ರಾಮಾಯಣ ೧೯೧
📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೯೧🏝📖
*ನ ಚ ಮೇ ಕ್ರೋಧಮುತ್ಸೃಷ್ಟುಂ ಬುದ್ಧಿರ್ಭವತಿ ಪಾರ್ಥಿವ| ತಥಾಭೂತಾ ಹಿ ಸಾ ಚರ್ಯಾ ನ ಶಾಪಸ್ತತ್ರ ಮುಚ್ಯತೇ ||*
_ದಶರಥನ ಬಳಿ ಬಂದ ವಿಶ್ವಾಮಿತ್ರರ ಯಾವ ಕೆಲಸವನ್ನಾದರೂ ನಡೆಸಿಕೊಡುವೆ ಎಂದು ಮಾತು ಕೊಟ್ಟಾಗ ಋಷಿಗಳು ಋಷಿಗಳು ಹೀಗೆನ್ನುತ್ತಾರೆ. ರಾಜನೇ ನಾನು ಕೈಗೊಂಡಿರುವ ಯಜ್ಞಕ್ಕೆ ರಾಕ್ಷಸರು ವಿಘ್ನ ಉಂಟುಮಾಡುತ್ತಿದ್ದಾರೆ. ಹೀಗೆ ಮತ್ತೆ ಮತ್ತೆ ನನ್ನ ಪರಿಶ್ರಮ ಎಲ್ಲವೂ ವ್ಯರ್ಥವಾಗಿ ಹೋಗುತ್ತಿದೆ. ಅವರಿಗೆ ಶಾಪ ಕೊಡಬಹುದಲ್ಲವೇ ಎಂದರೆ ವ್ರತಸ್ಥನಾದಾಗ ಶಾಪಾದಿಗಳನ್ನು ಕೊಡಬಾರದು. ಒಂದು ಯಜ್ಞ, ವ್ರತ, ಪೂಜೆ, ಸತ್ರ, ಯಾಗ ಹೀಗೆ ಲೋಕಕಲ್ಯಾಣಾರ್ಥವಾದ ಕಾರ್ಯಗಳನ್ನು ಕೈಗೊಂಡ ಸಮಯದಲ್ಲಿ ಕಾಮಾದಿ ಅರಿಷಡ್ವರ್ಗಗಳನ್ನು ಗೆಲ್ಲುವುದರತ್ತ ದೃಷ್ಟಿ ಇರಬೇಕೇ ಹೊರತು ಮತ್ತೂ ಅದರಲ್ಲಿ ಮುಳುಗುವತ್ತ ಅಲ್ಲ. ಕರ್ಮಕ್ಕೆ ದೀಕ್ಷೆ ತೆಗೆದುಕೊಳ್ಳುವುದು ಎಂದರೆ ನಿತ್ಯದ ವ್ಯವಹಾರ ಮುಂತಾದವನ್ನು ಬದಿಗಿಟ್ಟು ಭಗವಂತನಲ್ಲಿ ಬುದ್ಧಿಯನ್ನು ನೆಡುವುದು. ಹಾಗಾಗಿ ರಾಜನೇ, ಈ ಯಜ್ಞದ ಸಮಯದಲ್ಲಿ ನಾನು ಯಾರ ಮೇಲೂ ಕೋಪಿಸಲು ಅಥವಾ ಶಾಪಾದಿಗಳನ್ನು ಕೊಡಲು ಸಾಧ್ಯವಿಲ್ಲ.ಹಾಗೆ ಮಾಡಿದರೆ ವ್ರತಭಂಗವಾಗುತ್ತದೆ. ಕರ್ಮಗಳನ್ನು ಮಾಡುವ ಉದ್ದೇಶವೇ ನಮ್ಮ ಮನಸ್ಸನ್ನು ನಿಯಂತ್ರಣಕ್ಕೆ ತಂದು ಸದ್ಗುಣಗಳನ್ನು ಅಳವಡಿಸಿಕೊಳ್ಳುವುದು. ಎಡಚರರ ವಾದದಂತೆ ತುಪ್ಪ ಮುಂತಾದ ದ್ರವ್ಯ ವಿನಿಯೋಗಿಸಲು, ಜೋರಾಗಿ ಮಂತ್ರ ಹೇಳುವುದು, ದಕ್ಷಿಣೆ ಕೊಡುವುದು ಮೊದಲಾದವು ಅದರ ಅಂಗ ಹೊರತು ಅದೇ ಪ್ರಧಾನವಲ್ಲ. ಪ್ರಧಾನ ನಮ್ಮನ್ನು ನಾವು ಉದ್ಧರಿಸಿಕೊಳ್ಳುವುದು. ಅದನ್ನೇ ಮಹರ್ಷಿಗಳು ನುಡಿದಿದ್ದು._
*ಶ್ರೇಯಶ್ಚಾಸ್ಮೈ ಪ್ರದಾಸ್ಯಾಮಿ ಬಹುರೂಪಂ ನ ಸಂಶಯಃ | ತ್ರಯಾಣಾಮಪಿ ಲೋಕಾನಾಂ ಯೇನ ಖ್ಯಾತಿಂ ಗಮಿಷ್ಯತಿ||*
_ಈ ರಾಕ್ಷಸರನ್ನು ಕೊಂದ ಶ್ರೇಯಸ್ಸು ಅನೇಕ ವಿಧವಾಗಿ ಲೋಕದಲ್ಲಿ ರಾಮನ ಹೆಸರು ಕೇಳಿಬರಲು ಕಾರಣವಾಗುತ್ತದೆ. ಮೂರು ಲೋಕಗಳಲ್ಲೂ ರಾಮ ಎಂಬ ಲೋಕೈಕವೀರನ ಹೆಸರು ಎಲ್ಲೆಡೆ ಖ್ಯಾತವಾಗುವುದು. ಈ ದುಷ್ಟರನ್ನು ಕೊಲ್ಲಲು ರಾಮನೊಬ್ಬನೇ ಸಮರ್ಥ. ವಿಶ್ವಾಮಿತ್ರರು ತಾವೇ ರಾಕ್ಷಸರನ್ನು ನಿಗ್ರಹಿಸಲು ಸಮರ್ಥರಾದರೂ ಭಗವಂತನ ಅವತಾರದ ಉದ್ದೇಶ ಲೋಕಕ್ಕೆ ತಿಳಿಸಬೇಕೆಂಬ ಯೋಚನೆಯಲ್ಲಿ ರಾಮನನ್ನು ಕರೆದುಕೊಂಡು ಹೋಗಲು ಬಂದಿದ್ದಾರೆ. ಯೋಗಿಗಳ ಹೃದಯದಲ್ಲಿ ಧ್ಯಾನಗೋಚರನಾಗುವ ಮನಕ್ಕೆ ಆರಾಮದಾಯಕನಾದ ರಾಮನನ್ನು ಪ್ರತ್ಯಕ್ಷವಾಗಿ ತನ್ನ ಜೊತೆಯೇ ಕರೆದುಕೊಂಡು ಹೊರಟ ವಿಶ್ವಾಮಿತ್ರರ ಮಹಿಮೆ ಎಂತಹುದು! ಭಗವಂತನ ಸಾನ್ನಿಧ್ಯ ಮಾತ್ರ ತನಗಿರಲಿ, ಕೀರ್ತಿಯೆಲ್ಲವೂ ಭಗವಂತನಿಗಿರಲಿ ಎಂಬ ಅದ್ಭುತ ಚಿಂತನೆ ವಿಶ್ವಾಮಿತ್ರರದು. ನಾವೆಲ್ಲರೂ ಭಗವಂತನನ್ನು ನಮ್ಮೊಡನೆ ಕರೆದೊಯ್ಯಲು ನಿರಾಕರಿಸಿ ಅವನನ್ನು ದೂರ ಇಡುತ್ತೇವೆ. ಶಾಶ್ವತವಾಗಿ ಮುಕ್ತಿಗೆ ಕಾರಣವಾಗದ ಹೆಸರು-ಕೀರ್ತಿ-ಅಧಿಕಾರ-ಪ್ರತಿಷ್ಠೆಯ ಹಿಂದೆ ಬಿದ್ದು ಮುಕ್ತಿಯ ಮಾರ್ಗಕ್ಕೆ ವಿಘ್ನ ತಂದುಕೊಳ್ಳುತ್ತೇವೆ ಅಲ್ಲವೇ!_
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
ಎಲ್ಲಾ ಲೇಖನಗಳಿಗೆ ಒಮ್ಮೆ ತೆರೆದು ನೋಡಿ. ತಪ್ಪುಗಳಿದ್ದಲ್ಲಿ ತಿದ್ದಿ ಮುನ್ನಡೆಸಿ.
http://shreenidhiabhyankar.blogspot.com

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ