ಪದಶಕ್ತಿ ೨೦

📝📕ಪದ ಸಂಪದ ೨೦📕📝

*ವಿರೂಪಾಕ್ಷ*

_ಈ ಹೆಸರು ನೋಡಿದಾಗ ನೋಡಿದಾಗ ನಮಗನಿಸುವುದು ಏನೋ ವಿಚಿತ್ರ ಎಂದು. ವಿವಿಧಾನಿ ಅಕ್ಷೀಣಿ ಯಸ್ಯ ಸಃ ಎಂಬ ವಿಗ್ರಹದಂತೆ ಸೂರ್ಯ ಚಂದ್ರ ಅಗ್ನಿ ಎಂದು ಮೂರು ಕಣ್ಣು ಹೊಂದಿದ ಕಾರಣ ಶಿವನು ವಿರೂಪಾಕ್ಷ ಹೊರತು ಅವನ ರೂಪ ಸುಂದರವಾಗಿಯೇ ಇದೆ. ಇನ್ನೊಂದು ಅರ್ಥ ನೋಡುವುದಾದರೆ ವಿರೂಪೇಷ್ವಪಿ ಅಕ್ಷಿ ಅಂದರೆ ಲೋಕನಿಂದ್ಯರಾದ ವಿಕಲಾಂಗರು ಕುಂಟ ಹೆಳವ ಕುರುಡ ಮೊದಲಾದವರಲ್ಲೂ ಕೃಪಾದೃಷ್ಟಿ ಬೀರಿ ಅವರ ಮನದ ವಿಶ್ವಾಸ ಹೆಚ್ಚಿಸಿ ಸಾಧಿಸಲು ಪ್ರೇರಣೆ ಕೊಡುವ ದೇವನಿವನು. *ಅನಲಾಕ್ಷ ನಿನ್ನ ಪ್ರೇರಣೆಯಿಲ್ಲದೆ* ಎಂಬ ಮಾತೂ ಇದನ್ನೇ ಸಾರುವುದು. ಮತ್ತೊಂದು ಅರ್ಥ ವಿವಿಧ ಇಂದ್ರಿಯಗಳಲ್ಲಿ ನೆಲೆಸಿರುವವನು ಅಥವಾ ಕರ್ಮಸಾಕ್ಷಿಯಾಗಿ ನಾನಾ ಇಂದ್ರಿಯಗಳಿಂದ ವೀಕ್ಷಿಸುವವನು. ಹೀಗೆ ವಿರೂಪಾಕ್ಷ ಎಂದರೆ ಕಣ್ಣು ಹಾಗೂ ಇಂದ್ರಿಯದ ಸಂಬಂಧಿ ದೇವತೆ ಶಿವ. ನಮ್ಮ ಇಂದ್ರಿಯಗಳು ದಾರಿ ತಪ್ಪದಂತೆ ಕಡಿವಾಣ ಹಾಕಲೆಂದು ಆ ವಿರೂಪಾಕ್ಷನೊಳು ಪ್ರಾರ್ಥಿಸೋಣ._

ಕನ್ನಡ ಹಾಗೂ ಸಂಸ್ಕೃತ ಸಾಹಿತ್ಯದ ಹಲವೆಡೆ ಈ ಪದವಿದೆ.

*वपुर्व्विरूपाक्षमलक्ष्यजन्मता दिगम्बरत्वेन निवेदितं वसु*

ಕಾಳಿದಾಸನ ಕುಮಾರಸಂಭವದ ಮಾತಿದು. ಶಿವನ ವರ್ಣನೆಯ ಸಂದರ್ಭದ ಮಾತು.

*ಹರನಂ
ಶಂಕರನಂ
ಶಶಾಂಕಧರನಂ
ಕಾಪಾಲಿಯಂ ಕಾಲನಂ ಹರನಂ ಶೂಲಿಯನೀಶನಂ
ಗಿರೀಶನಂ ಭಾಳಾಕ್ಷ ನಂ ನೀಲಿಕಂ
ಧರನಂ ಭರ್ಗನನುಗ್ರನಂ ಪರಮಾನಂ
ಸರ್ವಜ್ಞನಂ ಶಂಭುವಂ   ಗಿರಿಜಾವಲ್ಲಭನಂ
ಮನೋಜಹರನಂ  ಕಂಡೆಂ  ವಿರೂಪಾಕ್ಷನಂ*

ಕನ್ನಡದ ಪ್ರಸಿದ್ಧ ಕವಿ ಹರಿಹರನ ಶತಕಕಾವ್ಯದ ಒಂದು ಸಾಲಿದು. ಶಿವನನ್ನು ಬಗೆಬಗೆಯಾಗಿ ಸ್ತುತಿಸಿದ್ದಾನೆ ಹರಿಹರ.

ಸಂಗ್ರಹ. ಶ್ರೀನಿಧಿ ಅಭ್ಯಂಕರ್

ಎಲ್ಲಾ ಲೇಖನಗಳಿಗಾಗಿ ವೀಕ್ಷಿಸಿ http://shreenidhiabhyankar.blogspot.in/

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩