ರಾಮಾಯಣ ೧೮೮
📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೮೮🏝📖
*ಸರ್ವೇ ವೇದವಿದಃ ಶೂರಾಃ ಸರ್ವೇ ಲೋಕಹಿತೇ ರತಾಃ | ಸರ್ವೇ ಜ್ಞಾನೋಪಸಂಪನ್ನಾಃ ಸರ್ವೇ ಸಮುದಿತಾ ಗುಣೈಃ||*
_ರಾಮಾದಿ ನಾಲ್ವರೂ ವೇದ-ಶಾಸ್ತ್ರಗಳನ್ನು ಚೆನ್ನಾಗಿ ಬಲ್ಲವರಾಗಿದ್ದರು. ಲೋಕದ ಹಿತವನ್ನು ಆಚರಿಸುವುದು ಅವರಿಗೆ ಸಹಜವಾದ ಸ್ವಭಾವವಾಗಿತ್ತು. ತತ್ವಜ್ಞಾನವೂ ಅವರಿಗೆ ಬಹಳವಾಗಿತ್ತು. ಸದ್ಗುಣಗಳನ್ನು ಮೈಗೂಡಿಸಿಕೊಂಡಿದ್ದರು. ರಾಜಪುತ್ರರಾಗಿ ಸುಖದ ಸುಪ್ಪತ್ತಿಗೆಯಲ್ಲಿ ಹುಟ್ಟಿ ಬೆಳೆದ ಅನೇಕ ರಾಜಕುವರರಂತೆ ಇರಲಿಲ್ಲ ಈ ದೇವಕುಮಾರರು. ಗುರುಕುಲದಲ್ಲಿ ಅಧ್ಯಯನ ಮಾಡಿ ವೇದ-ಶಾಸ್ತ್ರ-ತತ್ವ ಈ ಮೂರನ ಸಾರವನ್ನೂ ಅರಿತಿದ್ದರು. ನಮ್ಮ ಸುತ್ತಮುತ್ತಲಿನ ಅಧಿಕಾರಿ ವರ್ಗ ಅಥವಾ ಶ್ರೀಮಂತರ ಮಕ್ಕಳು ಅಧ್ಯಯನಕ್ಕಿಂತ ಇತರ ಚಟುವಟಿಕೆಗೇ ಮಹತ್ವ ಕೊಡುವುದು ನೋಡಿದಾಗ ದಶರಥನ ವ್ಯಕ್ತಿತ್ವ ಶಿಕ್ಷಣ ಮಾದರಿಯಾಗುತ್ತದೆ. ಜ್ಞಾನ ಸಂಪಾದಿಸಿದ್ದು ಮಾತ್ರವಲ್ಲ ಅದರ ಸದ್ವಿನಿಯೋಗ ಆಗುವುದು ಅದು ಸಮಾಜಕ್ಕೆ ಯಾವುದಾದರೂ ರೀತಿಯಲ್ಲಿ ಸಹಕಾರಿ ಆದಾಗ. ಈ ನಾಲ್ವರೂ ಲೊಕಹಿತದ ಬುದ್ಧಿಯನ್ನು ಎಂದಿಗೂ ಬಿಡುತ್ತಿರಲಿಲ್ಲ. ತಮ್ಮ ಯಾವ ಕಾರ್ಯವೂ ಲೋಕಕ್ಕೆ ಹಿತವೆನಿಸದಿದ್ದರೆ ಅದನ್ನು ಬಿಟ್ಟು ಬಿಡುತ್ತಿದ್ದರು. ಸೀತಾಪರಿತ್ಯಾಗದಂತಹ ಕಠಿಣ ನಿರ್ಧಾರ ತೆಗೆದುಕೊಳ್ಳುವ ರಾಮನ ಹಾಗೂ ತಮ್ಮಂದಿರ ಬಾಲ್ಯದ ತರಬೇತಿಯೇ ಹಾಗಿತ್ತು.ನಮಗೆ ಸಮ್ಮತವಾದುದು ಅಥವಾ ಸುಖಕರವಾದುದು ಲೋಕಕ್ಕೆ ಅಹಿತ ಅಥವಾ ದುಃಖಕರ ಎಂದರೆ ನಮಗೂ ಅದು ಅಹಿತ ಹಾಗೂ ದುಃಖಜನಕ. ಎಂತಹ ಆದರ್ಶ. ಇದಲ್ಲದೇ ಸತ್ಯ,ಅಹಿಂಸೆ, ಪ್ರಾಮಾಣಿಕತೆ, ದಯಾಪರತೆ ಮೊದಲಾದ ಸದ್ಗುಣಗಳು ನಾಲ್ವರಲ್ಲೂ ಸಮಾನವಾಗಿದ್ದವು. ಹಾಗಾಗಿಯೇ ಇರಬೇಕು ಒಬ್ಬರ ಮೇಲೆ ಮತ್ತೊಬ್ಬರಿಗೆ ಹೆಚ್ಚು ಅಕ್ಕರೆ. *ಸಮಾನಶೀಲ* ರಲ್ಲಿ ಮಾತ್ರವಲ್ಲವೇ ಸ್ನೇಹಕ್ಕೆ ಆಸ್ಪದ ದೊರಕುವುದು. ಜ್ಞಾನ ಹಾಗೂ ಪ್ರಜಾಹಿತದ ಬುದ್ಧಿ ಇದ್ದರೂ ಸದ್ಗುಣಗಳನ್ನು ಹೊಂದುವುದು ವಿರಳ. ಈ ಕುಮಾರರು ಎಲ್ಲರನ್ನೂ ಈ ವಿಷಯದಲ್ಲಿ ಮೀರಿಸಿದ್ದರು._
*ಬಭೂವ ಪರಮಪ್ರೀತೋ ವೇದೈರಿವ ಪಿತಾಮಹಃ*
_ಬಹಳ ಸುಂದರ ಉಪಮೆ. ನಾಲ್ವರು ಪುತ್ರರ ಬೆಳೆಯುವಿಕೆ-ಬೆಳಗುವಿಕೆಯನ್ನು ಕಂಡ ದಶರಥನು ಬಹಳ ಸಂತೋಷ ಅನುಭವಿಸಿದನು. ಬ್ರಹ್ಮನು ಸೃಷ್ಟಿಗೆ ಆಧಾರವಾಗಿ ಇಟ್ಟುಕೊಂಡಿದ್ದು ನಾಲ್ಕು ವೇದಗಳನ್ನು. ಆ ವೇದಗಳೇ ಅವನ ಪ್ರಾಣ. ಪ್ರಳಯ ಕಾಲದಲ್ಲಿ ದೈತ್ಯರು ಅಪಹರಿಸಿದಾಗ ಮತ್ತೆ ಹಯಶಿರನ ದಯದಿಂದ ವೇದಗಳನ್ನು ಪಡೆದು ಕೃತಾರ್ಥನೆನಿಸಿದ ಬ್ರಹ್ಮ. ಹೇಗೆ ಬ್ರಹ್ಮನು ನಾಲ್ಕು ವೇದಗಳನ್ನು ಪಡೆದು ಅಥವಾ ಉಪದೇಶ ಹೊಂದಿ ಸಂತುಷ್ಟನಾದನೋ ಮಕ್ಕಳಿಲ್ಲದೆ ಕತ್ತಲೆ ಎನಿಸಿದ್ದ ದಶರಥನ ಬಾಳಿಗೆ ಬೆಳಕಾದ ಈ ನಾಲ್ವರ ಆಟ-ಪಾಠಗಳಿಂದ ಲೋಕವೂ-ರಾಜನೂ ಸಮಾನ ಆನಂದವನ್ನು ಅನುಭವಿಸಿದರು._
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
ಎಲ್ಲಾ ಲೇಖನಗಳಿಗೆ ಒಮ್ಮೆ ತೆರೆದು ನೋಡಿ. ತಪ್ಪುಗಳಿದ್ದಲ್ಲಿ ತಿದ್ದಿ ಮುನ್ನಡೆಸಿ.
http://shreenidhiabhyankar.blogspot.com

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ