ವಿಕ್ರಮೋರ್ವಶೀಯ ಪದ್ಯ ೬

📔👳‍♀️💛👩‍🦱📒 *ವಿಕ್ರಮೋರ್ವಶೀಯ*  ಪದ್ಯ-೬

*एषा मनो मे प्रसभं शरीरात्पितुः पदं मध्यममुत्पतन्ती। सुराङ्गना कर्षति खण्डिताग्रात्सूत्रं मृणालादिव राजहंसी।।*

_ಧರೆಗಿಳಿದ ಊರ್ವಶಿ ಮತ್ತೆ ತ್ರಿವಿಕ್ರಮನ ಮಧ್ಯಮ ಪಾದದೆಡೆಗೆ ನೆಗೆದಿದ್ದಾಳೆ. ಇತ್ತ ಪುರೂರವನಿಗೆ ಚಿಂತೆ ಆವರಿಸುತ್ತಿದೆ. ರಾಜಹಂಸವು ಬಹಳ ನಾಜೂಕಾಗಿ ಮೊದಲೇ ಕತ್ತರಿಸಿದ ಕಮಲದ ದಂಟಿನಿಂದ ನಾರನ್ನು ಬಿಡಿಸಿ ಒಯ್ಯುವಂತೆ ಈ ಅತಿಲೋಕ ಸುಂದರಿಯು ನನ್ನೀ ಮನವನ್ನು ಶರೀರದಿಂದ ಕತ್ತರಿಸಿ ಶೋಷಿಸುತ್ತಿರುವಳಲ್ಲ! ಅಯ್ಯೋ. ರಾಕ್ಷಸಪೀಡಿತ ಸುರಾಂಗನೆ ಊರ್ವಶಿಯು ರಾಜನ ಪರಾಕ್ರಮದಿಂದ ಬಂಧನದಿಂದ ಬಿಡುಗಡೆಗೊಂಡು ತನ್ನ ವಾಸವೆನಿಸಿದ ಗಂಧರ್ವಲೋಕಕ್ಕೆ ತೆರಳುತ್ತಿದ್ದಾಳೆ. ಆಕಾಶಮಾರ್ಗದಲ್ಲಿ ಹಾರುತ್ತಾ ಹೋಗುತ್ತಿರುವಳು. ರಾಜನಿಗೆ ಅವಳ ಅಗಲುವಿಕೆ ಅಸಹನೀಯವೆನಿಸತೊಡಗಿದೆ. ಕವಿ ಇದನ್ನೇ ಹೀಗೆ ವರ್ಣಿಸಿದ್ದಾನೆ. ಕಮಲದ ದೇಟಿನಿಂದ ತಂತುವನ್ನು ಬೇರ್ಪಡಿಸುವ ನಾಜೂಕು ರಾಜಹಂಸಗಳ ವೈಶಿಷ್ಟ್ಯವಾದರೆ ಜಿತೇಂದ್ರಿಯನಾದ ಪುರೂರವನ ಮನವನ್ನು ಸೆಳೆಯುವ ಕಲೆ ಈ ಸುರಾಂಗನೆಯ ವೈಶಿಷ್ಟ್ಯ. ಇಲ್ಲಿ ವಿಷ್ಣುವಿನ ವಾಮನಾವತಾರದ  ಉಲ್ಲೇಖ ಮಾಡಿರುವುದು ಕವಿಯ ಜಾಣ್ಮೆ. ಬಲಿಯ ಬಳಿ ಎರಡನೇ ಪಾದ ಎಲ್ಲಿಡಲಿ ಎಂದಾಗ ಆಕಾಶ ತೋರಲಾಗಿ ವ್ಯಾಪಕನಾಗುವನು ವಾಮನ. ಶರೀರದಿಂದ ಮನವನ್ನು ಬೇರ್ಪಡಿಸುವುದು ಎಂದರೆ ಅವಳ ಧ್ಯಾನದಲ್ಲೇ ಮುಳುಗುವುದು ಹಾಗೂ ತನ್ನ ಬಯಕೆಗಳನ್ನು ಮರೆಯುವುದು. ಕವಿ ಅದನ್ನು ರಸಮಯವಾಗಿಸಿದ್ದಾನೆ._

ಸಂಕಲನ: ಶ್ರೀನಿಧಿ ಅಭ್ಯಂಕರ್. ಪ್ರಮಾದಗಳಿದ್ದಲ್ಲಿ ತಿದ್ದಿ ಮುನ್ನಡೆಸಿ.

http://shreenidhiabhyankar.blogspot.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩