ಪದ ಸಂಪದ ೩
📝📕ಪದ ಸಂಪದ ೩📕📝
*ಗಂಧರ್ವ*
_ಸಂಗೀತ ಹಾಗೂ ವಾದ್ಯ ನುಡಿಸುವ ಕಲೆಯನ್ನು ಹೊಂದಿರುವವರು. ಗಂಧ ಎಂಬ ಶಬ್ದಕ್ಕೆ ಸಾಮಾನ್ಯ ಅರ್ಥ ಸುವಾಸನೆ. ಸುವಾಸನೆ ಬೀರುವವರು ಎಂಬ ಅರ್ಥವೂ ಸಾಧ್ಯ. ಗಂಧ ಶಬ್ದಕ್ಕೆ ಕಲೆಗಳು ಎಂಬ ಅರ್ಥವೂ ಇದೆ. ಕಲಾವಿದರು ಎಂದೂ ಕರೆಯಬಹುದು._
*दिव्यो गन्धर्वः केतपूः”* ಯಜುರ್ವೇದದ ಈ ಮಂತ್ರವು ಗಂಧರ್ವರನ್ನು ಹೆಸರಿಸಿದೆ.
ಕುಮಾರವ್ಯಾಸನ ಭಾರತದಲ್ಲಿ ಈ ಪದ್ಯದಲ್ಲಿ ಈ ಪದವಿದೆ.
*ಅದು ಮಹಾರಮಣೀಯ ತರವಂ
ತದೊರೊಳಿದ್ದುದು ಶುದ್ಧ ಭೋಗಾಸ್ಪದರು ಯಕ್ಷೋರಕ್ಷಗಂಧರ್ವಾಪ್ಸರನಿರ
ಕುದುರೆ ರಥ ಗಜ ಪತ್ತಿ ನಿರ್ಘೋ
ಷದಲಿ ಬೆಬ್ಬಳೆಯಾಯ್ತು ಬೇಳಂ
ಬದ ವಿಘಾತಿಗೆ ಸಿಲುಕಿ ತೆತ್ತುದು ಸಕಲ ವಸ್ತುಗಳ (ಸಭಾ ಪರ್ವ, ೩ ಸಂಧಿ, ೫೩ ಪದ್ಯ)*
ಸಂಗ್ರಹ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ