ಪದಶಕ್ತಿ ೨೧

📝📕ಪದ ಸಂಪದ ೨೧📕📝

*ತ್ರ್ಯಂಬಕ*

_ತ್ರ್ಯಂಬಕಂ ಯಜಾಮಹೇ ಎಂಬ ರುದ್ರನ ಪ್ರಸಿದ್ಧ ಸ್ತೋತ್ರದ ಆದಿಯಲ್ಲಿ ಬರುವ ಹೆಸರು‌. ಅಂಬಕ ಶಬ್ದವು ಬೇರೆಬೇರೆ ಅರ್ಥಗಳನ್ನು ಪಡೆದಿರುವ ಕಾರಣ ದೇವನಾದ ಶಿವನ ವಿಷಯದಲ್ಲೂ ನಾನಾರ್ಥಗಳನ್ನು ಈ ಪದ ತಿಳಿಸುತ್ತದೆ‌. ಸೂರ್ಯ, ಚಂದ್ರ, ಅಗ್ನಿ ಎಂಬ ಮೂರು ನಯನಗಳನ್ನು ಹೊಂದಿರುವ ಕಾರಣ ಶಿವನು ತ್ರಿ-ಅಂಬಕ. ಮೂರು ಲೋಕಗಳ ತಂದೆಯಾದ ಕಾರಣ ತ್ರಿ-ಅಂಬಕ. ಮೂರು ವೇದಗಳಿಂದ ಪ್ರತಿಪಾದ್ಯನಾದವನು ಎಂಬ ಅರ್ಥದಲ್ಲಿ ತ್ಯ್ರಂಬಕ. ಮೂರು ಲೋಕಗಳಲ್ಲೂ ಮೂರು ಕಾಲಗಳಲ್ಲೂ ( ಭೂತ ವರ್ತಮಾನ ಭವಿಷ್ಯ) ವೇದರೂಪದಲ್ಲಿ ಅಥವಾ ಶಬ್ದರೂಪದಲ್ಲಿ ನೆಲೆಸಿರುವ ದೇವನಾದ ಕಾರಣ ತ್ರಿ- ಅಂಬಕ. ಅಕಾರ-ಉಕಾರ-ಮಕಾರ ಗಳ ಸಮೂಹವಾದ ಓಂಕಾರ ಪ್ರತಿಪಾದ್ಯನಾದ ಕಾರಣ ತ್ರ್ಯಂಬಕ. ಪೃಥ್ವಿ, ಅಂತರಿಕ್ಷ, ದ್ಯುಲೋಕಗಳೆಂಬ ಮೂರು ಸ್ಥಾನಗಳು ಯಾರಿಗೆ ಉಂಟೋ ಅವನೇ ತ್ರ್ಯಂಬಕ. ಏಕಾದಶ ರುದ್ರರಲ್ಲಿ ಒಬ್ಬ. ಹೀಗೆ ಶಿವನ ವಿಶಿಷ್ಟತೆಯನ್ನು ಈ ಶಬ್ದ ಸುಂದರವಾಗಿ ಸಾರುತ್ತದೆ._

ಸಾಹಿತ್ಯದ ಹಲವೆಡೆ ಇದರ ಬಳಕೆ ಕಾಣಬಹುದು.

*“जड़ीकृतस्त्र्यम्बकवीक्षणेन” महेश्वरस्त्र्यम्बक एव नापरः” रघुः* ಕಾಳಿದಾಸನ ರಘುವಂಶದ ಈ ಮಾತು ಶಿವನ ಮಹಿಮೆ ಸಾರುತ್ತದೆ.

*ಧೀರ ಕುಮಾರ ಮಾರಾವತಾರ
ಪಾಹಿ ತ್ರ್ಯಂಬಕನ ಕುಮಾರನಿನ್ನಲಿ ದೇವಸೈನ್ಯದ ಭಾರ ಗಿರಿಜಾದೇವಿಯ ಮೋಹದ ಕುವರ ಪೊರೆಯೊ ಎನ್ನನು ಕರುಣಾಸಾಗರ ಅಮರಸೇನೆಗೆ ನೀನಗ್ರೇಸರ*

ವಿಶ್ವೇಂದ್ರತೀರ್ಥರ ಈ ಕೀರ್ತನೆಯಲ್ಲಿ ಷಣ್ಮುಖನನ್ನು ಪೊಗಳುತ್ತಾ ತ್ರ್ಯಂಬಕಕುಮಾರನೆಂದು ಸ್ತುತಿಸಿದ್ದಾರೆ.

ಅರ್ಪಕಮಂದರಸರ್ಪವಿಭೂಷಣ ಕರ್ಪುರಕಾಯ ಗುಹಗಣಪತಿಪಿತ ಗಜಮಥನವೃಷವಾಹನಪೂಜಕ ವಾಹಿನಿಪಾಲತ್ರ್ಯಂಬಕ ದುರಿತಕದಂಬ ನಿವಾರಕಸಾಂಬಸದಾಶಿವ ಅಂಬರಕೇಶ ಕಪಟಿ ಜನಾರ್ದಕ ತಪನನಿಚಯಧುತೆತ್ರಿಪುರಾಂತಕ ಭವವಿಪಿನಕೃಶಾನೊ ಪ್ರಮಥಜನಾರ್ಥಿತ ಅಮಿತ ದಯಾನಿಧೆಸುಮತಿ ಕುಲೇಶ್ವರ ಕುಮತಿಖಳಾರೆ ಕರುಣಾಕರ ಸುಖಕರಣಭುವನನುತಚರಣಯುಗಳ ಖಳವಾರಣ ಪ್ರಹರಣ ಶೂಲಡಮರ ಸುಕಪಾಲಧರ ಶಿರೋಮಾಲಾನ್ವಿತ ಗುಣಜಾಲ ಸುಶೀಲ ಭಾಸುರಶುಭಕೈಲಾಸನಿಲಯಭೂತೇಶಪ್ರಸನ್ವೆಂಕಟೇಶ ಭಟೇಶ

ಪ್ರಸನ್ನ ವೆಂಕಟದಾಸರಂತೂ ಈ ಕೀರ್ತನೆಯಲ್ಲಿ ತ್ರ್ಯಂಬಕನನ್ನು ಬಹಳ ಸುಂದರವಾಗಿ ಸ್ತುತಿಸಿದ್ದಾರೆ. ನಾವೂ ತ್ರ್ಯಂಬಕನ ಅನುಗ್ರಹದಿಂದ ವೇದಜ್ಞರಾಗೋಣ.

ಸಂಗ್ರಹ. ಶ್ರೀನಿಧಿ ಅಭ್ಯಂಕರ್

ಎಲ್ಲಾ ಲೇಖನಗಳಿಗಾಗಿ ವೀಕ್ಷಿಸಿ http://shreenidhiabhyankar.blogspot.in/

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩