💐ಪ್ರತಿಮಾನಾಟಕದ ಒಂದು ಸುಮ💐
*स्वैरं हि पश्यन्तु कलत्रमेतद् बाष्पाकुलाक्षैर्वदनैर्भवन्त: । निर्दोषदृश्या हि भवन्ति नार्यो यज्ञे विवाहे व्यसने वने च ।।*
_ರಾಮ- ಸೀತೆಯರು ಅಡವಿಗೆ ಹೋಗುತ್ತಿದ್ದಾರೆ. ಜನರೆಲ್ಲ ದು:ಖದಿಂದ ಅಳುತ್ತಿದ್ದಾರೆ. ಆಗ ರಾಮನ ಮಾತು. ಈವರೆಗೂ ಸರಿಯಾಗಿ ನೋಡದಿದ್ದ ಈ ನನ್ನ ಮಡದಿಯನ್ನು ಕಣ್ಣೀರು ತುಂಬಿದ ನಿಮ್ಮಯ ಕಣ್ಣುಗಳಿಂದ ನೋಡಿರಿ. ನಾನು ಆಕ್ಷೇಪಿಸಲಾರೆ. ( ವಿವಾಹ ಮಿಥಿಲೆಯಲ್ಲಿ ನಡೆದದ್ದು, ಅನಂತರ ಆರತಕ್ಷತೆ ಇತ್ಯಾದಿ ರಾಜಕುಟುಂಬದವರಿಗೆ ಮಾತ್ರ ಪ್ರವೇಶ ಇತ್ತೇ ಹೊರತು ಸಾಮಾನ್ಯರಿಗಲ್ಲ. ಹಾಗಾಗಿ ಸೀತೆಯನ್ನು ಪ್ರಜೆಗಳು ಇಲ್ಲಿಯವರೆಗೆ ಸರಿಯಾಗಿ ನೋಡಿಲ್ಲ. ಅಷ್ಟಾಗಿ ಓಡಾಡುವಾಗ ರಥದಲ್ಲಿ ಹೋಗುತ್ತಿದ್ದಳು ಇದೂ ಕಾರಣ. ಮುಖ್ಯವಾಗಿ ಪರಪತ್ನಿಯರನ್ನು ದಿಟ್ಟಿಸಿ ನೊಡುವ ಸಂಸ್ಕೃತಿ ಆಗಿನ ಕಾಲದಲ್ಲಿ ಇರಲಿಲ್ಲ. ಸ್ತ್ರೀಯರ ಬಗೆಗಿನ ಗೌರವ ಎಲ್ಲರಲ್ಲಿ ಸಹಜವಾಗಿತ್ತು.) ನಿಮಗೆ ನಮ್ಮ ಗಮನವು ಕಣ್ಣೀರನ್ನು ತರುತ್ತಿದೆ. ಆದರೂ ಸೀತೆಯನ್ನು ನೋಡುವ ಕುತೂಹಲ ಇದ್ದರೆ ನೋಡಿಬಿಡಿ. ಗಂಡನಾದ ನಾನೇ ಹೀಗೆ ಹೇಳಬಹುದೇ ಎಂಬ ಜನರ ಪ್ರಶ್ನೆಗೆ ರಾಮನೇ ಉತ್ತರಿಸುತ್ತಿದ್ದಾನೆ. ನಾಲ್ಕು ಸಂದರ್ಭಗಳಲ್ಲಿ ಪರಸ್ತ್ರೀಯರನ್ನು ನೋಡಬಹುದು. ಅದು ದೋಷಕಾರಣವಲ್ಲ. ಯಜ್ಞದಲ್ಲಿ ಸಹಧರ್ಮಿಣಿಯಾಗಿ ಪಾಲ್ಗೊಂಡಾಗ, ವಿವಾಹಮಂಟಪದಲ್ಲಿ, ಆಪತ್ತಿಗೆ ಒಳಗಾದಾಗ, ವನಕ್ಕೆ ಹೊರಟಾಗ ಅಥವಾ ವನದಲ್ಲಿ ಅದು ದೋಷ ತಂದುಕೊಡುವುದಿಲ್ಲ. ಹಾಗಾಗಿ ಸೀತೆಯನ್ನು ನೋಡಿ ಪಾಪಿಷ್ಠರಾಗುವುದೆಂಬ ಭೀತಿ ನಿಮಗೆ ಬೇಡ. ಈಗ ವನಕ್ಕೆ ತೆರಳುವ ಸಮಯ ನೋಡುವುದು ಅಪರಾಧವಲ್ಲ. ಯಜ್ಞದಲ್ಲಿ ಪುರೋಹಿತರು ರಾಜರು ವ್ಯಾಪಾರಿಗಳು ಬೇರೆ ಬೇರೆ ವೃತ್ತಿಯ ಜನರು ಸೇರಿರುವಾಗ ಪತ್ನಿ ಪತಿಯ ಜೊತೆಗೆ ಪಾಲ್ಗೊಳ್ಳುವುದು ಅವರ ದೃಷ್ಟಿಗೆ ಬೀಳುವುದು ತಪ್ಪಾಗುವುದಿಲ್ಲ. ಆಗ ಜನರ ಮನದ ಭಾವನೆಯೂ ಒಳ್ಳೆಯದೇ ಇರುತ್ತದೆ. ಇನ್ನು ವಿವಾಹಕಾಲದಲ್ಲಿ ಹರಸಲು ಬಂದವರೆಲ್ಲ ನೋಡಿ ಸರಿಯಾದ ಈಡು-ಜೋಡೆಂದು ನಿಶ್ಚಯಿಸಿ ಹರ್ಷಿಸುತ್ತಾರೆ. ಆ ಸಮಯದಲ್ಲಿ ಕೂಡ ಅವರ ನೋಟ ಒಳ್ಳೆಯದೇ ಆಗಿರುತ್ತದೆ. ಇನ್ನು ಆಪತ್ತಿಗೆ ಒಳಗಾದಾಗ ರಕ್ಷಣೆಯೇ ಮುಖ್ಯ ಉದ್ದೇಶವಾಗಿರುತ್ತದೆ ಹೊರತು ಭಕ್ಷಣೆಯಲ್ಲ. ಹಾಗಾಗಿ ಹೆಚ್ಚು ವಿಚಾರಮಾಡದೇ ಕೂಡಲೇ ಸ್ಪಂದಿಸುವುದು ಮಾನವೀಯತೆ.ಶಾಸ್ತ್ರ ಸಮ್ಮತವೂ ಹೌದು. ನಾಲ್ಕನೆಯದಾಗಿ ಕಾಡಿಗೆ ತೆರಳುವುದು ಅಥವಾ ಕಾಡಿನಲ್ಲಿ ವಾಸಮಾಡುವುದು ವೈರಾಗ್ಯದ ಸಂಕೇತ. ಆಗ ಸ್ತ್ರೀಯರಿಗಿರಬಹುದು, ಉಳಿದವರಿಗಿರಬಹುದು ಕೆಟ್ಟ ಭಾವನೆ ಬರಲಾರದು. ಹೀಗಾಗಿ ಈ ಸಂದರ್ಭದ ನೋಟ ಕೆಟ್ಟದಲ್ಲ. ಉಳಿದ ಸಂದರ್ಭದಲ್ಲಿ ದಿಟ್ಟಿಸಿ ನೋಡುವುದು ಇಬ್ಬರಿಗೂ ಕ್ಲೇಶಕರವೇ ಆಗಿದೆ ಎಂಬುದು ಕವಿಯ ಭಾವ. ಪರವನಿತೆಯರ ಬಗೆಗಿನ ನಮ್ಮ ಭಾವನೆ ಕೆಟ್ಟದಾಗದಿರಲೆಂದು ಆಶಿಸೋಣ._
📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ