ಧರ್ಮಶಾಸ್ತ್ರ
ಧರ್ಮಶಾಸ್ತ್ರ
काममामरणात् तिष्ठेत् गृहे कन्यर्तुमत्यपि। न चैवैनां प्रयच्छेत्तु गुणहीनाय कर्हिचित्।। ಮನುಸ್ಮೃತಿ.
ಮನುವು ಸ್ತ್ರೀಯರ ವಿಷಯದಲ್ಲಿ ಎಷ್ಟು ಒಳ್ಳೆಯ ಭಾವನೆ ಹೊಂದಿದ್ದನೆಂದು ಇಲ್ಲಿ ಗಮನಿಸಬಹುದು. ಪ್ರಾಪ್ತ ವಯಸ್ಕಳಾದ ತನ್ನ ಮಗಳಿಗೆ ಯೋಗ್ಯನಾದ ವರ ಅಕಸ್ಮಾತ್ ದೊರಕಲಿಲ್ಲ ಎಂದರೆ ಜೀವನಪೂರ್ತಿ ಮನೆಯಲ್ಲಿ ಅಪ್ಪನೇ ಸಾಕಿದರೂ ಅಡ್ಡಿಯಿಲ್ಲ. ಅದು ಧರ್ಮವಿರುದ್ಧ ಆಗದು ಅಥವಾ ಆಶ್ರಮ ಧರ್ಮ ಲೋಪ ಆಗದು.ಆದರೆ ಎಂದೆಂದಿಗೂ ಅಯೋಗ್ಯನೊಬ್ಬನಿಗೆ ಗಂಡು ಎಂಬ ಏಕೈಕ ಕಾರಣಕ್ಕೆ ಕೊಟ್ಟು ಮದುವೆ ಮಾಡಬಾರದು. ಹಾಗಾಗಿಯೇ ಸಾವಿತ್ರಿಯ ವಿಷಯದಲ್ಲಿ ಅವಳ ತಂದೆ ಉದಾರವಾಗಿದ್ದನು. ಸ್ತ್ರೀ ಎನ್ನುವುದು ಪೂಜ್ಯತೆಯ ಸಂಕೇತ. ಅವಳು ಎಂದಿಗೂ ಅಯೋಗ್ಯರ ಪಾಲಾಗಬಾರದು ಎಂಬ ಎಚ್ಚರ ಮನುವಿನ ಆದೇಶದಲ್ಲಿ ಇದೆ.
ಸಂಗ್ರಹ ಶ್ರೀನಿಧಿ ಅಭ್ಯಂಕರ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ