ಧರ್ಮ ಸೂಕ್ಷ್ಮ
ಧರ್ಮಸೂಕ್ಷ್ಮ
सत्यामपि तपःसिद्धौ नियमापेक्षया मुनिः। कल्पवित् कल्पयामास वन्यामेवास्य संविधाम्।। रघुवंशम्।
ದಿಲೀಪನು ವ್ರತದ ನಿಯಮ ಪಾಲಿಸಿ ಫಲ ಪಡೆಯಲೆಂಬ ಇಚ್ಛೆಯಿಂದ ವಸಿಷ್ಠನು ರಾಜನಿಗೆ ಬೇಕುಬೇಕಾದ್ದನ್ನು ಅನುಕೂಲ ಮಾಡಿಕೊಡುವ ಸಾಮರ್ಥ್ಯ ಇದ್ದರೂ ಗುಡಿಸಲ ವಾಸವನ್ನೇ ಒದಗಿಸಿದನು. ಒಂದು ಕಾಮನೆ ಇಟ್ಟುಕೊಂಡು ಕರ್ಮದಲ್ಲಿ ತೊಡಗಿದಾಗ ಆ ಕರ್ಮೋಕ್ತ ನಿಯಮ ಪಾಲಿಸುವುದು ಅತ್ಯಂತ ಅವಶ್ಯಕ. ಯಜಮಾನನ ಕರ್ಮವನ್ನು ತಾನು ಮಾಡುವ ಪುರೋಹಿತನು ಈ ವಿಷಯದಲ್ಲಿ ಎಚ್ಚರ ವಹಿಸಬೇಕು. ಶ್ರೀಮಂತ ಅಥವಾ ಪ್ರತಿಷ್ಠಿತ ಇತ್ಯಾದಿ ಕಾರಣದಿಂದ ಕರ್ಮದ ನಿಯಮಗಳ ವಿನಾಯಿತಿ ಅಥವಾ ಔದಾಸೀನ್ಯವು ಎಂದಿಗೂ ಸಲ್ಲದು. ಹಾಗೆ ಮಾಡಿದರೆ ಕಾರಯಿತಾ ಚ ಸಮಭಾಗೀ ಎಂಬಂತೆ ನಾವು ಪಾಪಭಾಗಿಗಳಾಗಬೇಕಾದೀತು. ವಸಿಷ್ಠರ ನಡೆಯೇ ನಮಗೆ ಆದರ್ಶ.
ಲೇಖನ: ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ