ರಾಮಾಯಣ ೧೯೩
📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೯೩🏝📖.
*ಅಹಮೇವ ಧನುಷ್ಪಾಣಿರ್ಗೋಪ್ತಾ ಸಮರಮೂರ್ಧನಿ| ಯಾವತ್ಪ್ರಾಣಾನ್ಧರಿಷ್ಯಾಮಿ ತಾವದ್ಯೋತ್ಸ್ಯೇ ನಿಶಾಚರೈಃ||*
_ಮುನಿಗಳ ಮಾತಿಗೆ ದಶರಥನು ಕಂಗೆಟ್ಟು ಕ್ಷಣಕಾಲ ಮೂರ್ಛೆ ಹೋದನು.ಸಾವರಿಸಿಕೊಂಡು ಹೀಗೆನ್ನುವನು- ರಾಮನಿನ್ನೂ ಸಣ್ಣವನು,ಹದಿನಾರೂ ಕಳೆಯದ ಬಾಲಕ, ರಾಕ್ಷಸರ ಮೋಸದ ಮಾಯೆಯೊಂದು ಅವನಿಗರಿಯದು, ಈ ಒಂದು ಅಕ್ಷೌಹಿಣೀ ಸೇನೆಯೊಡನೆ ನಾನೇ ಬಂದು ಕಾದುವೆ, ನನ್ನ ಪ್ರಾಣ ಹೋಗುವ ತನಕ ನಿಶಾಚರರ ಜೊತೆ ಸಮರ್ಥವಾಗಿ ಹೋರಾಡಿ ನಿಮ್ಮ ಯಜ್ಞವನ್ನು ರಕ್ಷಿಸುವೆ. ದಶರಥನ ಕ್ಷಾತ್ರ ಇಲ್ಲಿ ಸಮಯೋಚಿತವಾಗಿ ಅಭಿವ್ಯಕ್ತವಾಗಿದೆ. ಕ್ಷತ್ರಿಯನಾದವನಿಗೆ ಪ್ರಾಣದ ಬಗ್ಗೆ ಭಯ ಇರಬಾರದು. ಯುದ್ಧರಂಗಕ್ಕೆ ಇಳಿದ ಮೇಲೆ ಗೆಲುವೋ ಸೋಲೋ ಗಾಯವೋ ಮರಣವೋ ಯಾವುದನ್ನೂ ಲೆಕ್ಕಿಸದೆ ಮುನ್ನುಗ್ಗುವ ಛಾತಿ ಕ್ಷತ್ರಿಯನಿಗೆ ಅವಶ್ಯವಾಗಿ ಇರಬೇಕಾದದ್ದು. ಹೇಗೆ ಬ್ರಾಹ್ಮಣನಿಗೆ ತನ್ನ ಧರ್ಮಾಚರಣೆಯಲ್ಲಿ ಪ್ರಾಣ ಹೋದರೂ ಸರಿ ಧರ್ಮವಿರೋಧಿ ಕರ್ಮ ಮಾಡಲಾರೆ ಎಂಬ ಆಸ್ಥೆ ಇರಬೇಕೋ ಅಂತೆಯೇ ಕ್ಷತ್ರಿಯನಿಗೆ ಈ ರೀತಿಯ ರಕ್ಷಕಬುದ್ಧಿ ಇರಬೇಕು. ದಶರಥನು ಒಬ್ಬ ಸಮರ್ಥ ಯೋಧನೂ, ರಾಜನೂ ಹೌದೆಂದು ಸಾರಿದ್ದಾನೆ._
*ಷಷ್ಟಿವರ್ಷಸಹಸ್ರಾಣಿ ಮಮ ಜಾತಸ್ಯ ಕೌಶಿಕ| ದುಃಖೇನೋತ್ಪಾದಿತಶ್ಚಾಯಂ ನ ರಾಮಂ ನೇತುಮರ್ಹಸಿ ಜ್ಯೇಷ್ಠಂ ಧರ್ಮಪ್ರಧಾನಂ ಚ ನ ರಾಮಂ ನೇತುಮರ್ಹಸಿ *
_ಮಹರ್ಷಿಗಳೇ, ಅರವತ್ತು ಸಾವಿರ ವರ್ಷಗಳು ಕಳೆದ ಮೇಲೆ ಇವರು ಜನಿಸಿದ್ದಾರೆ.ಇವರನ್ನು ಪಡೆಯಲು ನಾನು ಪಟ್ಟ ಕಷ್ಟ ಅಷ್ಟಿಟ್ಟಲ್ಲ. ನಾಲ್ವರಿದ್ದರೂ ಯಾಕೆ ರಾಮನ ಮೇಲೆ ಅತಿಯಾದ ಅಕ್ಕರೆ ಎಂದರೆ ಜ್ಯೇಷ್ಠತೆ ಒಂದೇ ಕಾರಣವಲ್ಲ. ಧರ್ಮರಕ್ಷಕನಾಗಿ ಇರುವ ಮಗನೆಂಬ ಕಾರಣದಿಂದ ಇವನನ್ನು ಆಪತ್ತಿನಲ್ಲಿ ಸಿಲುಕಿಸಲು ನನ್ನ ಮನಸ್ಸು ಕೇಳುತ್ತಿಲ್ಲ.ಮಕ್ಕಳು ಇದ್ದರೇ ಧರ್ಮದ ದಾರಿಯಲ್ಲಿ ಸಾಗುವವರಿರಬೇಕು. ಹಾಗಿಲ್ಲದ ಮಕ್ಕಳು ಮಕ್ಕಳೇ ಅಲ್ಲ ಎಂಬ ಶಾಸ್ತ್ರದ ಸಾರ ಇಲ್ಲಿ ಮನನೀಯ. ತಂದೆ-ತಾಯಿಯನ್ನು ತನ್ನ ಸತ್ಕರ್ಮಾಚರಣೆಯಿಂದ ಧರ್ಮಪಾಲನೆಯಿಂದ ನರಕಗಾಮಿಗಳಾಗುವುದನ್ನು ತಡೆಯುವ ಮಕ್ಕಳು ಮಾತ್ರ ನಿಜವಾದ ಮಕ್ಕಳು. ತಾವೇ ಧರ್ಮಬಾಹಿರರಾಗಿ ನರಕಮಾರ್ಗದತ್ತ ಹೋಗುವ ಮಕ್ಕಳು ತಂದೆ-ತಾಯಂದಿರನ್ನು ಹೇಗೆ ಉದ್ಧರಿಸಬಲ್ಲರು? ಹಾಗಾಗಿ ರಾಮನ ಮೇಲೆ ಒಲುಮೆ ಧರ್ಮಪ್ರಧಾನ ಎಂಬ ಕಾರಣದಿಂದ. ರಾಮನನ್ನು ಭಜಿಸಬೇಕಾದರೆ ನಾವೂ ಧರ್ಮದ ಹಾದಿಯನ್ನು ಸವೆಸಬೇಕಾಗುತ್ತದೆ._
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
ಎಲ್ಲಾ ಲೇಖನಗಳಿಗೆ ಒಮ್ಮೆ ತೆರೆದು ನೋಡಿ. ತಪ್ಪುಗಳಿದ್ದಲ್ಲಿ ತಿದ್ದಿ ಮುನ್ನಡೆಸಿ.
http://shreenidhiabhyankar.blogspot.com
*ಅಹಮೇವ ಧನುಷ್ಪಾಣಿರ್ಗೋಪ್ತಾ ಸಮರಮೂರ್ಧನಿ| ಯಾವತ್ಪ್ರಾಣಾನ್ಧರಿಷ್ಯಾಮಿ ತಾವದ್ಯೋತ್ಸ್ಯೇ ನಿಶಾಚರೈಃ||*
_ಮುನಿಗಳ ಮಾತಿಗೆ ದಶರಥನು ಕಂಗೆಟ್ಟು ಕ್ಷಣಕಾಲ ಮೂರ್ಛೆ ಹೋದನು.ಸಾವರಿಸಿಕೊಂಡು ಹೀಗೆನ್ನುವನು- ರಾಮನಿನ್ನೂ ಸಣ್ಣವನು,ಹದಿನಾರೂ ಕಳೆಯದ ಬಾಲಕ, ರಾಕ್ಷಸರ ಮೋಸದ ಮಾಯೆಯೊಂದು ಅವನಿಗರಿಯದು, ಈ ಒಂದು ಅಕ್ಷೌಹಿಣೀ ಸೇನೆಯೊಡನೆ ನಾನೇ ಬಂದು ಕಾದುವೆ, ನನ್ನ ಪ್ರಾಣ ಹೋಗುವ ತನಕ ನಿಶಾಚರರ ಜೊತೆ ಸಮರ್ಥವಾಗಿ ಹೋರಾಡಿ ನಿಮ್ಮ ಯಜ್ಞವನ್ನು ರಕ್ಷಿಸುವೆ. ದಶರಥನ ಕ್ಷಾತ್ರ ಇಲ್ಲಿ ಸಮಯೋಚಿತವಾಗಿ ಅಭಿವ್ಯಕ್ತವಾಗಿದೆ. ಕ್ಷತ್ರಿಯನಾದವನಿಗೆ ಪ್ರಾಣದ ಬಗ್ಗೆ ಭಯ ಇರಬಾರದು. ಯುದ್ಧರಂಗಕ್ಕೆ ಇಳಿದ ಮೇಲೆ ಗೆಲುವೋ ಸೋಲೋ ಗಾಯವೋ ಮರಣವೋ ಯಾವುದನ್ನೂ ಲೆಕ್ಕಿಸದೆ ಮುನ್ನುಗ್ಗುವ ಛಾತಿ ಕ್ಷತ್ರಿಯನಿಗೆ ಅವಶ್ಯವಾಗಿ ಇರಬೇಕಾದದ್ದು. ಹೇಗೆ ಬ್ರಾಹ್ಮಣನಿಗೆ ತನ್ನ ಧರ್ಮಾಚರಣೆಯಲ್ಲಿ ಪ್ರಾಣ ಹೋದರೂ ಸರಿ ಧರ್ಮವಿರೋಧಿ ಕರ್ಮ ಮಾಡಲಾರೆ ಎಂಬ ಆಸ್ಥೆ ಇರಬೇಕೋ ಅಂತೆಯೇ ಕ್ಷತ್ರಿಯನಿಗೆ ಈ ರೀತಿಯ ರಕ್ಷಕಬುದ್ಧಿ ಇರಬೇಕು. ದಶರಥನು ಒಬ್ಬ ಸಮರ್ಥ ಯೋಧನೂ, ರಾಜನೂ ಹೌದೆಂದು ಸಾರಿದ್ದಾನೆ._
*ಷಷ್ಟಿವರ್ಷಸಹಸ್ರಾಣಿ ಮಮ ಜಾತಸ್ಯ ಕೌಶಿಕ| ದುಃಖೇನೋತ್ಪಾದಿತಶ್ಚಾಯಂ ನ ರಾಮಂ ನೇತುಮರ್ಹಸಿ
_ಮಹರ್ಷಿಗಳೇ, ಅರವತ್ತು ಸಾವಿರ ವರ್ಷಗಳು ಕಳೆದ ಮೇಲೆ ಇವರು ಜನಿಸಿದ್ದಾರೆ.ಇವರನ್ನು ಪಡೆಯಲು ನಾನು ಪಟ್ಟ ಕಷ್ಟ ಅಷ್ಟಿಟ್ಟಲ್ಲ. ನಾಲ್ವರಿದ್ದರೂ ಯಾಕೆ ರಾಮನ ಮೇಲೆ ಅತಿಯಾದ ಅಕ್ಕರೆ ಎಂದರೆ ಜ್ಯೇಷ್ಠತೆ ಒಂದೇ ಕಾರಣವಲ್ಲ. ಧರ್ಮರಕ್ಷಕನಾಗಿ ಇರುವ ಮಗನೆಂಬ ಕಾರಣದಿಂದ ಇವನನ್ನು ಆಪತ್ತಿನಲ್ಲಿ ಸಿಲುಕಿಸಲು ನನ್ನ ಮನಸ್ಸು ಕೇಳುತ್ತಿಲ್ಲ.ಮಕ್ಕಳು ಇದ್ದರೇ ಧರ್ಮದ ದಾರಿಯಲ್ಲಿ ಸಾಗುವವರಿರಬೇಕು. ಹಾಗಿಲ್ಲದ ಮಕ್ಕಳು ಮಕ್ಕಳೇ ಅಲ್ಲ ಎಂಬ ಶಾಸ್ತ್ರದ ಸಾರ ಇಲ್ಲಿ ಮನನೀಯ. ತಂದೆ-ತಾಯಿಯನ್ನು ತನ್ನ ಸತ್ಕರ್ಮಾಚರಣೆಯಿಂದ ಧರ್ಮಪಾಲನೆಯಿಂದ ನರಕಗಾಮಿಗಳಾಗುವುದನ್ನು ತಡೆಯುವ ಮಕ್ಕಳು ಮಾತ್ರ ನಿಜವಾದ ಮಕ್ಕಳು. ತಾವೇ ಧರ್ಮಬಾಹಿರರಾಗಿ ನರಕಮಾರ್ಗದತ್ತ ಹೋಗುವ ಮಕ್ಕಳು ತಂದೆ-ತಾಯಂದಿರನ್ನು ಹೇಗೆ ಉದ್ಧರಿಸಬಲ್ಲರು? ಹಾಗಾಗಿ ರಾಮನ ಮೇಲೆ ಒಲುಮೆ ಧರ್ಮಪ್ರಧಾನ ಎಂಬ ಕಾರಣದಿಂದ. ರಾಮನನ್ನು ಭಜಿಸಬೇಕಾದರೆ ನಾವೂ ಧರ್ಮದ ಹಾದಿಯನ್ನು ಸವೆಸಬೇಕಾಗುತ್ತದೆ._
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
ಎಲ್ಲಾ ಲೇಖನಗಳಿಗೆ ಒಮ್ಮೆ ತೆರೆದು ನೋಡಿ. ತಪ್ಪುಗಳಿದ್ದಲ್ಲಿ ತಿದ್ದಿ ಮುನ್ನಡೆಸಿ.
http://shreenidhiabhyankar.blogspot.com
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ