ಧರ್ಮಶಾಸ್ತ್ರ
ಧರ್ಮಶಾಸ್ತ್ರ
ಆದದೀತ ನ ಶೂದ್ರೋಪಿ ಶುಲ್ಕಂ ದುಹಿತರಂ ದದತ್ | ಶುಲ್ಕಂ ಗೃಹ್ಣನ್ ಕುರುತೇ ಛನ್ನಂ ದುಹಿತೃವಿಕ್ರಯಮ್|| ಮನುಸ್ಮೃತಿ.
ನಾಲ್ಕು ವರ್ಣದವರಲ್ಲಿ ಯಾರೊಬ್ಬರೂ ತನ್ನ ಮಗಳನ್ನು ಧಾರೆ ಎರೆದುಕೊಡುವಾಗ ಪ್ರತಿಯಾಗಿ ಧನವನ್ನು ಪಡೆಯಬಾರದು. ಒಂದು ವೇಳೆ ಹಾಗೆ ತೆಗೆದುಕೊಂಡರೆ ಅದು ಧನಕ್ಕಾಗಿ ಆ ಕನ್ಯೆಯನ್ನು ಮಾರಿದಂತಾಗುತ್ತದೆ. ರಹಸ್ಯವಾಗಿ ಮಾರುವುದೂ ಒಂದೇ, ಬಹಿರಂಗವಾಗಿ ಬೇಡಿಕೆ ಇಟ್ಟು ಹಣ ಪಡೆಯುವುದೂ ಒಂದೇ ಆಗಿದೆ. ಪತಿಯ ಅಕಾರ್ಯದ ಬಗ್ಗೆ ಅಥವಾ ಬೇಜವಾಬ್ದಾರಿಯ ಬಗ್ಗೆ ಪ್ರಶ್ನೆ ಮಾಡುವ ಹಕ್ಕೂ ಇಲ್ಲದಂತಾಗುತ್ತದೆ. ಹಾಗಾಗಿ ಎಂದಿಗೂ ಹೆಣ್ಣು ಹೆತ್ತವರು ದುಡ್ಡಿನ ಆಸೆಗೋ ಇನ್ಯಾವುದೋ ಆಮಿಷಕ್ಕೆ ಒಳಗಾಗಿ ಮಗಳನ್ನು ಅಯೋಗ್ಯರ ಕೈಯಲ್ಲಿ ಇರಿಸಬಾರದು.
ಸಂಗ್ರಹ: ಶ್ರೀನಿಧಿ ಅಭ್ಯಂಕರ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ