🌹ಶಾಕುಂತಲದ ಒಂದು ಸೌರಭ 🌹
*कृताभिमर्षामनुमन्यमान: सुता त्वया नाम मुनिर्विमान्य: । मुष्टं प्रतिग्राहयता स्वमर्थं पात्रीकृतो दस्युरिवासि येन ।।*
_ದುಷ್ಯಂತ ಶಕುಂತಲೆಯನ್ನು ವರಿಸಿರುವುದನ್ನು ಒಪ್ಪುತ್ತಿಲ್ಲ. ಈ ಸಂದರ್ಭದಲ್ಲಿ ಸಿಟ್ಟುಗೊಂಡ ಶಾರ್ಙರವನಾಡುವ ಮಾತು. ನಿನ್ನಿಂದ ಆಕ್ರಮಿಸಲ್ಪಟ್ಟ ತನ್ನ ಮಗಳನ್ನು ಕ್ಷಮಿಸಿದ ಕಣ್ವ ಮುನಿಯು ಹೀಗೆ ಅವಮಾನಿಸಲ್ಪಡುತ್ತಿದ್ದಾನೆ. ನೀವಿಬ್ಬರೂ ಯಾರಿಗೂ ತಿಳಿಸದೇ ನಿಮ್ಮಷ್ಟಕ್ಕೆ ಸಂಬಂಧ ಮಾಡಿಕೊಂಡರೂ ಸಿಟ್ಟು ಮಾಡಿಕೊಂಡು ರಂಪ ಮಾಡದೇ ಇಬ್ಬರನ್ನು ಕಣ್ವರು ಕ್ಷಮಿಸಿದರು. ಆದರೆ ಈಗ ಇವಳನ್ನು ತಿರಸ್ಕರಿಸುವ ಮಾತನಾಡುತ್ತಿರುವ ನೀನು ಅವರ ಕ್ಷಮೆಗೆ ಅರ್ಹನಾಗದೇ ಅವರನ್ನು ಅವಮಾನ ಮಾಡುತ್ತಿರುವೆ. ಇದು ಹೇಗೆಂದರೆ ಮುನಿಯು ಕದ್ದು ತೆಗೆದುಕೊಂಡ ವಸ್ತುವನ್ನು ಕಳ್ಳನಿಗೇ ದಾನ ಕೊಟ್ಟು ಅವನನ್ನೇ ದಾನಕ್ಕೆ ಪಾತ್ರನನ್ನಾಗಿಸಿದ್ದಾನೆ. ನಿಜವಾಗಿಯಾದರೆ ಕಳ್ಳತನಕ್ಕೆ ಶಿಕ್ಷೆ ವಿಧಿಸಬೇಕಿತ್ತು. ಆದರೆ ಕರುಣಾಮಯಿ ಮಹರ್ಷಿ ಮಗಳ ಮೈಮನಗಳನ್ನು ಸೂರೆಗೊಂಡ ನಿನ್ನನ್ನು ಉದಾರವಾಗಿ ಕ್ಷಮಿಸಿ ಮತ್ತೆ ನಿನಗೇ ಮಗಳನ್ನು ಧಾರೆಯೆರೆದು ಕೊಡುತ್ತಿರುವನು. ಆದರೆ ನೀನು ಅವರ ಕ್ಷಮಾಗುಣವನ್ನು ದುರುಪಯೋಗ ಮಾಡಿಕೊಂಡು ಇವಳನ್ನು ತಿರಸ್ಕರಿಸುವ ಮೂಲಕ ಅವರಿಗೆ ಅವರ ಸಾಮರ್ಥ್ಯಕ್ಕೆ ಅವಮಾನ ಮಾಡುತ್ತಿರುವೆ. ಹೀಗೆ ನೀನು ಮಾಡುತ್ತಿರುವುದು ಸರಿಯೇ? ಲೋಕದಲ್ಲಿ ಕಳ್ಳನಿಗೇ ಕದ್ದ ವಸ್ತುಗಳನ್ನು ದಾನವಾಗಿ ಯಾರೂ ನೀಡಲಾರರು. ಆದರೆ ಅದನ್ನೂ ಮಾಡಿದ ಮಹರ್ಷಿಗಳ ಮನವನ್ನು ನೋಯಿಸುವ ಕೆಲಸ ನಿನಗೆ ತರವಲ್ಲ ಎಂಬ ಭಾವ. ನಾವೂ ಕೆಲವೊಮ್ಮೆ ಏನನ್ನೋ ಮಾಡುತ್ತೇವೆಂದು ಮಾತುಕೊಟ್ಟು ವಂಚಿಸುತ್ತೇವೆ. ಆಗೆಲ್ಲ ಮಹರ್ಷಿಗಳನ್ನು ನೆನಪಿಸಿಕೊಂಡು ಮಾತನ್ನು ನಡೆಸೋಣ. ದುಷ್ಯಂತನಂತೆ ಮರೆತು ದುಷ್ಟರಾಗದಿರೋಣ. ತಪೋವನಕ್ಕೆ ಹೋಗಿ ತನ್ನ ಮಗಳನ್ನು ಬಲಾತ್ಕರಿಸಿದ ದುಷ್ಯಂತನ ಮೇಲೆ ಮುನಿಯು ಸಹಜವಾಗಿ ಕೋಪಗೊಳ್ಳದೇ ಮಗಳನ್ನು ಕೊಡಲು ಮುಂದಾದರೂ ನೀನು ಮೊಂಡುತನ ಬಿಡುತ್ತಿಲ್ಲವಲ್ಲ ಎಂದು ಶಾರ್ಙರವ ಕೋಪಗೊಳ್ಳುತ್ತಿರುವುದು. ವಿಷಮ ಅಲಂಕಾರ._
📜ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ