ರಾಮಾಯಣ ೧೧೬
📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೧೧೬
*ನಿವೃತ್ತಕಂಠೋರುಭುಜೋ ವಿಕ್ಷರನ್ ರುಧಿರಂ ಬಹು ರುದ್ಧ್ವಾ ದ್ವಾರಂ ಶರೀರೇಣ ಲಂಕಾಯಾಃ ಪರ್ವತೋಪಮಃ* *ಅಗಂಡಭೂತೋ ವಿಕೃತೋ ದಾವದಗ್ಧ ಇವ ದ್ರುಮಃ*
_ಕುಂಭಕರ್ಣನ ಮರಣದ ನಂತರ ಸೈನಿಕರಾಡುವ ಮಾತು. ರಾವಣ, ಅವನ ಅರ್ಧದೇಹ ಸಮುದ್ರ ಸೇರಿತು. ಕುತ್ತಿಗೆ ತೋಳು ತೊಡೆ ಕತ್ತರಿಸಿ ಹೋದವು. ರಕ್ತಸ್ರಾವ ಭೀಕರವಾಯಿತು. ಪರ್ವತಾಕಾರನಾದ ಅವನ ದೇಹದ ಒಂದು ಭಾಗ ಲಂಕೆಯ ದ್ವಾರಕ್ಕೆ ಅಡ್ಡಲಾಗಿ ಬಿದ್ದಿತು. ಹಿಂದೆ ಆಂಜನೇಯನು ಪ್ರವೇಶಿಸುವಾಗ ಲಂಕಿಣಿಯು ಅವನಿಗೆ ಅಡ್ಡಲಾಗಿ ನಿಂತು ತಡೆದಿದ್ದಳು. ಅವಳ ದೇಹವೂ ಬೃಹತ್ತಾಗಿತ್ತು. ಕುಂಭಕರ್ಣನ ಶರೀರದ ಅರ್ಧಭಾಗವೇ ದ್ವಾರ ಮುಚ್ಚುವಷ್ಟು ಎಂದರೆ ಸಂಪೂರ್ಣ ದೇಹ ಎಷ್ಟು ವಿಸ್ತೀರ್ಣವಾಗಿತ್ತೋ ಏನೋ! ಸ್ವಾಮಿ, ರಾಮನ ಶರಗಳು ನಿನ್ನ ಸೋದರನ ಕೈ ಕಾಲು ತಲೆ ಕಡಿದು ಒಂದು ಕಬಂಧವನ್ನಾಗಿ ಮಾಡಿದವು. ಕಾಳ್ಗಿಚ್ಚಿನಿಂದ ಸುಟ್ಟ ಮರದಂತೆ ಕುಂಭಕರ್ಣನು ರಾಮಬಾಣಕ್ಕೆ ಸುಟ್ಟುಹೋದನು. ವಾಲ್ಮೀಕಿಗಳ ಉಪಮೆ ಇಲ್ಲಿ ಚೆನ್ನಾಗಿದೆ. ಒಂದು ಮರದ ರೆಂಬೆ ಕೊಂಬೆಗಳನ್ನು ಕಡಿದು ಬೋಳು ಮಾಡಿದಂತೆ ಕುಂಭಕರ್ಣನ ದೇಹದ ಸ್ಥಿತಿಯಾಗಿತ್ತು. ಇನ್ನೊಂದು ಉಪಮೆ ಕಾಡ್ಗಿಚ್ಚಿನಲ್ಲಿ ಸುಟ್ಟು ಕರಕಲಾಗಿ ಇದು ಯಾವ ಮರವೆಂದು ಗುರುತಿಸಲೂ ಸಾಧ್ಯವಾಗದಂತಹ ಸ್ಥಿತಿಗೆ ಕುಂಭಕರ್ಣನು ತಲುಪಿದ್ದಾನೆ. ಅಲ್ಲಲ್ಲಿ ಬಿದ್ದ ದೇಹದ ಭಾಗಗಳನ್ನು ನೋಡಿ ಗುರುತಿಸುವ ಹೀನಾಯ ಸ್ಥಿತಿಗೆ ತಲುಪಿದ್ದಾನೆ. ದೇಹಬಲ ಪರಾಕ್ರಮ ವರ ಏನಿದ್ದರೆ ಏನು ಪ್ರಯೋಜನ? ಧರ್ಮದ ದಾರಿಯಲ್ಲಿ ಸಾಗದೆ ಉಳಿದ ಮನದಿಂದ_
http://shreenidhiabhyankar.blogspot.in/
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ