ರಾಮಾಯಣ ೧೮೯
📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೮೯🏝📖
*ಪುರೇ ಕೋಶೇ ಜನಪದೇ ಬಾಂಧವೇಷು ಸುಹೃತ್ಸುಚ| ಕುಶಲಂ ಕೌಶಿಕೋ ರಾಜ್ಞಃ ಪರ್ಯಪೃಚ್ಛತ್ಸುಧಾರ್ಮಿಕಃ ||*
_ದಶರಥನ ಮನದಲ್ಲಿ ಮಕ್ಕಳ ವಿವಾಹದ ಚಿಂತೆ ಮೂಡಿದೊಡನೆ ಆಗಮಿಸಿದರು ಪುರೋಹಿತರಾದ ವಿಶ್ವಾಮಿತ್ರರು. ಅವರ ಮೊದಲ ಪ್ರಶ್ನೆಯೇ ಇದು. ರಾಜನೇ, ಜನರು ಕುಶಲಾವಾಗಿರುವರೇ? ನಿನ್ನ ಖಜಾನೆ ತುಂಬಿದೆಯೇ? ಗ್ರಾಮೀಣರು ಸುಖದಿಂದಿರುವರೇ? ನಿನ್ನ ಬಂಧು-ಬಾಂಧವರು ಹಾಗೂ ಮಿತ್ರರು ಕುಶಲವೇ? ಹೀಗಾಗಿಯೇ ವಿಶ್ವಾಮಿತ್ರರನ್ನು ಪರಮಧಾರ್ಮಿಕರೆಂದು ಕರೆದ ಮಹರ್ಷಿ ವಾಲ್ಮೀಕಿ. ಯಾರು ಮೊದಲು ಲೋಕಕ್ಷೇಮವನ್ನು ಚಿಂತಿಸುವನೋ ಅವನೇ ಧಾರ್ಮಿಕ. ಕೇವಲ ತನ್ನ ಧರ್ಮಾನುಷ್ಠಾನ ಮಾಡಿಕೊಂಡು ತನ್ನ ಉದ್ಧಾರವೇ ಜೀವನದ ಧ್ಯೇಯ ಮಾಡಿಕೊಳ್ಳುವ ವ್ಯಕ್ತಿ ಸ್ವಾರ್ಥಿ ಎನಿಸುವನು. ಲೋಕದ ಹಿತದಲ್ಲಿ ತನ್ನ ಹಿತವೂ ಅಡಗಿದೆ ಎಂಬ ಉದಾತ್ತ ಚಿಂತನೆಯೇ ಧರ್ಮದ ಜೀವಾಳ. ಮಹರ್ಷಿಯು ದಶರಥನ ಹೆಂಡತಿ-ಮಕ್ಕಳು ಕ್ಷೇಮದಿಂದ ಇದ್ದಾರೆಯೇ ಎಂದು ವಿಚಾರಿಸಲಿಲ್ಲ. ಜನರು ಸುಖಿಯಾಗಿರುವರೇ? ಜನರ ಸುಖಕ್ಕಾಗಿ ವಿನಿಯೋಗ ಆಗುವ ಕೋಶ ತುಂಬಿದೆಯೇ? ನಗರದ ಜಂಜಾಟದಿಂದ ತುಂಬಾ ದೂರದಲ್ಲಿ ತಮ್ಮದೇ ಶೈಲಿಯಲ್ಲಿ ಬದುಕು ನಡೆಸುತ್ತಿರುವ ಜಾನಪದರ ಬದುಕು ಸಮೃದ್ಧಿ ಪಡೆದಿದೆಯೇ? ಇವರ ನಂತರ ಬಂಧು- ಬಾಂಧವ- ಮಿತ್ರರು. ಈ ಚಿಂತನೆ ಯಾವ ರಾಜನಿಗಿರುತ್ತದೋ ಅಥವಾ ಯಾವ ಸಲಹೆಗಾರನಿಗಿರುತ್ತದೋ ಅಂತಹ ದೇಶ ನಿಜಕ್ಕೂ ಪುಣ್ಯಭೂಮಿ._
*ಅಪಿ ತೇ ಸಂನತಾಃ ಸರ್ವೇ ಸಾಮಂತಾ ರಿಪವೋ ಜಿತಾಃ| ದೈವಂ ಚ ಮಾನುಷಂ ಚಾಪಿ ಕರ್ಮ ತೇ ಸಾಧ್ವನುಷ್ಠಿತಮ್||*
_ಮುಂದಿನ ಪ್ರಶ್ನೆ ಇನ್ನೂ ಸೊಗಸು. ನಿನ್ನ ಅಡಿಯಲ್ಲಿ ಆಡಳಿತದ ಮುಖ್ಯ ಹುದ್ದೆಯಲ್ಲಿದ್ದವರು ನಿನಗೆ ವಿಧೇಯರಾಗಿರುವರೇ? ಏಕೆಂದರೆ ರಾಜನ ಚಿಂತನೆ ಒಂದಾದರೆ ಅಧಿಕಾರಿಗಳ ಚಿಂತನೆಯೇ ಒಂದು ಎಂಬಂತಿರಬಾರದು. ವ್ಯವಸ್ಥೆ ಪರಸ್ಪರ ಹೊಂದಾಣಿಕೆಯಲ್ಲಿ ಇರಬೇಕು. ರಾಜನಿಗೆ ತಿಳಿಯದಂತೆ ನೇಮಕ- ನಾಮಕರಣ- ಆದೇಶ ಹೊರಡಿಸುವುದು ಅರಾಜಕತೆಯನ್ನು ಉತ್ತೇಜಿಸಿದಂತೆ ಆಗುವುದು. ಆಮೇಲೆ ಸ್ಪಷ್ಟೀಕರಣ ಕೊಡುವ ಬದಲು ರಾಜನಾದವನಿಗೆ ಈ ಎಲ್ಲಾ ವ್ಯವಸ್ಥೆಯ ಮೇಲೆ ಪೂರ್ಣ ಹಿಡಿತ ಇರಬೇಕು. ಇದಲ್ಲದೆ ಶತ್ರುಗಳ ಕಾಟದಿಂದ ನೀನು ಮುಕ್ತನಾಗಿರುವೆಯಾ? ದಿನವೂ ಶತ್ರುಗಳನ್ನು ಮನದಲ್ಲಿ ನೆನೆಯಲು ಅವರೇನು ನಮ್ಮ ಮನೆದೇವರಲ್ಲ. ಅಂತಹ ಪರಿಸ್ಥಿತಿ ಶತ್ರುವಿಗೂ ಬರಬಾರದು. ದೇಶವು ಅಥವಾ ರಾಷ್ಟ್ರವು ಶತ್ರುಗಳ ಉಪಟಳದಿಂದ ಮುಕ್ತವಾದರೆ ಅದೇ ರಾಮರಾಜ್ಯ. ಅವರನ್ನೆಲ್ಲ ಸದೆಬಡಿದು ಅವರು ತಮ್ಮ ಸಮಸ್ಯೆ ಬಗೆಹರಿಸುವುದರಲ್ಲೇ ಮುಳುಗುವಂತೆ ಮಾಡುವುದು ಉತ್ತಮ ಆಡಳಿತಗಾರನ ಲಕ್ಷಣ. ಇನ್ನು ಮುಂದಿನ ವಿಚಾರ ದೈವಕರ್ಮ ಹಾಗೂ ಮಾನುಷ ಕರ್ಮ. ಯಜ್ಞ- ಯಾಗ- ವ್ರತ- ಪೂಜೆಗಳು ರಾಜನನ್ನು ರಾಜ್ಯವನ್ನು ಸಂರಕ್ಷಿಸುವಂತಹವು ಹಾಗೂ ರಾಷ್ಟ್ರದ ಸಮೃದ್ಧಿಯನ್ನು ತರುವಂತಹವು. ಅವುಗಳನ್ನು ಕಾಲಕಾಲಕ್ಕೆ ನಡೆಸುತ್ತಿರುವೆಯಲ್ಲ. ಮಾನುಷ ಕರ್ಮವೆಂದರೆ ಮನೆಗೆ ಬಂದವರನ್ನು ಆದರಿಸಿ ಉಪಚರಿಸಿ ಯಥಾಶಕ್ತಿ ಸತ್ಕಾರ- ಗೌರವ ನೀಡುವಂತಹದು. ಒಂದೆಡೆ ಪರೋಕ್ಷ ಆರಾಧನೆಯಾದರೆ ಮತ್ತೊಂದು ಕಡೆ ಪ್ರತ್ಯಕ್ಷ ಆರಾಧನೆ. ಇದನ್ನೂ ಯಥಾಶಾಸ್ತ್ರೀಯವಾಗಿ ನಡೆಸುತ್ತಿರುವೆಯಲ್ಲ. ಎಂತಹ ವಿಶ್ವಕಲ್ಯಾಣದ ಚಿಂತನೆ. ಎರಡು ಪ್ರಶ್ನೆಗಳಲ್ಲೇ ವಿಶ್ವಾಮಿತ್ರರ ವೈಶ್ವಿಕ ಮಿತ್ರತ್ವವು ತೋರುವುದು. ಹಾಗಾಗಿಯೇ ಅವರು ಬ್ರಹ್ಮರ್ಷಿಗಳಾದುದು. ರಾಜನ ಚಿಂತೆಗೆ ಪರಿಹಾರವೆಂಬಂತೆ ಅವರ ಆಗಮನವಾದುದು._
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
ಎಲ್ಲಾ ಲೇಖನಗಳಿಗೆ ಒಮ್ಮೆ ತೆರೆದು ನೋಡಿ. ತಪ್ಪುಗಳಿದ್ದಲ್ಲಿ ತಿದ್ದಿ ಮುನ್ನಡೆಸಿ.
http://shreenidhiabhyankar.blogspot.com_

http://shreenidhiabhyankar.blogspot.com

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ