💐ಪ್ರತಿಮಾ ನಾಟಕದ ಒಂದು ಕುಸುಮ💐
*सूर्य इव गतो राम: सूर्यं दिवस इव लक्ष्मणोनुगत: । सूर्यदिवसावसाने छायेव न दृश्यते सीता ।।*
_ಸುಂದರವಾದ ಉಪಮೆಗಳಿಂದ ಕವಿ ಸೀತಾರಾಮಲಕ್ಷ್ಮಣರನ್ನು ಸಂಬೋಧಿಸುತ್ತಿದ್ದಾನೆ. ದಶರಥ ಕೊರಗುತ್ತಾ ಹೇಳುವ ಮಾತು. ಮೂವರೂ ನನ್ನನ್ನಗಲಿದರೇ! ರಾಮನು ಸೂರ್ಯನಂತೆ ಕಣ್ಮರೆಯಾದ. ದೃಷ್ಟಿಗೆ ಗೋಚರನಾಗದೇ ಬಹಳ ದೂರ ದಾರಿ ಸಾಗಿಸಿದ. ಸೂರ್ಯನಂತೆ ಮತ್ತೆ ಅಯೋಧ್ಯೆ ಬೆಳಗಿಸಲು ಉದಯಿಸುತ್ತಾನೆ ಎನ್ನುವುದೂ ಭಾವ. ಅಥವಾ ಸೂರ್ಯವಂಶದ ಕುಡಿ ಸೂರ್ಯಸಮಾನನೇ ಅಲ್ಲವೇ! ಯೋಗಿಗಳ ಹೃದಯದ ಅಜ್ಞಾನವೆಂಬ ಅಂಧಕಾರ ನೀಗಿಸುವ ಸುಜ್ಞಾನ ಕರುಣಿಸುವ ಅವರ ಮನವನ್ನು ಬೆಳಗಿಸುವ ಸೂರ್ಯನೂ ಹೌದು. ವಿಶ್ವಾಮಿತ್ರರೆಂಬ ಗಾಯತ್ರಿಯಿಂದ ಲೋಕದ ಕತ್ತಲೆ ಕಳೆಯಲು ತೋರಿಸಲ್ಪಟ್ಟ ಸೂರ್ಯನೂ ರಾಮನೇ ಹೌದು. ಇನ್ನು ಲಕ್ಷ್ಮಣ ಹಗಲಿನಂತೆ ಹಿಂಬಾಲಿಸಿದನು. ಸೂರ್ಯೋದಯಕ್ಕೆ ಆರಂಭವಾಗುವ ಹಗಲು ಸೂರ್ಯ ಅಸ್ತನಾಗುತ್ತಿದ್ದಂತೆ ತಾನೂ ತನ್ನನ್ನು ಮರೆಮಾಚಿಕೊಳ್ಳುತ್ತದೆ. ಅಥವಾ ಕೊನೆಗೊಳ್ಳುವುದು. ಅವರಿಬ್ಬರ ಅನ್ಯೋನ್ಯತೆ ಅಥವಾ ಬೇರ್ಪಡದಿರುವಿಕೆಯನ್ನೇ ಕವಿ ವರ್ಣಿಸಿದ್ದಾನೆ. ಹಗಲು ಮತ್ತು ಸೂರ್ಯ ಎಂದಾದರೂ ಅಗಲಿರುವರೇ! ಸಾಧ್ಯವೇ ಇಲ್ಲ. ಹಾಗೆಯೇ ರಾಮ ಲಕ್ಷ್ಮಣ ರ ಬಾಂಧವ್ಯ. ಅವರಿಬ್ಬರೂ ವನಕ್ಕೆ ತೆರಳಿದ್ದಾರೆ. ಹಗಲು ಹಾಗೂ ಸೂರ್ಯ ಎರಡೂ ಇಲ್ಲದಿದ್ದಾಗ ನೆರಳು ಕಾಣಲು ಸಾಧ್ಯವೇ ಇಲ್ಲ. ಇಲ್ಲಿ ಸೀತೆ ನೆರಳಿನಂತೆ. ಸೂರ್ಯನ ಬೆಳಕೇ ಚಲಿಸುವ ಕಾಲಕ್ಕೆ ನೆರಳು ಕಾಣುತ್ತದೆ. ಅಂದರೆ ರಾಮ ಸೀತೆಯರು ಒಂದಾಗಿಯೇ ಕಾಣುವರು. ಲಕ್ಷ್ಮಣ ಜೊತೆಗಿದ್ದಾಗ ಅಂದರೆ ಹಗಲಿನಲ್ಲಿ ಮಾತ್ರ ಅವರ ಸಾಂಗತ್ಯ. ಹಗಲು ಸೂರ್ಯ ಇಬ್ಬರೂ ಇಲ್ಲದಿರುವಾಗ ನೆರಳಾದರೂ ಹೇಗೆ ಉಳಿದೀತು. ಸೂರ್ಯನಂತಿರುವ ರಾಮ ಹಗಲಿನಂತಿರುವ ಲಕ್ಷ್ಮಣ ಇಲ್ಲದಿರೆ ಸೀತೆ ಒಬ್ಬಳೆ ಅಯೋಧ್ಯೆಯಲ್ಲಿ ಉಳಿಯುವಳೇ! ಅವಳೂ ದಾರಿ ಕ್ರಮಿಸಿದ್ದಾಳೆ. ಅಯ್ಯೋ ಹಾಳು ವಿಧಿಯೇ! ನನ್ನನ್ನು ಮೂವರಿಂದಲೂ ಬೇರ್ಪಡಿಸಿ ಕೊಲ್ಲುತ್ತಿರುವೆಯಲ್ಲ. ಜೀವನ ಅಸ್ತಿತ್ವ ಇರುವುದೇ ಶರೀರ ಆತ್ಮ ಪರಮಾತ್ಮ ರಿಂದಾಗಿ. ಈ ಮೂರೂ ಇಲ್ಲದಿದ್ದಾಗ ಜೀವವೂ ತೆರಳುವುದು ಎಂಬ ಆಧ್ಯಾತ್ಮಿಕ ಸಂದೇಶವೂ ಕವಿಯ ಭಾವ. ರಾಮ ಸೀತೆ ಲಕ್ಷ್ಮಣ ರನ್ನು ಸೂರ್ಯ ದಿನ ಛಾಯೆಗೆ ಹೊಲಿಸಿದ್ದರಿಂದ ಇಲ್ಲಿ ಉಪಮಾ ಅಲಂಕಾರ. ರಾಮನ ಪ್ರತಾಪ ಹಾಗೂ ತೇಜಸ್ಸಿನ ಕಾರಣ ಅವನನ್ನು ಸೂರ್ಯನಿಗೆ ಹೋಲಿಸಿದ್ದು, ಅವನಿಲ್ಲದಿದ್ದಾಗ ಲೋಕದಲ್ಲೆಲ್ಲ ಮೋಹ, ಪ್ರಕೃತ ದಶರಥ ಮೂರ್ಛೆ ಹೊಂದುತ್ತಿರುವನು. ಎಲ್ಲಾ ಕೆಲಸಗಳಿಗೂ ರಾಮನಿಲ್ಲದೆ ವಿರಾಮ. ಲಕ್ಷ್ಮಣ ರಾಮನ ಜೊತೆಗೆ ಪ್ರಯಾಣ ಬೆಳೆಸಿದ್ದು ರವಿಯ ಜೊತೆಗೆ ಹಗಲೂ ಕಣ್ಮರೆಯಾದಂತೆ. ಸೀತೆಯನ್ನು ಛಾಯೆಗೆ ಹೋಲಿಸಿದ್ದು ಪತಿಯನ್ನು ಬಿಟ್ಟು ಅರೆಕ್ಷಣವೂ ಇರಲಾರದ ಭಾವ. ಇವರೆಲ್ಲರೂ ಮುಂದೊಂದು ದಿನ ಹಿಂತಿರುಗಿ ಬರುವರು, ಹೇಗೆ ಅಸ್ತಮಿತನಾದ ಸೂರ್ಯನೂ ಅವನೊಡನೆ ಛಾಯೆಯೂ ದಿವಸವೂ ಬರುವುದೋ ಹಾಗೇ ಅಯೋಧ್ಯೆಯ ಬೆಳಕು ಕಾಣುವುದು ಎಂಬ ಅರ್ಥದಲ್ಲಿ ವರ್ಣನೆ. ನಮ್ಮ ಬಾಳೂ ರಾಮನಾಮ ಸ್ಮರಣೆ ಇಲ್ಲದೆ ಬೆಳಕನ್ನು ಕಾಣಲಾರದು. ಅದನ್ನು ರೂಢಿಸಿಕೊಂಡು ಬಾಳನ್ನು ಬೆಳಗಿಸೋಣ._
📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ