾಡಿ ಕೆಲವು ಘಳಿಗೆಗಳಲ್ಲೇ ಇವನು ವಿಶ್ವಾಸ ಯೋಗ್ಯ ವ್ಯಕ್ತಿ ಎಂದು ನಿಶ್ಚಯಿಸಿದ ಆ ಯಕ್ಷನು ಅರ್ಜುನನಲ್ಲಿ ಮಿತ್ರಭಾವವನ್ನು ತಳೆದನು. ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ ಎಂದದ್ದು ಆ ಕಾರಣದಿಂದಲೇ ಇರಬೇಕು._

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩