ಧಾರ್ಮಿಕ ಆಚರಣೆ ೧೪

🌹📝 ಧಾರ್ಮಿಕ ಆಚರಣೆಗಳು 📗🌺
ಭಾಗ-೧೪

*ತಿಲಕ*

*ಅಶ್ವತ್ಥ ತುಲಸೀಮೂಲಮೃತ್ತಿಕಾಗೋಷ್ಪದಸ್ಯ ಚ ಜಾಹ್ನವೀ ಮೃತ್ ಮಹಾನಿಂಬತುಲಸೀಕಾಷ್ಠಮೇವ ಚ, ಕಸ್ತೂರೀ ಕುಂಕುಮಂ ಫಲ್ಗು ಸಿಂಧೂರಂ ರಕ್ತಚಂದನಮ್ ಗೋರೋಚನಂ ಗಂಧಕಾಷ್ಠಂ ಜಲಂ ಚಾಗುರು ಗೋಮಯಮ್, ಧಾತ್ರೀಮೂಲಸ್ಯ ಮೃದ್ಗಂಧೋ ಹರಿದ್ರಾ ಗೋಗೃಹಸ್ಯ ಚ*

_ತಿಲಕ ಎಂದು ಯಾವ ಯಾವ ವಸ್ತುಗಳನ್ನು ಧರಿಸಬಹುದು ಎನ್ನುವುದನ್ನು ವಿವರಿಸುತ್ತಿದ್ದಾರೆ. ಅಶ್ವತ್ಥ ದ ಬುಡದ ಮಣ್ಣು, ತುಳಸಿ ಗಿಡದ ಮಣ್ಣು, ಹಸು ಕಟ್ಟುವ ಕೊಟ್ಟಿಗೆಯ ಮಣ್ಣು, ಗಂಗಾ ನದಿಯ ಹರಿವಿನ ಬದಿಯ ಮಣ್ಣು, ಬೇವಿನ ಗಿಡದ ಬುಡದ ಮಣ್ಣು, ತುಲಸಿಯ ಗಿಡದ ಟೊಂಗೆಗಳ ಹುಡಿಯನ್ನು ಅಥವಾ ಅದನ್ನೇ ತಿಕ್ಕಿ ಅದರ ತಿಲಕವನ್ನು ಧರಿಸಬಹುದು. ಈಗಿನ ದಿನಗಳಲ್ಲಿ ಮಣ್ಣಿನ ಸ್ನಾನವನ್ನು ಚಿಕಿತ್ಸೆಯ ರೂಪದಲ್ಲಿ ಮಾಡಿಕೊಳ್ಳುತ್ತಾರೆ. ಹಿಂದೆ ಮಣ್ಣನ್ನೇ ದಿನವೂ ಬೇರೆ ಬೇರೆ ರೀತಿ ಬಳಸುತ್ತಿದ್ದರು. ಹೆಸರು ಮಾತ್ರ ಇರಲಿಲ್ಲ ಅಷ್ಟೇ. ಕಸ್ತೂರಿ ಮೃಗದಿಂದ ದೊರೆಯುವ ಕಸ್ತೂರಿಯನ್ನು, ಅರಿಶಿನ ಮತ್ತು ಸುಣ್ಣಗಳ ಮಿಶ್ರಣದಿಂದ ಅಥವಾ ಬೇರೆ ಸಾವಯವ ದ್ರವ್ಯಗಳ ಮಿಶ್ರಣದಿಂದ ತಯಾರಾದ ಕುಂಕುಮವನ್ನು,ಗಯಾಕ್ಷೇತ್ರದ ಬಳಿಯಿರುವ ಫಲ್ಗು ನದಿಯ ಸುತ್ತಲಿನ ಧೂಳನ್ನು ಅಥವಾ ಹೋಮದ ಭಸ್ಮವನ್ನು, ಸಿಂಧೂರವನ್ನು, ರಕ್ತಚಂದನವನ್ನು, ಗೋರೋಚನವನ್ನು, ಕನ್ನಡನಾಡಿನ ಹೆಮ್ಮೆಯ ಗಂಧವನ್ನು, ಗೋಮಯವನ್ನು, ಅಗುರು ಎಂಬ ಹೆಸರಿನ ಒಂದು ಬಗೆಯ ಗಂಧವನ್ನು, ನೆಲ್ಲಿಯ ಬುಡದ ಮಣ್ಣನ್ನು, ಹಸುಗಳನ್ನು ಕಟ್ಟಿರುವ ಸಮೀಪ ಬೆಳೆದ ಅರಿಶಿನವನ್ನು, ಇನ್ನು ಇಲ್ಲಿ ಉಲ್ಲೇಖಿಸದ ಗೋಪೀಚಂದನ ಹಾಗೂ ಗೋಮಯ- ಗೋಮಯದ ಭಸ್ಮವನ್ನು ತಿಲಕವೆಂದು ಧರಿಸಬಹುದು. ಪ್ರತಿದಿನವೂ ಸ್ನಾನ ಮಾಡಿದ ನಂತರ ತಿಲಕ ಧರಿಸುವುದು ನೋಡುವ ದೃಷ್ಟಿಯಿಂದಲೂ, ಆಂತರಿಕ ಪ್ರಯೋಜನಗಳಿಂದ ಶ್ರೇಷ್ಠ ಎನಿಸುತ್ತದೆ. ಇನ್ನೂ ಒಂದಷ್ಟು ಮಾಹಿತಿ ಮುಂದೆ ನೋಡೋಣ. *ತಿಲಕ ಇಟ್ಟರೆ ಸ್ವರ್ಗವು ಸಿಗದು* ಎಂಬಂತೆ ಕೇವಲ ತಿಲಕ ಧರಿಸಿ ಅನಾಚಾರ ಮಾಡಿಯೂ ಸ್ವರ್ಗ ಪಡೆಯಲು ಸಾಧ್ಯವಿಲ್ಲ. ತಿಲಕ ಧರಿಸಿ ತಿಲದಂತೆ ಉಪಕಾರಿಯಾಗಿ ಬದುಕು ಸವೆಸಿದಾಗ ಮಾತ್ರ ಸ್ವರ್ಗ ದೊರಕುವುದು._
_

http://shreenidhiabhyankar.blogspot.in/
ವಿಷಯಗಳ ಮೂಲ ಲೇಖಕರಿಗೆ ಅನಂತ ಪ್ರಣಾಮಗಳು.

ಸಂಗ್ರಹ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩