ಪದಶಕ್ತಿ

📝📕ಪದ ಶಕ್ತಿ ೧೪📕📝

*ಮದನ*

_ಮದನ ಎಂದರೆ *ಮದ* ವನ್ನು ಉಂಟುಮಾಡುವ ವಿಷಯ. ಮನ್ಮಥ ಈ ಪದದ ಪ್ರಸಿದ್ಧ ಅರ್ಥ. ಮನ್ಮಥನು ತನ್ನ ಮನದಿಚ್ಛೆಯಂತೆ ಜನರ ವಿಷಯಾಸಕ್ತಿಯನ್ನು ಜಾಗೃತ  ಗೊಳಿಸುವ ಕಾರ್ಯ ಮಾಡುವ ಕಾರಣ. ಆಸಕ್ತಿ ಬಂದ‌‌ ಕೂಡಲೇ ಜನರು ಮದವೇರಿದಂತೆ ಪ್ರವೃತ್ತಿ ಮಾಡುತ್ತಾರೆ. ಮತ್ತು ತರಿಸುವ ಮದ್ಯವೂ ಮದನವೇ ಆಗಿದೆ. ವಸಂತ ಕಾಲದಲ್ಲಿ ಪ್ರಾಕೃತಿಕ ಬದಲಾವಣೆಯು ನರರ ಮನಸ್ಸಿನಲ್ಲಿ ಮದವೇರಿಸುವ ಕಾರಣ ಅದೂ ಮದನ. ಭ್ರಮರದ ಝೇಂಕಾರವು ಮನದ ಸುಪ್ತ ಆಸಕ್ತಿ ಬಡಿದೆಬ್ಬಿಸುವ ಕಾರಣ ಅದೂ ಮದನ. ಇನ್ನು ಅನೇಕ ಜಾತಿಯ ವೃಕ್ಷಗಳ ಕುಸುಮಗಂಧವು ಜನರ ವಾಸನೆಯನ್ನು ಉತ್ತೇಜಿಸುವ ಕಾರಣ ಅವುಗಳೂ ಮದನ. ಖದಿರ ಬಕುಲ ಮೊದಲಾದವು. ಕೊನೆಯದಾಗಿ ಪ್ರಿಯೆಯ ಅಥವಾ ಪ್ರಿಯಳ ಆಲಿಂಗನದ ಮತ್ತು ತಿಳಿದವರಾರು. ಆದೂ ಮದನ. ಹೀಗೆ ಮತ್ತೇರಿಸುವ ಸಂಗತಿಗಳೆಲ್ಲವೂ ಮದನ ಶಬ್ದದ ಪರ್ಯಾಯಗಳೇ ಆಗಿವೆ._

ಸಾಹಿತ್ಯದ ಹಲವು ಕಡೆ ಈ ಪದದ ಬಳಕೆ ನೊಡಬಹುದು.

*ಸಖಿಯರ ಮಾತು ಹೇಗಿತ್ತು?
ಎಲವೊಮಟ್ಟಿಯಮದನದರ್ಬೆಯತಿಲದ ಮನ್ಮಥವಿಮಲಧೋತ್ರದ
ತಳಿರುಗಾಸೆಯ ಕಾಮ ಕೃಷ್ಣಾಜಿನದ ಕಂದರ್ಪ
ನಳಿನಮುಖಿಯನು ವರಿಸು ಬಾ ನಿನಗಳವಡುವನೆಲೆಯಕ್ಕ ಕೇಳೌತಲೆವಿಡಿವೆವಾವ್ನೋಡುಯೆಂದರು ನಗುತ ಚಪಲೆಯರು (ಆದಿ ಪರ್ವ, ೧೫ ಸಂಧಿ, ೨೧ ಪದ್ಯ)*

ಕುಮಾರವ್ಯಾಸನ ಈ ಪದ್ಯದಲ್ಲಿ  ಅರ್ಜುನನು ಬ್ರಾಹ್ಮಣ ವೇಷದಲ್ಲಿ ಬರುತ್ತಿದ್ದಾಗ ದ್ರೌಪದಿಯ ಸಖಿಯರು ಅವನನ್ನು ವರ್ಣಿಸುವ ಪರಿ ಇದು. ಮನುಮಥನೇ ಧರೆಗಿಳಿದು ಬಂದಂತೆ ಅರ್ಜುನನು ಬಂದು ಎಂದು.

ಸಂಗ್ರಹ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩