ಧಾರ್ಮಿಕ ಆಚರಣೆ೧೫

🌹📝 ಧಾರ್ಮಿಕ ಆಚರಣೆಗಳು 📗🌺
ಭಾಗ-೧೫

*ತಿಲಕ*

*ಕರ್ಮ ವರ್ಣಾಶ್ರಮಾಣಾಂ ಸ್ಯಾತ್ ದೈವಂ ಪೈತ್ರಂ ನ ತತ್ಫಲಮ್, ಸ್ನಾನಂ ಸಂಧ್ಯಾಂ ಪಂಚಯಜ್ಞಾನ್ ಪೈತ್ರಂ ಹೋಮಾದಿ ಕರ್ಮ ಯಃ ವಿನಾ ತಿಲಕ ದರ್ಭಾಭ್ಯಾಂ ಕುರ್ಯಾತ್ತನ್ನಿಷ್ಫಲಂ ಭವೇತ್*

_ಎಲ್ಲಾ ವರ್ಣದವರೂ ಎಲ್ಲಾ ಆಶ್ರಮದವರೂ ( ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರ, ಬ್ರಹ್ಮಚರ್ಯ ಗೃಹಸ್ಥ ವಾನಪ್ರಸ್ಥ ಸನ್ಯಾಸ) ದೇವ ಸಂಬಂಧಿ ಕಾರ್ಯವಾಗಲಿ, ಪಿತೃ ಸಂಬಂಧಿ ಶ್ರಾದ್ಧಾದಿಗಳಾಗಲಿ ಅಥವಾ ಪಂಚಮಹಾಯಜ್ಞಗಳಾದ ದೇವಪೂಜೆ-ಸ್ವಾಧ್ಯಾಯ- ಬಲಿದಾನ- ವೈಶ್ವದೇವ- ಅತಿಥಿ ಸತ್ಕಾರ- ಪಿತೃತರ್ಪಣ ಮೊದಲಾದ ಸಕಲ ಕಾರ್ಯಗಳನ್ನು ನಡೆಸುವಾಗಲೂ, ಕಾಮ್ಯ ಕರ್ಮಗಳಾದ ಹೋಮಾದಿ ನಡೆಸುವಾಗಲೂ ತಿಲಕ ಧರಿಸದೇ ಹೋದರೆ ಪ್ರಯೋಜನವಿಲ್ಲ. ಹಾಗಾಗಿ ಪ್ರತಿಯೊಂದು ಕಾರ್ಯದ ಮೊದಲು ಹಣೆಯ ಮೇಲೆ ಪವಿತ್ರವೆನಿಸಿದ ಏನನ್ನಾದರೂ ಧರಿಸಲೇಬೇಕು. ಎಲ್ಲಿ ಎಲ್ಲಾ ಬಗೆಯ ವಸ್ತುಗಳ ಅಭಾವ ಇದೆಯೋ ಅಲ್ಲಿ ಮಾತ್ರ ನೀರಿನಿಂದಲೇ ತಿಲಕ ಧರಿಸಬಹುದೇ ಹೊರತು ಆಲಸ್ಯದಿಂದಲ್ಲ._

*ದ್ವಾದಶಾಂಗೇ ಲಲಾಟಾದೌ ತಿಲಕಂ ಹರಿಮಂದಿರಮ್ ಸ್ನಾನಾಂತೇ ವೈಷ್ಣವೋ ಕುರ್ಯಾತ್ ಪ್ರತ್ಯೇಕಂ ಹರಿನಾಮಭಿಃ, ಶಿವಾಗಮೇ ದೀಕ್ಷಿತೈಸ್ತು ಧಾರ್ಯಂ ತಿರ್ಯಕ್ ತ್ರಿಪುಂಡ್ರಕಮ್ ವಿಷ್ಣ್ವಾಗಮೇ ದೀಕ್ಷಿತಸ್ತು ಊರ್ಧ್ವಪುಂಡ್ರಂ ವಿಧಾರಯೇತ್*

_ವೈಷ್ಣವರು ಕೇಶವಾದಿ ದ್ವಾದಶ ನಾಮಗಳಿಂದ ದೇಹದ ಹನ್ನೆರಡು ಅಂಗಗಳಲ್ಲಿ ಮೇಲ್ಮುಖ ನಾಮವನ್ನು, ಶೈವರು ಸದ್ಯೋಜಾತಾದಿ ಪಂಚ ನಾಮಗಳಿಂದ ಅಡ್ಡ ನಾಮಗಳನ್ನೂ ಧರಿಸಬೇಕೆಂದು ಪದ್ಮಪುರಾಣ ಹೇಳುತ್ತದೆ. ಹಣೆ ಮೇಲೆ ಸಣ್ಣದಿರಲಿ ಎಲ್ಲರಿಗೂ ಕಾಣುವಂತಿರಲಿ ತಿಲಕ ಧರಿಸುವುದಕ್ಕೆ ಮಹತ್ವ ಹೊರತು ಅದರ ಗಾತ್ರ ಅಥವಾ ಆಕಾರಕ್ಕಲ್ಲ. ಊರ್ಧ್ವಪುಂಡ್ರವನ್ನು ಧರಿಸುವಾಗ ಮಧ್ಯದಲ್ಲಿ ಅವಕಾಶ ಬಿಡಬೇಕೆನ್ನುತ್ತದೆ ಶಾಸ್ತ್ರ. ಆಂಗ್ಲ ಭಾಷೆಯ ಯು ಆಕಾರದಲ್ಲಿ ಊರ್ಧ್ವಪುಂಡ್ರವನ್ನು ಧರಿಸಬೇಕು. ಆ ಮಧ್ಯದ ಜಾಗವು ವಾತಾವರಣದ ಧನಾತ್ಮಕ ಶಕ್ತಿಯನ್ನು ತಿಲಕದ ಮೂಲಕ ಸೆಳೆದು ಮನದ ಪ್ರಸನ್ನತೆಗೆ ಕಾರಣವಾಗುತ್ತದೆ. ದೇಹಾಭಿಮಾನ ಬಿಟ್ಟರೂ ವಸ್ತ್ರ ಆಹಾರ ಹೇಗೆ ಸ್ವೀಕರಿಸುವೆವೋ ಅಂತೆಯೇ ಭಕ್ತಿ ತುಂಬಿ ತುಳುಕುತ್ತಿದ್ದರೂ ಧರ್ಮಸಂಬಂಧಿ ಆಚರಣೆಗಳು ಅವಶ್ಯವಾಗಿ ಮಾಡಬೇಕು. ತಿಲಕ ಧರಿಸಿ ತಿಲದಷ್ಟಾದರೂ ಪಾಪಮುಕ್ತರಾಗೋಣ._

http://shreenidhiabhyankar.blogspot.in/
ವಿಷಯಗಳ ಮೂಲ ಲೇಖಕರಿಗೆ ಅನಂತ ಪ್ರಣಾಮಗಳು.

ಸಂಗ್ರಹ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩