ಚಾರುದತ್ತ ೫

👳ಚಾರುದತ್ತ  ಬೆಳಕು-೫ 🌞

*विभवानुवशा भार्या समदुःखसुखो भवान् ।      सत्त्वं न परिभ्रष्टं यद्        दरिद्रेषु दुर्लभम् ।।*

_ಚಾರುದತ್ತನ ಚಾರುತರವಾದ ಮಾತು. ಗೆಳೆಯ, ನನ್ನ ಬಡತನದ ಬಗೆಗೆ ಯೋಚಿಸದಿರು. ಇಂತಹ ಭಾಗ್ಯ ಯಾರಿಗೆ ತಾನೇ ಇದ್ದೀತು! ಏಕೆಂದರೆ ನನ್ನ ಇಚ್ಛೆಗನುಸಾರವಾಗಿ ವರ್ತಿಸುವ ಪ್ರಿಯಳಾದ ಮಡದಿ, ಸುಖದುಃಖಗಳ ಬೇರೆ ಬೇರೆ ಅವಸ್ಥೆಗಳಲ್ಲೂ ಎಂದೂ ನನ್ನನ್ನು ಅನಾದರಿಸದೇ ಜೊತೆ ನಿಲ್ಲುವ ಮಿತ್ರನಾದ ನೀನು, ಇಷ್ಟೇ ಅಲ್ಲದೆ ದಾರಿದ್ಯ್ರದಲ್ಲೂ ದಾರಿತಪ್ಪದ ಮನಸ್ಸು. ಇವಿಷ್ಟು ಇರುವವನು ಎಂದಾದರೂ ಬಡವನಾಗುವನೇ! ಪತಿಯ ಇಚ್ಛೆ ಅರಿತು ಬದುಕು ನಡೆಸುವವಳು ನಿಜವಾದ ಸತಿ. ಸರ್ವಜ್ಞನ ಪದಗಳಲ್ಲೂ  ಇಚ್ಛೆಯರಿತು ನಡೆವ ಸತಿಯಿರಲು ಮತ್ತಿನ್ನೇನು ಎಂಬ ಮಾತಿದೆ. ತನ್ನ ಇಚ್ಛೆಯನ್ನು ಗೌಣವಾಗಿಸಿ ಪತಿಯ ಮನದರಸಿಯಾಗುವುದು ಕಷ್ಟ. ಅಂತಹ ಸತಿ ನನಗೆ ದೊರಕಿದ್ದಾಳೆ. ನನ್ನ ಯಾವತ್ತೂ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತ ಮಡದಿಯೇ ನನ್ನ ದೊಡ್ಡ ಸಂಪತ್ತು. ಇನ್ನು ನೀನು ಸುಖದ ಕ್ಷಣಗಳಲ್ಲೂ ನನ್ನೊಡನೆ ಸುಖಿಸುತ್ತಾ, ಈಗ ಬಹಳ ಕಷ್ಟದ ಪರಿಸ್ಥಿತಿಯಲ್ಲಿ ಸಮಾಧಾನಿಸುತ್ತಾ ನನ್ನನ್ನು ದೂರಮಾಡದೇ ಆದರಿಸುತ್ತಿರುವೆ. ನಿನ್ನಂತಹ ಮಿತ್ರನಿರಲು ಎನಗೆ ಈ ಸ್ಥಿತಿ ಕಷ್ಟವೆನಿಸದು. ಕಡೆಯದಾಗಿ ಇಂತಹ ಬಡತನದಲ್ಲೂ ಅಧರ್ಮದ ಅನಾಗರಿಕತ್ವದ ಅನ್ಯಾಯದ ಅಮಾನವೀಯತೆಯ ದಾರಿ ಹಿಡಿಯದ ನನ್ನ ಮನವೂ ಕೂಡ ಜೊತೆಗಿರಲು ನಾನು ಬಡವನೇ! ಛೇ, ಖಂಡಿತವಾಗಿಯೂ ಅಲ್ಲ. ಲೋಕದಲ್ಲಿ ಸಾಮಾನ್ಯವಾಗಿ ದುರ್ಲಭವಾದ ಈ ಮೂರು ನನ್ನೊಡನಿರಲು ನಾನು ದೊಡ್ಡ ಶ್ರೀಮಂತ. ಹಾಗಾಗಿ ಗೆಳೆಯ ವಿಷಾದಿಸದಿರು ಎನ್ನುವನು ನಾಯಕ. ಕವಿ ನಾಯಕನ ಮಾತಿನಲ್ಲಿ ಸತ್ಯವನ್ನೇ ಸಾರಿದ್ದಾನೆ ಅಲ್ಲವೇ!_

✍ ಸಂಗ್ರಹ ಶ್ರೀನಿಧಿ ಅಭ್ಯಂಕರ್

ಎಲ್ಲಾ ಲೇಖನಗಳಿಗಾಗಿ ಭೇಟಿ ನೀಡಿ  

http://shreenidhiabhyankar.blogspot.in/

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩