ಪದಸಂಪದ ೧೭

📝📕ಪದ ಸಂಪದ ೧೭📕📝

*ಈಶ*

_ಲೋಕರೂಢಿಯಂತೆ ಈಶ ಅಂದರೆ ಈಶ್ವರ. ಆದರೆ ಧಾತುವಿನ ಮೂಲಾರ್ಥ ಗಮನಿಸಿದರೆ ನಾವೆಲ್ಲರೂ ಒಂದಲ್ಲ ಒಂದು ರೀತಿಯಿಂದ ಈಶರು.  ಐಶ್ವರ್ಯ ಉಳ್ಳವನು ಅಥವಾ ಐಶ್ವರ್ಯವೇ ಯಾರೋ ಅವನೇ ಈಶ. ಕರಗದ, ಎಂದೂ ನಾಶವಾಗದ ಸಂಪತ್ತು ಯಾರು ಎಂಬ ಪ್ರಶ್ನೆಗೆ ಭಗವಂತ ಎಂಬುದು ಒಂದೇ ಉತ್ತರ. ನಾವು ನಮ್ಮ ಪಾಲಕರಿಗೋ , ಆಶ್ರಿತರಿಗೋ ಸಂಪತ್ತಾಗಿರಬಹುದು. ಎಲ್ಲಿಯವರೆಗೆ ನಮ್ಮ ಬೆಲೆ ಕುಂದದೋ ಅಲ್ಲಿಯವರೆಗೆ ಮಾತ್ರ ಈಶತ್ವ. ಅನಂತರ ಏನೂ ಇರಲಾರದು. ಹಾಗಾಗಿ ನಿತ್ಯ ಸಂಪತ್ತಿನ ರೂಪ ಆ ಈಶನು. ಅವನೇ ಸಂಪತ್ತಾದ ಕಾರಣ ಅವನಿಗೆ ಯಾವ ಸಂಪತ್ತೂ ಬೇಡ. ಹಾಗಾಗಿಯೇ ಅವನು ಸ್ಮಶಾನ ವಾಸಿ, ಚರ್ಮಾಂಬರಧಾರಿ, ಭಸ್ಮಲೇಪಿತ. ವಿಶಾಲಾರ್ಥದಲ್ಲಿ ಎಲ್ಲಾ ದೇವತೆಗಳು ಈಶರೇ ಆಗಿದ್ದಾರೆ. ಶ್ರೀಮಂತ ಎಂದೂ ಈ ಶಬ್ದದ ಇನ್ನೊಂದು ಅರ್ಥ. ರುದ್ರರು  ಏಕಾದಶ. ಈಶ ಶಬ್ದದ ಮತ್ತೊಂದು ಅರ್ಥ ಹನ್ನೊಂದು.  ಸಂಸ್ಕೃತ ಭಾಷೆಯಲ್ಲಿ ಪದಗಳ ಮೂಲಕ ಸಂಖ್ಯೆ ಗುರುತಿಸುವಿಕೆ ವಿಶಿಷ್ಟ ಗುಣ. ರುದ್ರ ಅಥವಾ ಈಶ ಅಂದರೆ ಹನ್ನೊಂದು ಸಂಖ್ಯೆ. ಆರ್ದ್ರಾ ನಕ್ಷತ್ರದ ಒಡೆಯ ಈ ಈಶ. ಹಾಗಾಗಿ ಆ ನಕ್ಷತ್ರವೂ ಈ ಶಬ್ದದ ಮತ್ತೊಂದು ಅರ್ಥ. ಸಾಹಿತ್ಯದ ಸಾವಿರಾರು ಕಡೆ ಈಶ ಶಬ್ದದ ಮಹಿಮೆ ಕಂಡುಬರುತ್ತದೆ._

*ईशस्येैष निवेशित: पदयुगे भ्रृृृृन्ङायमाणम् भ्रमत्*

  _ತಾಂಡವ ನೃತ್ಯವಾಡುವ ಶಿವನ ಸುತ್ತಲಿನ ವರ್ಣನೆ ಇಲ್ಲಿದೆ. ಲೋಕವೇ ಅವನ ಸುತ್ತ ಕುಣಿಯುತ್ತಿದೆ. ಅವನ ಕುಣಿತವೋ ಕುಣಿಸುವಿಕೆಯೋ ತಿಳಿಯದೆಂಬ ಭಾವ ಕವಿಯದು.

*ಈಶ ನಿನ್ನ ಚರಣ ಭಜನೆ*

ಕನಕದಾಸರ ಪ್ರಸಿದ್ಧ ಕೀರ್ತನೆಯಲ್ಲಿ ವಿಷ್ಣುವನ್ನು ಈಶನೆಂದೇ ಸ್ತುತಿಸಿ ಭಜಿಸಿದ್ದಾರೆ. ನಾವೂ ನಮ್ಮ ಇಷ್ಟ ದೈವವನ್ನು ಸ್ತುತಿಸಿ ಈಶನೊಲುಮೆಗೆ ಪಾತ್ರರಾಗೋಣ.

ಸಂಗ್ರಹ. ಶ್ರೀನಿಧಿ ಅಭ್ಯಂಕರ್

http://shreenidhiabhyankar.blogspot.in/

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩