ರಾಮಾಯಣ ೧೩೨

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೩೨ 🏝📖

*ಯಸ್ಯಾರ್ಥಾಸ್ತಸ್ಯ ಮಿತ್ರಾಣಿ ಯಸ್ಯಾರ್ಥಾಸ್ತಸ್ಯ ಬಾಂಧವಾಃ ಯಸ್ಯಾರ್ಥಾಃ ಸ ಪುಮಾನ್ ಲೋಕೇ ಯಸ್ಯಾರ್ಥಾಃ ಸ ಚ ಪಂಡಿತಃ*   *ಯಸ್ಯಾರ್ಥಾಃ ಸಚ ವಿಕ್ರಾಂತೋ ಯಸ್ಯಾರ್ಥಾಃ ಸಚ ಬುದ್ಧಿಮಾನ್ ಯಸ್ಯಾರ್ಥಾಃ ಸ ಮಹಾಭಾಗೋ ಯಸ್ಯಾರ್ಥಾಃ ಸ ಗುಣಾಧಿಕಃ*


_ವೈದೇಹಿಯನ್ನು ರಾವಣಿ ಕೊಂದನೆಂದು ರಾಮನು ದುಃಖಿಸುತ್ತಿದ್ದಾಗ ಸೌಮಿತ್ರಿಯ ಧರ್ಮದ ನಿಂದೆಯ ಮಾತಿನ ಮೂಲಕ ಸಂತೈಸುವಿಕೆ. ರಾಮ, ಧರ್ಮ ಯಾವುದಕ್ಕೂ ಪ್ರಯೋಜನ ಇಲ್ಲ. ಸುಖ, ಅಧಿಕಾರ ಇವುಗಳೇ ಶಾಶ್ವತ. ಹಣವಿದ್ದರೆ ಎಲ್ಲರೂ ಮಿತ್ರರು, ಎಲ್ಲರೂ ಬಂಧುಗಳು, ಅವನೇ ಶ್ರೇಷ್ಠ ಪುರುಷ, ಅವನೇ ಪಂಡಿತ, ಅವನೇ ಪರಾಕ್ರಮಿ, ಅವನೇ ಬುದ್ಧಿವಂತ, ಅವನೇ ದೊಡ್ಡ ಮನುಷ್ಯ, ಅವನೇ ಗುಣಶಾಲಿ. ಲೋಕದಲ್ಲಿ ಮೇಲ್ನೋಟಕ್ಕೆ ಕಾಣುವ ಸಾಮಾನ್ಯರ ಭಾವನೆಗಳನ್ನು ಲಕ್ಷ್ಮಣ ಇಲ್ಲಿ ತೋರ್ಪಡಿಸಿದ್ದಾನೆ. ನೀನು ರಾಜ್ಯತ್ಯಾಗವೆಂಬ ಧರ್ಮವನ್ನು ಆಶ್ರಯಿಸಿ ಇಂತಹ ಅವಸ್ಥೆ ಅನುಭವಿಸುತ್ತಿರುವೆ. ಸಂದರ್ಭ ನೋಡಿ ಧರ್ಮವನ್ನು ಆಚರಿಸಬೇಕು. ಎಲ್ಲಾ ಸಮಯದ ಧರ್ಮದ ಆಚರಣೆ ನಮ್ಮನ್ನು ರಕ್ಷಿಸಲಾರದು. ಅರೆ, ಚಾರ್ವಾಕನ ಮಾತುಗಳನ್ನು ಲಕ್ಷ್ಮಣನಂತಹ ಧಾರ್ಮಿಕ ಏಕೆ ಆಡುತ್ತಿದ್ದಾನೆಂದು ಶಂಕಿಸದಿರಿ. ಅಣ್ಣನ ದುಃಖವನ್ನು ಕಂಡು ಸೌಮಿತ್ರಿಯ ಮನಸ್ಸು ಏನು ಮಾಡಬೇಕೆಂದು ತೋಚದೇ ಹೀಗೆ ಮಾತನಾಡಿಸುತ್ತಿದೆ. ನಿಜಕ್ಕಾದರೆ ಧರ್ಮದ ಮೇಲಿನ ಇಂತಹ ನಿಂದೆಯು ರಾಮನಿಗೆ ಸೀತಾವಿಯೋಗಕ್ಕಿಂತಲೂ ಹೆಚ್ಚು ದುಃಖ ತರುವುದು. ಹಣವೊಂದೇ ಎಲ್ಲವೂ ಹೌದಾಗಿದ್ದರೆ ಲೋಕದಲ್ಲಿ ಹಣವಂತರು ಬಹಳ ಸುಖವಾಗಿ ಇರುತ್ತಿದ್ದರು. ಮೇಲ್ನೋಟಕ್ಕೆ ಹಾಗೆ ಕಂಡರೂ ನಿಜಾಂಶ ಬೇರೆಯದೇ ಇದೆ.ಹಣವಂತರ ಬಳಿ ನಂಬುಗೆಯ ಮಿತ್ರರಿಲ್ಲ, ಇರುವ ಮಿತ್ರರು ಯಾವಾಗ ಇವರ‌ನ್ನೇ ಹಣಕ್ಕಾಗಿ ವಂಚಿಸುವರೋ ಎಂಬ ಭಯ. ಬಂಧುಗಳು ದಾನಿಯಾಗಿದ್ದರೆ ಇವನನ್ನು ಆಶ್ರಯಿಸಿಯಾರು ಹೊರತು ಬೇರೆ ಪಕ್ಷದಲ್ಲಿ ಅಲ್ಲ.ಬಂಧುಗಳೇ ಹಣಕ್ಕಾಗಿ ಕೊಲ್ಲುವುದು ನಾವು ದಿನವೂ ಕೇಳುವ ವಾರ್ತೆ. ಇನ್ನು ಎಷ್ಟು ಹಣವಿದ್ದರೂ ಸ್ತ್ರೀಯರು ಅಂತಹ ವ್ಯಕ್ತಿಗಳನ್ನು ಕಾಲುಕಸದಂತೆ ಬಿಟ್ಟು ಹೋಗುತ್ತಿರುವುದು ಕಂಡರೆ ಪುರುಷತ್ವದ ನಿರ್ಧಾರಕ ಹಣವಲ್ಲ ಎಂದು ಸಾಬೀತಾಗುತ್ತದೆ. ಹಣವುಳ್ಳವರು ತಮ್ಮ ಹಣದ ರಕ್ಷಣೆಗಾಗಿ, ವೃದ್ಧಿಗಾಗಿ ವಿದ್ಯಾವಂತರನ್ನು ನೇಮಕ ಮಾಡಿಕೊಳ್ಳುವಾಗ ಪಾಂಡಿತ್ಯ ಯಾರನ್ನು ಆಶ್ರಯಿಸಿದೆ ಎಂಬ ಸತ್ಯದ ಅರಿವಾಗುತ್ತದೆ. ಪರಾಕ್ರಮಿಗಳಾಗಿದ್ದಲ್ಲಿ ಹಾಡಹಗಲೇ ನಡುರಸ್ತೆಯಲ್ಲಿ ಅಥವಾ ತುಂಬಿದ ಸಂಭ್ರಮದಲ್ಲಿ ಹಣವಂತರನ್ನು ಯಾರೋ ಒಬ್ಬರು ಕೊಂದು ಕೆಡವುವುದು ಸಂಭವಿಸುತ್ತಿರಲಿಲ್ಲ ಅಥವಾ ಆಪತ್ತುಗಳಾವುವೂ ಅವರ ಬಳಿ ಸುಳಿಯುತ್ತಿರಲಿಲ್ಲ. ನಿಜವಾದ ಬುದ್ಧಿವಂತರಾಗಿದ್ದರೆ ಇನ್ನಾರೋ ಯಾವುದೋ ಊರಿನ ವ್ಯಕ್ತಿ ಕನ್ನ ಹಾಕುವುದು ಸಾಧ್ಯವಾಗುತ್ಸಂಗ್ರಹ📖🖋 ಹಣವುಳ್ಳವರು ಸಾಧುಗಳೆಂದು ಖ್ಯಾತರಾದ ಯಾರ್ಯಾರೋ ಅಲೆಮಾರಿಗಳ ಕಾಲು ಹಿಡಿಯುವುದು ನೋಡುವಾಗ ದೊಡ್ಡ ಮನುಷ್ಯರು ಯಾರೆಂಬ ತಿಳಿವು ಮಕ್ಕಳಿಗೂ ಬಂದೀತು. ಕೊನೆಯದಾಗಿ ಗುಣಶೀಲನೇ ಆಗಿದ್ದರೆ ಲೋಕವೆಂದೂ ಹಣವಂತನನ್ನು ನಿಂದಿಸದು, ಸದಾ ಆರಾಧಿಸೀತು. ಹೀಗೆ ಹಣವಿದ್ದರೂ ಏನೂ ಇಲ್ಲದ ಸ್ಥಿತಿಗಿಂತ ಧರ್ಮವನ್ನು ಆಚರಿಸಿ ಏನೂ ಇಲ್ಲದಿದ್ದರೂ ಧರ್ಮವನ್ನು ಆಚರಿಸಿದ ಸಮಾಧಾನ ಹಾಗೂ ಮನಶ್ಶಾಂತಿ ಖಂಡಿತ ದೊರಕೀತು.ಹಾಗಾಗಿ ಲಕ್ಷ್ಮಣನ ಈ ಮಾತುಗಳು ಮನನೀಯವಲ್ಲ. ಒಳಾರ್ಥದಲ್ಲಿ ಹಣವು ಏನನ್ನೂ ತರಲಾರದೆಂಬ ಸತ್ಯದ ಮುತ್ತುಗಳು._

ಸಂಗ್ರಹ📖🖋ಶ್ರೀನಿಧಿ ಅಭ್ಯಂಕರ್.

ಎಲ್ಲಾ ಲೇಖನಗಳಿಗೆ ಒಮ್ಮೆ ಇಣುಕಿ http://shreenidhiabhyankar.blogspot.in/

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩