ಧಾರ್ಮಿಕ ಆಚರಣೆ ೧೩

🌹📝 ಧಾರ್ಮಿಕ ಆಚರಣೆಗಳು 📗🌺
ಭಾಗ-೧೩

*ತಿಲಕ*

_ಮುಖದಲ್ಲಿ ಒಂದು ಬಗೆಯ ಕಾಂತಿಯನ್ನು ಉಂಟು ಮಾಡುವ ಲೇಪನ. *ತಿಲ ಸ್ನೇಹನೇ* ಎಂಬ ಧಾತುವಿನಿಂದ ಹುಟ್ಟಿದ ಪದ. ಅಂಟಿಕೊಳ್ಳುವ ವಿಷಯ. ಎಳ್ಳಿಗೂ ಅಷ್ಟು ಅಂಟಾದ ಕಾರಣ ಈ ಹೆಸರು. ಧಾರ್ಮಿಕ ಆಚರಣೆಗೂ ಇದಕ್ಕೂ ಏನಪ್ಪಾ ಸಂಬಂಧ ಎಂದು ಯೋಚಿಸದಿರಿ. ನಾವು ಮಾಡುವ ಪ್ರತಿಯೊಂದು ಕರ್ಮದ ಆದಿಯಲ್ಲಿ ತಿಲಕ ಇಟ್ಟುಕೊಂಡು ಆರಂಭಿಸಬೇಕು.  ಹಾಗಿಲ್ಲದೆ ಹೋದರೆ ವ್ಯರ್ಥವಾದೀತೆನ್ನುತ್ತದೆ ಪುರಾಣದ ಈ ಶ್ಲೋಕ._

*ಸ್ನಾನಾಂತೇ ಸರ್ವವರ್ಣಾನಾಮಾಶ್ರಮಾಣಾಂ ತಥೈವ ಚ, ಕಾಮ್ಯಂ ನೈಮಿತ್ತಿಕಂ ನಿತ್ಯಂ ಯತ್ ಕಿಂಚಿತ್ ಕರ್ಮ ನಾರದ ವರ್ಣಾಶ್ರಮಾಣಾಂ ತನ್ನಾಸ್ತಿ ಸ್ನಾನಾಂತೇ ತಿಲಕಂ ವಿನಾ*

_ಮಿಂದು ಸಿದ್ಧನಾದ ಪ್ರತಿಯೊಬ್ಬ ವ್ಯಕ್ತಿಯೂ (ಸ್ತ್ರೀ-ಪುರುಷ) ವರ್ಣ ಆಶ್ರಮ ಭೇದವಿಲ್ಲದೆ ತನ್ನ ಹಣೆಯ ಮೇಲೆ ಸಣ್ಣ ಬೊಟ್ಟನ್ನಾದರೂ ಇಟ್ಟುಕೊಳ್ಳಬೇಕು. ನಮಗೇನು ಬ್ರಾಹ್ಮಣರು ಧರಿಸುತ್ತಾರೆ ಅಥವಾ ಅರ್ಚಕರು, ಅಥವಾ ಸ್ವಾಮಿಗಳು ಧರಿಸುತ್ತಾರೆ ಎಂಬ ಆಲಸ್ಯ ಸಲ್ಲದು. ನೀವು ಯಾವ ವರ್ಣದವರೇ ಆಗಿರಲಿ ಯಾವ ಆಶ್ರಮದಲ್ಲೇ ಇರಲಿ( ಗೃಹಸ್ಥ ಸನ್ಯಾಸ ಮೊದಲಾದವು) ಸ್ನಾನ ಮಾಡಿ ತಿಲಕ ಇಟ್ಟುಕೊಳ್ಳಬೇಕು. ನಮ್ಮ ದೇಹದಲ್ಲಿ ಇರುವ ಏಳು ಚಕ್ರಗಳಲ್ಲಿ ಆಜ್ಞಾ ಚಕ್ರವೂ ಒಂದು. ಹುಬ್ಬಿನ ಮಧ್ಯದಿಂದ ಹಣೆಯ ಮಧ್ಯದ ವರೆಗೆ ಚಾಚಿ ನಿಂತಿದೆ ಈ ಚಕ್ರ. ಮನದ ಆಜ್ಞೆಗಳನ್ನು ನಿರ್ವಹಿಸುವುದು ಇದೇ ಚಕ್ರ. ಮನಕ್ಕೆ ಆಜ್ಞೆ ಕೊಡುವುದೂ ಇದೇ. ಆ ಚಕ್ರವು ಶುದ್ಧವಾಗಿದ್ದಾಗ ನಮ್ಮ ಮನವೂ ಶುದ್ಧವಾಗಿ ಕಾರ್ಯಗಳೂ ಶುದ್ಧವಾಗುತ್ತವೆ. ಒಳ್ಳೆಯ ವಿಚಾರಗಳನ್ನು ಪ್ರಚೋದಿಸಲು ಈ ತಿಲಕವು ಸಹಕಾರಿ ಆಗುತ್ತದೆ. ಹಾಗಾಗಿಯೇ ಕೆಲವೊಮ್ಮೆ ಕೆಲವರಿಗೆ ತಿಲಕಧಾರಿಗಳ ದರ್ಶನ ಹೆದರಿಕೆ ಹುಟ್ಟಿಸಬಹುದು. ಯಾವುದನ್ನು ತಿಲಕವೆಂದು ಧರಿಸಬಹುದು, ಯಾವುದು ನಿಷಿದ್ಧ ಮೊದಲಾದ ವಿಷಯಗಳ ಬಗೆಗೆ ಮುಂದೆ ನೋಡೋಣ. ನಮಸ್ಕಾರ._

http://shreenidhiabhyankar.blogspot.in/
ವಿಷಯಗಳ ಮೂಲ ಲೇಖಕರಿಗೆ ಅನಂತ ಪ್ರಣಾಮಗಳು.

ಸಂಗ್ರಹ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩