ಸ್ವಪ್ನ ವಾಸವದತ್ತ ೧೩

🌼 ಸ್ವಪ್ನವಾಸವದತ್ತ ಎಸಳು-೧೧🌼 

*कातरा येsप्यशक्ता वा नोत्साहस्तेषु जायते । प्रायेण हि नरेन्द्रश्री: सोत्साहैरेव भुज्यते ।।*

_ಮಹಾಸೇನನ ಮಾತು. ಉದಯನನು ಕಳೆದುಕೊಂಡ ರಾಜ್ಯವನ್ನು ಮರಳಿ ಪಡೆದ ಘಳಿಗೆಯಲ್ಲಿ ಅವನಿಗೆ ಶುಭ ಹಾರೈಸಿ ಮಾವನಾದ ಮಹಾಸೇನನಾಡುವ ಮಾತು.   ಯಾವ ಮನುಷ್ಯರು ಹೇಡಿಗಳೂ ಹಾಗೂ ಬಲಹೀನರೋ ಅಂತಹವರಲ್ಲಿ ಅವಕಾಶಗಳು ಎಂದಿಗೂ ಹುಟ್ಟಲಾರವು. ಯಾರು ನಿರುತ್ಸಾಹಿಗಳೋ ಅಥವಾ ಕಷ್ಟವನ್ನು ಎದುರಿಸುವ ಸಹನೆ ಇಲ್ಲದೆ ಪಲಾಯನ ಮಾಡುವ ಹೇಡಿಗಳೋ, ಬಲವಿಲ್ಲವೆಂದು ಕೊರಗುತ್ತಾ ಇರುವರೋ ಅವರೆಂದೂ ಯಶಸ್ಸನ್ನು ಸಂಪಾದಿಸಲಾರರು. ಎಲ್ಲೋ ಕೆಲವು ಅಪವಾದಗಳನ್ನು ಬಿಟ್ಟು ಹೆಚ್ಚಾಗಿ ರಾಜ್ಯಲಕ್ಷ್ಮಿಯು ಉತ್ಸಾಹಿಗಳಿಂದ ಮಾತ್ರ ಅನುಭವಿಸಲ್ಪಡುತ್ತದೆ. ಯಾರು ಜೀವನೋತ್ಸಾಹವನ್ನು ಬಿಡದೆ ಸದಾ ಕಷ್ಟಗಳನ್ನು ಎದುರಿಸಲು ಸನ್ನದ್ಧರೋ ಅಂತಹ ವ್ಯಕ್ತಿಗಳು ಉನ್ನತ ಅವಕಾಶಗಳನ್ನು ಪಡೆದು ಸುಖವನ್ನು ಅನುಭವಿಸುತ್ತಾರೆ.  ಧೀರರಾಗಿ ಬಲಹೀನರಾದರೂ ಯಶಸ್ಸು ದೂರ, ಬಲಿಷ್ಠರಾಗಿ ಹೇಡಿಗಳಾದರೂ ಪ್ರಯೋಜನವಿಲ್ಲ. ಹಾಗಾಗಿ ನಿನ್ನಂತಹ ಧೀರರು, ಶಕ್ತಿವಂತರು ರಾಜ್ಯವನ್ನು ಪಡೆದದ್ದರಲ್ಲಿ ವಿಶೇಷವೇನಿಲ್ಲ. ಅದು ಸಹಜವಾಗಿ ದೊರಕುವಂತಹದ್ದು. ನಾವೂ ಕವಿಯ ಆಶಯದಂತೆ ಸದಾ ಉತ್ಸಾಹಿಗಳಾಗಿ ಜೀವನವನ್ನು ಮುನ್ನಡೆಸೋಣ._

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩