🌹ಮೇಘದೂತದ ಒಂದು ತಂಪು ಹನಿ 🌹
*धूमज्योति:सलिलमरुतां सन्निपात: क्वमेघ: सन्देशार्था: क्व पटुकरणै: प्राणिभि: प्रापणीया: । इत्यौत्सुक्यादपरिगणयन्गुह्यकस्तं ययाचे कामार्ता हि प्रकृतिकृपणाश्चेतनाचेतनेषु ।।*
_ಕವಿಯ ಒಂದು ಮಾರ್ಮಿಕ ಮಾತು. ಯಕ್ಷನು ಮೇಘವನ್ನು ಕುಸುಮಗಳಿಂದ ಪೂಜಿಸಿ ಸ್ವಾಗತಿಸಿ ತನ್ನ ಸಂದೇಶವನ್ನು ನಿವೇದಿಸಿಕೊಳ್ಳುತ್ತಿದ್ದಾನೆ. ಆ ಮೇಘ ಅದನ್ನು ಆಲಿಸುತ್ತದೆಯೇ! ಮೋಡವೆಂದರೇನದು! ಧೂಮ, ಬೆಳಕು, ನೀರು, ಗಾಳಿಗಳ ಪಾಕವೇ ಮೇಘ. ಬೇರೆ ಯಾವ ಪ್ರಾಣವೂ ಅದರಲ್ಲಿ ಇಲ್ಲ. ಗಾಳಿಯು ಚಲಿಸಿದಂತೆ ತಾನೂ ಚಲಿಸಿ ಮಳೆ ಸುರಿಸಿ ಕರಗಿಹೋಗುತ್ತದೆ. ಲೋಕದ ಜನರ ಸಂದೇಶಗಳನ್ನು ಒಬ್ಬರಿಂದ ಇನ್ನೊಬ್ಬರಿಗೆ ಕಳುಹಿಸುವ ಇಂದ್ರಿಯಗಳ ಮೂಲಕ ಜ್ಞಾನ ಗ್ರಹಿಸುವ ಅದ್ಭುತ ಸಾಮರ್ಥ್ಯ ಇರುವ ಮನುಷ್ಯರೆಲ್ಲಿ ಈ ಮೋಡವೆಲ್ಲಿ! ಯಾವ ರೀತಿಯಿಂದಲಾದರೂ ಮಾನವನ ಸಾಮರ್ಥ್ಯಕ್ಕೆ ಅದು ನಿಲುಕಬಲ್ಲದೇ! ಇದನ್ನೆಲ್ಲ ಈ ಯಕ್ಷ ವಿಚಾರ ಮಾಡುತ್ತಲೇ ಇಲ್ಲ. ಪ್ರಿಯೆಗೆ ತನ್ನ ಮನದಾಳ ಕಳುಹಿಸುವ ಧಾವಂತ ಅವನದು. ಮೋಡದ ಬಳಿಯೇ ಯಾಚಿಸುತ್ತಿರುವನು ತನ್ನ ಕಾರ್ಯಕ್ಕಾಗಿ ಅವನು. ಲೋಕದಲ್ಲಿ ಕಾಮನೆಗಳ ಈಡೆರಿಕೆಗೆ ಹೊರಟವರು ಚೇತನ ಯಾವುದು ಅಚೇತನವಾವುದು ಎನ್ನುವ ವಿಷಯದಲ್ಲಿ ಅಜ್ಞಾನಿಗಳಾಗಿರುತ್ತಾರೆ. ಈ ಯಕ್ಷನಿಗೆ ತನ್ನ ಪ್ರಿಯಳಿಗೆ ಭಾವ ಅರುಹುವುದೊಂದೇ ಗುರಿ. ಅದರ ಈಡೆರಿಕೆಗೆ ಅವನು ಏನೂ ಬೇಕಾದರೂ ಮಾಡಬಲ್ಲ.ಆದರೆ ಅವನ ಆ ಬಯಕೆ ಎಷ್ಟು ಮನವನ್ನು ವ್ಯಾಪಿಸಿದೆ ಎಂದರೆ ವಿವೇಚನಾ ಶಕ್ತಿಯನ್ನು ಕಳೆದುಕೊಳ್ಳುವಷ್ಟು. ಈ ಮೋಡ ತನ್ನ ಕಾಮವನ್ನು ಈಡೇರಿಸುವುದೇ! ಅಂತಹ ಸಾಮರ್ಥ್ಯ ಇದೆಯೇ! ಇತ್ಯಾದಿ ವಿಚಾರ ಮಾಡದೇ ಅದರ ಬಳಿ ನಿವೇದಿಸಿಕೊಳ್ಳುತ್ತಿರುವ ಇವನು ನಿಜಕ್ಕೂ ಕಾಮಾದಿಂದ ಅಂಧನಾಗಿದ್ದಾನೆ. ಜ್ಞಾನ ವೆಂಬ ಕಣ್ಣು ಕಾಣದಾಗಿದೆ. ಕವಿ ಮೇಘದ ಮೂಲವಸ್ತುಗಳನ್ನೂ ಇಲ್ಲಿ ಸೂಚಿಸಿದ್ದಾನೆ ವಿ-ಜ್ಞಾನಿಯಂತೆ. ಹೊಗೆ ಅಥವಾ ಧೂಳು ಕೂಡ ಮೋಡದ ಅಂಗವೇ. ಬಿಸಿಲು ಬತ್ತಿಸಿದ ನೀರು ಮೋಡವಾಗಿ ಪರಿವರ್ತನೆಗೊಳಪಡುವುದು. ಬೆಳಕು ಅದರದ್ದಲ್ಲ. ವಸ್ತುಗಳ ಮೇಲೆ ಪ್ರತಿಫಲಿತವಾಗುವ ಬೆಳಕೇ ಅದರಲ್ಲೂ ಗೋಚರಿಸುವುದು. ಗಾಳಿ ಅವುಗಳನ್ನು ಒಂದುಗೂಡಿಸಲು, ಹಿಡಿದಿಟ್ಟುಕೊಳ್ಳಲು ಸಹಕಾರಿ. ಇಂತಹ ಅಚೇತನವನ್ನು ಚೇತನವೆಂದು ಭಾವಿಸಿ ಅರುಹುತ್ತಿರುವ ಯಕ್ಷ ನಿಜಕ್ಕೂ ಮರುಳನೇ ಸರಿ. ನಾವೂ ನಮ್ಮ ಬಯಕೆಗಳನ್ನು ಈಡೇರಿಸಿಕೊಳ್ಳುವ ಭರದಲ್ಲಿ ಕೆಲವೊಮ್ಮೆ ವಿಚಾರಶಕ್ತಿಯನ್ನು ಕಳೆದುಕೊಳ್ಳುತ್ತೇವೆ. ಅನಗತ್ಯವಾಗಿ ಯಾರು ಯಾರನ್ನೋ ಆಶ್ರಯಿಸುತ್ತೇವೆ. ಬಯಕೆಗಳನ್ನು ಪೂರೈಸಿಕೊಳ್ಳಬೇಕು ನಿಜ. ಆದರೆ ಅವಿವೇಕಿಗಳಾಗದೇ ವಿಚಾರ ಮಾಡಿ , ವಿಮರ್ಶಿಸಿ ಗುರಿಯೆಡೆಗೆ ಸಾಗುವುದು ಬುದ್ಧಿವಂತಿಕೆ. ಯಕ್ಷನಂತೆ ವಿವೇಕ ಕಳೆದುಕೊಳ್ಳದಿರೋಣ._
📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ