ವಿಶಿಷ್ಟ ಶ್ಲೋಕಗಳು ೨

*ಸಂಸ್ಕೃತ ಸಾಹಿತ್ಯದ ಕೆಲವು ವಿಶಿಷ್ಟ ಶ್ಲೋಕಗಳು* ಭಾಗ  3

*चितित्सकान् देवलकान् मांस विक्रयिणस्तथा । विपणेन च जीवन्तोवर्ज्या: स्युर्हव्यकव्ययो: ॥*

   _ಇದೊಂದು ಶಾಸ್ತ್ರೀಯ ವಿಚಾರದ ಶ್ಲೋಕ. ಹವ್ಯ ಕೊಡುವ ಕರ್ಮಗಳು ಎಂದರೆ ಹೋಮ ಹವನಗಳು. ಕವ್ಯ ಎಂದರೆ ಪಿತೃಕರ್ಮಗಳು. ಈ ಕರ್ಮಗಳಲ್ಲಿ ಯಾವ ಯಾವ ಬ್ರಾಹ್ಮಣರನ್ನು ಆಹ್ವಾನಿಸಬಹುದೆಂಬುದಕ್ಕೆ ಪ್ರಮಾಣ ರೂಪದ ಶ್ಲೋಕ. ದೇವ ಅಥವಾ ಪಿತೃ ಕರ್ಮಗಳಲ್ಲಿ ಅಚಾರ ಶುದ್ಧಿಗೆ ಹೆಚ್ಚು ಮಹತ್ವ. ವಿಪ್ರರಲ್ಲಿ ಯಾರು ಚಿಕಿತ್ಸೆಯೇ ಮೊದಲಾದ ವೈದ್ಯ ವೃತ್ತಿಯನ್ನು  ಅನುಸರಿಸುತ್ತಾರೋ ಅಂತಹವರು ತಮ್ಮ ಅನವರತ ಕಾರ್ಯಬಾಹುಳ್ಯದ ಕಾರಣ ನಿತ್ಯಕರ್ಮಗಳಲ್ಲಿ ನಾನಾ ಆಚಾರಗಳಲ್ಲಿ ಲೋಪ ಮಾಡಿಕೊಂಡಿರುವ ಸಾಧ್ಯತೆ ಇರುವ ಕಾರಣ ಅವರನ್ನು ಕರೆಯಬಾರದು. ದೇವಪೂಜಕರನ್ನು ಕರೆದರೆ ಅವರು ತಮ್ಮ ಕರ್ತವ್ಯವನ್ನು ಚುಟುಕುಗೊಳಿಸಿ ಅಲ್ಲಿನ ಭಕ್ತರ ಪೂಜೆ ಮೊದಲಾದವುಗಳ ಲೋಪ ಮಾಡಿ ಬರುವ ಸಂಭವವಿರುತ್ತದೆ. ಹಾಗಾಗಿ ಅನಿವಾರ್ಯ ಸ್ಥಿತಿ ಬಿಟ್ಟು ಅವರನ್ನು ಕರೆಯಬಾರದು. ಇನ್ನು ಮಾಂಸ ಮಾರಾಟ ಮಾಡುವವರು ಪ್ರಾಮಾಣಿಕರಾಗಿದ್ದರೂ ವೃತ್ತಿಯ ದೃಷ್ಟಿಯಿಂದ ಅಂದರೆ ಹಿಂಸೆಯ ಪ್ರೋತ್ಸಾಹದ ಕಾರಣ ಅವರು ತ್ಯಾಜ್ಯರು. ಇನ್ನು ವ್ಯಾಪಾರಿಗಳು ಒಂದಷ್ಟು ಲಾಭದ ಆಸೆಯನ್ನು ಇಟ್ಟುಕೊಂಡೇ ತಮ್ಮ ವೃತ್ತಿ ನಡೆಸುತ್ತಾರೆ. ವಂಚನೆಯ ಅವಕಾಶ ಹೆಚ್ಚಿರುವ ಕಾರಣ ಅವರೂ ಹವ್ಯ ಕವ್ಯಗಳಿಗೆ ಕರೆಯಲು ಅರ್ಹರಲ್ಲ._

http://shreenidhiabhyankar.blogspot.in/

ಸಂಗ್ರಹ ಶ್ರೀನಿಧಿ ಅಭ್ಯಂಕರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩