ಮಹಾಭಾರತ ೬೬
🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೬೬
*ಭೂತಂ ಹಿತ್ವಾ ಭವಿಷ್ಯೇರ್ಥೆ ಯೋವಲಂಬೇತ ಮಂದಧೀಃ ಅವಮನ್ಯೇತ ತಂ ಲೋಕೋ ಯಥೇಚ್ಛಸಿ ತಥಾ ಕುರು*
_ಇತ್ತ ಕಡೆ ಮಂದಪಾಲನು ಅಗ್ನಿಯನ್ನು ಒಲಿಸಿಕೊಂಡಿದ್ದರೂ ಮಕ್ಕಳ ಬಗೆಗೆ ಚಿಂತಿಸುತ್ತಾನೆ. ಅವನೊಡನಿದ್ದ ಎರಡನೆಯ ಪತ್ನಿ ಲಪಿತೆಯು ಅವನನ್ನು ಹಂಗಿಸುವಳು. ಬೇಲಾದರೆ ನೀನು ಜರಿತೆಯ ಬಳಿಗೇ ಹೋಗಬಹುದು ಎಂದೂ ನುಡಿಯುವಳು. ಆಗ ಅವನಾಡುವ ನುಡಿ- ಪ್ರಕೃತ ಪ್ರಾಪ್ತವಾದುದನ್ನು ಬಿಟ್ಟು ಭವಿಷ್ಯದ ವಸ್ತುಗಳನ್ನು ಆಶ್ರಯಿಸುವ ಮಂದಮತಿಯನ್ನು ಲೋಕದ ಜನರು ತಿರಸ್ಕರಿಸುತ್ತಾರೆ. ಹಾಗಾಗಿ ನೀನೂ ನಿನಗಿಷ್ಟಬಂದಂತೆ ಮಾಡು. ಅವನ ಮಾತು ಎಷ್ಟು ಸಾರವತ್ತಾಗಿದೆ. ನಾವೆಲ್ಲರೂ ಪ್ರಕೃತ ಇರುವ ಸುಖವನ್ನು ಬಿಟ್ಟು ಇನ್ಯಾವುದೋ ಸುಖದ ಬಗ್ಗೆ ಚಿಂತಿಸಿ ಸಮಯವನ್ನೂ ಶಕ್ತಿಯನ್ನು ಆಯುಸ್ಸನ್ನು ಕಳೆದುಕೊಳ್ಳುತ್ತೇವೆ. *ಇರುವ ಭಾಗ್ಯವ ನೆನೆದು* ಎಂಬ ಕವಿವಾಣಿ ಮರೆತೇ ಬಿಡುತ್ತೇವೆ. ಈಗ ನಮ್ಮ ಕೈ ಕಾಲು ಇಂದ್ರಿಯ ಬುದ್ಧಿಶಕ್ತಿ ಎಲ್ಲವೂ ಸರಿ ಇದ್ದಾಗ ಅದನ್ನು ನೆನೆದಾದರೂ ಸಂತೋಷ ಹೊಂದುವುದು ಬಿಟ್ಟು ನನ್ನ ಬಳಿ ಅದಿಲ್ಲ ಇದಿಲ್ಲ ಎಂದೇ ಕೊರಗುತ್ತೇವೆ. ಎಲ್ಲವೂ ಸಿಗುವಷ್ಟರಲ್ಲಿ ನಾವೇ ಇರುವುದಿಲ್ಲ. ಎಷ್ಟೋ ಬಾರಿ ಮನೆ ಕ ಕಟ್ಟಿಸಿದ ಮರುಕ್ಷಣ ಹೃದಯಾಘಾತದಿಂದ ಮರಣ ಹೊಂದುವುದೋ, ಅಪಾರ ಯಶಸ್ಸು ಪಡೆದ ವ್ಯಕ್ತಿ ಬೇಗನೇ ಅಸುನೀಗುವುದನ್ನೋ ಲೋಕದಲ್ಲಿ ಗಮನಿಸುತ್ತಲೇ ಇರುತ್ತೇವೆ. ಆದರೂ ನಾವು ಪಾಠ ಕಲಿಯುವುದು ಕಡಿಮೆಯೇ. ಪ್ರಕೃತ ಹುಟ್ಟಿದ ಮಕ್ಕಳ ರಕ್ಷಣೆಯ ಬಗ್ಗೆ ಚಿಂತಿಸದೇ ಮುಂದೆ ಆಗುವ ಮಕ್ಕಳ ಬಗೆಗೆ ಯೋಚನೆ ಮಾಡಿದರೆ ಮೂರ್ಖರೆನ್ನುತ್ತಾರೆ. ಹಾಗಾಗಿ ನಿನಗೆ ಇಷ್ಟ ಇಲ್ಲದಿದ್ದರೂ ನಾನು ನನ್ನ ಮಕ್ಕಳ ರಕ್ಷಣೆಯ ಬಗೆಗೆ ಚಿಂತಿಸಲೇಬೇಕಾಗಿದೆ, ಅಷ್ಟಾದರೂ ನೀನು ನನ್ನನ್ನು ಬಿಡುವುದಾದರೆ ಏನು ಬೇಕಾದರೂ ಮಾಡು ಎನ್ನುತ್ತಾನೆ ಮಂದಪಾಲ._
*ನ ಸ್ತ್ರೀಣಾಂ ವಿದ್ಯತೇ ಕಿಂಚಿದನ್ಯತ್ರ ಪುರುಷಾಂತರಾತ್ ಸಾಪತ್ನಕಮೃತೇ ಲೋಕೇ ಭವಿತವ್ಯಂ ಹಿ ತತ್ತಥಾ*
_ಮಂದಪಾಲನ ತೀಕ್ಷ್ಣವಾದ ಮಾತು. ಏನೆಂದು ಮುಂದೆ ನೋಡೋಣ...._
http://shreenidhiabhyankar.blogspot.in/
🍂📕 ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ