ಚಾರುದತ್ತ ೮

👳ಚಾರುದತ್ತ  ಬೆಳಕು-೬🌞

*अभिनयति वचांसि सर्वगात्रैः किमपि किमप्यनवेक्षितार्थमाह । अनूचितगतिरप्रगल्भवाक्यः पुरुषमयस्य पशोर्नवावतारः ।।*

_ವಿಟನು ಶಕಾರನೆಂಬ ಹಾಸ್ಯಗಾರನ ಬಗೆಗಾಡುವ ಮಾತು. ವಿಟನು ಬಗೆಬಗೆಯಲ್ಲಿ ವಸಂತಸೇನೆಯನ್ನು ಒಲಿಸಲು ಪ್ರಯತ್ನಿಸುತ್ತಿದ್ದರೆ ಈ ಶಕಾರನಾದರೋ ಬಾಯಿಗೆ ಬಂದಂತೆ ಬಡಬಡಿಸುತ್ತಾ ಅವನ ಪ್ರಯತ್ನಕ್ಕೆ ತಡೆಯಾಗುತ್ತಿದ್ದಾನೆ‌. ವಿಟನು ತನ್ನ ಮನದಲ್ಲಿ ಹೀಗೆ ಹೇಳಿಕೊಳ್ಳುವ ಮಾತಿದು. ಅವಳ ಬಗೆಗಿನ ಬಯಕೆಯನ್ನು ಸೂಕ್ಷ್ಮವಾಗಿ ವ್ಯಕ್ತಪಡಿಸದೇ ಎಲ್ಲಾ ಅವಯವಗಳಿಂದ ತೋರುತ್ತಿದ್ದಾನೆ. ತನ್ನ ಮಾತುಗಳನ್ನು ಶರೀರದ ನಾನಾ ಭಂಗಿಗಳಿಂದ ವ್ಯಕ್ತಪಡಿಸುತ್ತಿದ್ದಾನೆ. ಇದು ಉತ್ತಮ ವರ್ತನೆಯ ಲಕ್ಷಣವಲ್ಲ. ಮನದ ಭಾವನೆಯನ್ನು ಸೂಕ್ಷ್ಮವಾಗಿ ಅಥವಾ ಸೂಚ್ಯವಾಗಿ ಹೇಳಿ ಮುಂದುವರೆಯುವುದು ಅನುನಯದ ಮೊದಲ ಪಾಠ. ಇವನು ಅದನ್ನೇ ಮರೆತಂತೆ ( ಜೊಲ್ಲು ಸುರಿಸುವುದು) ಕಾಣುತ್ತದೆ. ಇಲ್ಲಿ ಗಾತ್ರ ಶಬ್ದಕ್ಕೆ ಶರೀರ ಎನ್ನುವದಕ್ಕಿಂತಲೂ ಶರೀರದ ಅವಯವ ಎಂದೇ ಸರಿಯಾಗುತ್ತದೆ. ಇಷ್ಟೇ ಅಲ್ಲದೇ ಪ್ರಸಂಗಕ್ಕೆ ಪ್ರಸ್ತುತವಾಗದಂತೆ ಏನೇನೋ ಒದರುತ್ತಿದ್ದಾನೆ. ಮಧುರವಾದ ಆಕರ್ಷಕವಾದ ಮಾತುಗಳಿಂದ ಒಲಿಸಿಕೊಳ್ಳುವ ಬದಲು ಇವನ ಮಾತು ವಾಕರಿಕೆ ತರಿಸುತ್ತಿದೆ. ಯಾವ ಬಗೆಯ ಧ್ವನಿ ಅಥವಾ ಸ್ವಾರಸ್ಯ ಇಲ್ಲದ, ಮನವನ್ನು ಯಾವ ರೀತಿಯಲ್ಲೂ ಮುಟ್ಟದ ಪ್ರತಿಭಾಶೂನ್ಯವಾದ ನುಡಿ ಹಾಗೂ ಲೋಕನಿಂದಿತವಾದ ವರ್ತನೆ ಅಥವಾ ಹಾವಭಾವ ಇವನ ಪ್ರತಿಯೊಂದು ಹೆಜ್ಜೆಗೂ ಢಾಳಾಗಿ ಕುಣಿಯುತ್ತಿದೆ. ಇವನನ್ನು ನೋಡುತ್ತಿದ್ದರೆ ಪುರುಷಶರೀರ ಧರಿಸಿರುವ ಹೊಸದಾದ ಒಂದು ಪಶುವಿನ ಅವತಾರದಂತೆ ಕಾಣುತ್ತಿದ್ದಾನೆ. ಶಕಾರನನ್ನು ಅವನ ವರ್ತನೆಯನ್ನು ನೋಡಿ ಅಸಹ್ಯದಿಂದ ವಿಟನಾಡುವ ಮಾತು. ಕವಿ ಈ ಶ್ಲೋಕದ ಮೂಲಕ ನಾವೂ ಕೆಲವೊಂದು ಸಂದರ್ಭದಲ್ಲಿ ತೋರುವ ಪಶುತ್ವ ಬಿಡಬೇಕೆಂಬುದನ್ನು ಹೀಗೆ ಹೇಳಿದ್ದಾನೆ._

✍ ಸಂಗ್ರಹ ಶ್ರೀನಿಧಿ ಅಭ್ಯಂಕರ್

ಎಲ್ಲಾ ಲೇಖನಗಳಿಗಾಗಿ ಭೇಟಿ ನೀಡಿ  

http://shreenidhiabhyankar.blogspot.in/

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩