💐ಪ್ರತಿಮಾನಾಟಕದ ಒಂದು  ಕುಸುಮ💐

*सत्यसन्ध!  जितक्रोध!  विमत्सर!  जगत्प्रिय । गुरुशुश्रूषणे युक्त!  प्रतिवाक्यं प्रयच्छ मे ।।*

_ದಶರಥನ ರೋದನ ಮೇರೆಮೀರಿದೆ. ಸೀತೆಗೆ ನೀನು ನನ್ನ ಮುದ್ದಿನ ಸೊಸೆಯಾಗಿ ರಾಮ-ಲಕ್ಷ್ಮಣರಂತೆ ಬಿಟ್ಟು ಹೋಗುವುದೇ ಎಂದೆಲ್ಲಾ ಕೇಳಿದ. ಈಗ ಮಗನಾದ ರಾಮನನ್ನು ನೆನಪಿಸಿಕೊಂಡು ದು:ಖಿಸುತ್ತಿದ್ದಾನೆ. ಕೌಸಲ್ಯಾ ಪುತ್ರ ಮಗು ಶ್ರೀ ರಾಮ ಎಲ್ಲಿರುವೆ, ನೀನು ಸತ್ಯಸಂಧ, ಸತ್ಯದ ದಾರಿಯನ್ನು ಎಂದೂ ಬಿಟ್ಟವನಲ್ಲ, ಕೋಪವನ್ನು ಗೆದ್ದವನು, ಅಕಾರಣವಾಗಿ ಅಥವಾ ವ್ಯರ್ಥವಾಗಿ ಯಾರ ಮೇಲೂ ಕೋಪ ಮಾಡಿಕೊಂಡದ್ದಿಲ್ಲ, ಅಸೂಯೆ ನಿನ್ನ ಬಳಿ ಸುಳಿಯಲಾರದು, ಹಾಗಾಗಿಯೇ ನೀನು ಅನ್ಯರ ಏಳಿಗೆಯನ್ನು ಕಂಡು ಕೊರಗಿದವನಲ್ಲ, ನಿರ್ಮತ್ಸರಿ ನೀನು, ಇಷ್ಟೆಲ್ಲಾ ಗುಣಗಳಿಂದ ಕೂಡಿ ಲೋಕದ ಜೀವಿಗಳಿಗೆ ಪ್ರಿಯನಾದವನು, ತಾನು ಹಿರಿಯ ಪುತ್ರನಾದರೂ ನೀನು ಗುರು ಶುಶ್ರೂಷೆಯನ್ನೆಂದೂ ತ್ಯಜಿಸಿದವನಲ್ಲ, ಗುರು ಹಿರಿಯರ ಮಾತಿಗೆ ಗೌರವ ಕೊಟ್ಟು ವಿನೀತನಾಗಿ ಇದ್ದವನು , ಈಗ ಈ ನಿನ್ನ ತಂದೆಗೆ ಉತ್ತರ ಕೊಡಲಾರದೆ ಹೋದೆಯಲ್ಲ! ನನಗೆ ನನ್ನ ಪ್ರಶ್ನೆಗೆ ಉತ್ತರಿಸು! ಯಾಕೆ ನನ್ನನ್ನು ಬಿಟ್ಟು ದೂರ ಹೋಗುತ್ತಿರುವೆ! ಎಂದೂ ನನ್ನ ಮಾತನ್ನು ಮೀರದವನು ಇಂದು ಮಾತ್ರ ನನ್ನ ಪ್ರಶ್ನೆಗೆ ಉತ್ತರಿಸುತ್ತಿಲ್ಲವಲ್ಲಾ ರಾಮ ಬೇಗ ಉತ್ತರಿಸು! ಪರಿಕರ ಅಲಂಕಾರ. ಅಪ್ಪನ ಮಾತನ್ನು ಸತ್ಯ ಮಾಡಲು ತೆರಳಿದ ಕಾರಣ ಸತ್ಯಸಂಧ, ಕೈಕೇಯಿಯ ಕಾರಣದಿಂದ ವನಗಮನ ಒದಗಿದರೂ ಕೋಪಗೊಳ್ಳದಿರುವ ಕಾರಣ ಜಿತಕ್ರೋಧ, ತನ್ನ ಯೌವರಾಜ್ಯಾಭಿಷೇಕ ಭರತನ ಪಾಲಾದರೂ ಮತ್ಸರಿಸದೇ ಒಪ್ಪಿದ ಕಾರಣ ವಿಮತ್ಸರ, ಹಾಗಾಗಿಯೇ ಜಗದ ಜನರ ಪ್ರೀತಿಪಾತ್ರ, ತಂದೆ ತಾಯಂದಿರ ಸೇವೆ ಬಿಡದ ಸ್ವಭಾವವಾದ್ದರಿಂದ ಗುರುಶುಶ್ರೂಷಣಾ ಯುಕ್ತ, ಈಗ ಉತ್ತರ ಕೊಡು ಎಂದು ಆರ್ತನಾದಗೈಯುತ್ತಿದ್ದಾನೆ ದಶರಥ‌. ರಾಮನ ಗುಣಗಳನ್ನು ಅಳವಡಿಸಿಕೊಂಡು ಲೋಕಪ್ರಿಯರಾಗೋಣ ನಾವೆಲ್ಲರೂ._

📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩