ವಿಕ್ರಮೋರ್ವಶೀಯ ೯
📔👳♀️💛👩🦱📒 *ವಿಕ್ರಮೋರ್ವಶೀಯ* ಪದ್ಯ-९
*निषिञ्चन् माधवीं लक्ष्मीं लतां कौन्दीं च नर्तयन् । स्नेहदाक्षिण्ययोर्योगात्कामीव प्रतिभाति मे।।*
_ಕಾಳಿದಾಸನ ಕವಿಸಮಯಕ್ಕೆ ಈ ಶ್ಲೋಕ ಉತ್ತಮ ಉದಾಹರಣೆ. ಪುರೂರವ ಊರ್ವಶಿಯನ್ನೇ ಕನವರಿಸುತ್ತಾ ಉದ್ಯಾನ ಪ್ರವೇಶಿಸಿದರೆ ಮಂದಮಾರುತವೊಂದು ಸುಳಿಯುತ್ತಲಿದೆ. ಪುರೂರವನು ಆ ಮಾರುತವನ್ನೇ ಕಾಮಿಯೆಂಬಂತೆ ಕಾಣುತ್ತಾದ್ದಾನೆ. ವಸಂತಕಾಲದ ಸೊಬಗನ್ನು ಹೆಚ್ಚಿಸುತ್ತಾ ಕುಂದದ ಲತೆಯನ್ನು ಕುಣಿಸುತ್ತಲಿರುವ ಈ ಮೆಲ್ಲನೆಯ ಗಾಳಿ ಪ್ರೀತಿ ಹಾಗೂ ದಾಕ್ಷಿಣ್ಯದ ಸೋಂಕಿನಿಂದ ಎನಗೆ ಕಾಮಿಯಂತೆ ತೋರುತ್ತಿದೆ. ಕಾಮಿನಿಯೋರ್ವಳು ನಾಚಿಕೆಯಿಂದ ವಯ್ಯಾರ ತೋರುತ್ತಾ ಬರುತ್ತಿರುವಂತೆ ಈ ಮಾರುತವೂ ಮಂದವಾಗಿ ಪ್ರಕೃತಿಯನ್ನು ಅತ್ತಿಂದಿತ್ತ ಚಲಿಸುವಂತೆ ಮಾಡಿ ಮನದ ಸಂಸ್ಕಾರಗಳೆಲ್ಲವೂ ಮಧುರಭಾವದೆಡೆಗೆ ಸಂಚರಿಸುವಂತೆ ಮಾಡುತ್ತಿದೆ. ಪ್ರಿಯಳೇ ನನ್ನ ಅರಸಿ ಬಂದಂತೆ ಭಾಸವಾಗುತ್ತಿದೆ. ಕವಿಗೆ ಭಾವ ತೋರಲು ಅನಲವಾದರೇನು ಅನಿಲವಾದರೇನು! ಕಲ್ಪನೆ ಮಧುರ ಭಾವವನ್ನು ವ್ಯಕ್ತಪಡಿಸಬೇಕು.ಸ್ನೇಹ ಎಂದರೆ ಸಂಸ್ಕೃತದಲ್ಲಿ ಮೂಲತಃ ಅಂಟು ಎಂಬರ್ಥ. ಪ್ರೀತಿಯೂ ಒಂದು ಬಗೆಯ ಮನದ ಅಂಟು. ಆ ಪ್ರೀತಿಯ ಅಭಿವ್ಯಕ್ತಿಗೆ ದಾಕ್ಷಿಣ್ಯವು ಅಂದರೆ ಸಂಕೋಚವು ಒಂದಾದರೆ ಇನ್ನೂ ಸೊಗಸು. ಎಲ್ಲಾ ಭಾವಗಳ ನೇರಾನೇರ ಅಭಿವ್ಯಕ್ತಿಯು ಕುತೂಹಲವನ್ನು ಅಥವಾ ಮಾಧುರ್ಯವನ್ನು ಉಂಟುಮಾಡದು.ಇದನ್ನೇ ಕವಿ ಹೇಳಿದ್ದು ಸರಸಕ್ಕೆ ಬಂದ ಮನದರಸಿಯಂತೆ ಎಂದು._
_
ಸಂಕಲನ: ಶ್ರೀನಿಧಿ ಅಭ್ಯಂಕರ್. ಪ್ರಮಾದಗಳಿದ್ದಲ್ಲಿ ತಿದ್ದಿ ಮುನ್ನಡೆಸಿ.
http://shreenidhiabhyankar.blogspot.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ