ವಿಕ್ರಮೋರ್ವಶೀಯ ೭
📔👳♀️💛👩🦱📒 *ವಿಕ್ರಮೋರ್ವಶೀಯ* ಪದ್ಯ-೭
*आ लोकान्तात्प्रतिहततमोवृत्तिरासां प्रजानां तुल्योद्योगस्तव दिनकृतश्चाधिकारो मतो नः। तिष्ठत्येष क्षणमधिपतिर्ज्योतिषां व्योममध्ये षष्ठे भागे त्वमपि दिवसस्यात्मनश्छन्दवर्ती।।*
_ಕವಿ ಸೂರ್ಯನನ್ನು ಹಾಗೂ ಚಂದ್ರವಂಶದ ಖ್ಯಾತ ದೊರೆ ಪುರೂರವನನ್ನು ಸಮೀಕರಿಸಿ ವರ್ಣಿಸುತ್ತಿದ್ದಾನೆ. ಆ ರವಿಯಾದರೋ ಮೂರು ಲೋಕದ ಜನರ ಕತ್ತಲನ್ನು ಕಳೆವ ಕಾರ್ಯದಲ್ಲಿ ಸದಾ ನಿರತನಾಗಿದ್ದಾನೆ. ನೀನಾದರೂ ಅವನಂತೆಯೇ ಆಲೋಕನ ಎಂದರೆ ದರ್ಶನ ಮಾತ್ರದಿಂದ ಪ್ರಜೆಗಳ ತಪ್ಪು ಗ್ರಹಿಕೆ ಹಾಗೂ ದುಃಖ ಮೊದಲಾದವನ್ನು ಕಳೆಯುತ್ತಿರುವೆ. ಸೂರ್ಯ ಸಹಜವಾಗಿ ದಿನವೂ ಲೋಕಕ್ಕೆ ಬೆಳಕು ನೀಡುವ ಕಾಯಕದಲ್ಲಿ ತೊಡಗಿಕೊಂಡಂತೆ ನೀನು ದರ್ಶನಾಕಾಂಕ್ಷಿಗಳಾಗಿ ಬಂದ ಜನರ ಕಷ್ಟಕ್ಕೆ ಸ್ಪಂದಿಸಿ ಅವರ ಸಂಶಯಗಳನ್ನು ನಿವಾರಿಸಿ ಅವರ ಮನದಲ್ಲಿ ನೆಲೆಸಿದ್ದ ಶೋಕ-ದುಃಖ- ಚಿಂತೆ- ಸಂಶಯಗಳನ್ನು ನಿವಾರಿಸಿ ಅವರ ಬಾಳಿಗೆ ಬೆಳಕಾಗಿರುವಿ. ಹೀಗೆ ಇಬ್ಬರೂ ಸಮಾನವಾದ ಕೆಲಸದಲ್ಲಿ ತೊಡಗಿಕೊಂಡಿರುವಿರೆಂದು ನನ್ನ ಮತ. ರಾಜನೂ ಸೂರ್ಯನಂತೆ ಕೀರ್ತಿಶಾಲಿ ಹಾಗೂ ಲೋಕಕ್ಷೇಮದ ಕಾರ್ಯದಲ್ಲಿ ತೊಡಗಿಕೊಂಡಿರುವನೆಂದು ವೈತಾಲಿಕನ ಹೊಗಳಿಕೆಯ ಸಾರ. ಸೂರ್ಯನಾದರೋ ಮಧ್ಯಾಹ್ನದ ಅರೆಘಳಿಗೆ ತಾರಾಧಿಪತಿಯಾಗಿ ಆಕಾಶದಲ್ಲಿ ವಿರಾಜಿಸುತ್ತಾ ವಿಶ್ರಾಂತಿ ಪಡೆಯುವನು. ರಾಜನಿಗೆ ಯಾವಾಗ ಈ ತರಹದ ಸವಲತ್ತು ಎಂದರೆ ದಿನದ ಕೊನೆಯ ಭಾಗ ಅಥವಾ ಆರನೇ ಯಾಮದಲ್ಲಿ ತನ್ನ ಅಂದಿನ ಎಲ್ಲಾ ಕೃತ್ಯಗಳಿಗೆ ಕೃತಾರ್ಥತೆಯನ್ನು ಅನುಭವಿಸುತ್ತಾ ನಿದ್ದೆಗೆ ಜಾರುವ ರಾಜನೂ ಸೂರ್ಯನೂ ಒಂದೇ ಎಂದು ಕವಿಯ ಒಂದು ಸುಂದರ ಕಲ್ಪನೆ. ನಿಜಕ್ಕಾದರೆ ಸೂರ್ಯನಿಗೆ ವಿಶ್ರಾಂತಿ ಇಲ್ಲ. ಕವಿಯು ಇಲ್ಲಿ ಮಧ್ಯಾಹ್ನದ ನೆತ್ತಿಯ ಮೇಲಿನ ಸೂರ್ಯನ ಸುಡುವಿಕೆಯ ಸಮಯವೇ ವಿಶ್ರಾಂತಿ ಎಂದಿದ್ದಾನೆ. ಸೂರ್ಯನು ಅಂಬರದ ನಡುವೆ ರಾಜನಂತೆ ಶೋಭಿಸುವ ಹೊತ್ತು ಅದು.ಪ್ರಕೃತ ರಾಜನೂ ಪ್ರಜೆಗಳ ಕಷ್ಟವನ್ನು ಕಳೆದು ಎಲ್ಲರ ಮನದ ಹಾರೈಕೆ ಪಡೆದು ಅರಮನೆಯ ಸುಖದ ಸುಪ್ಪತ್ತಿಗೆಯಲ್ಲಿ ಅರೆಘಳಿಗೆ ಪವಡಿಸುವ ಹೊತ್ತು ದಿನದ ಕೊನೆಯ ಯಾಮ. ಹೀಗೆ ಕಾರ್ಯದಲ್ಲೂ ವಿಶ್ರಾಂತಿಯಲ್ಲೂ ಸಮಾನ ಧರ್ಮ ಹೊಂದಿರುವ ನಮ್ಮ ರಾಜನು ಸೂರ್ಯನಂತೆಯೇ ಲೋಕೋಪಕಾರಿ ಹಾಗೂ ಲೋಕೈಕವೀರ ಎಂದು ವೈತಾಲಿಕನ ಒಂದು ಭಾವ._
ಸಂಕಲನ: ಶ್ರೀನಿಧಿ ಅಭ್ಯಂಕರ್. ಪ್ರಮಾದಗಳಿದ್ದಲ್ಲಿ ತಿದ್ದಿ ಮುನ್ನಡೆಸಿ.
http://shreenidhiabhyankar.blogspot.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ