💐ಪ್ರತಿಮಾನಾಟಕದ ಒಂದು ಸುಮ💐
*अनपत्या वयम राम: पुत्रोन्यस्य महीपते: । वने व्याघ्री च कैकेयी त्वया किं न कृतं त्रयम् ।।*
_ದಶರಥನ ವಿಲಾಪ ಮುಂದುವರೆಯುತ್ತಿದೆ. ಅಯ್ಯೋ ವಿಧಿಯೇ! ಹೀಗಾದರೂ ನಡೆದಿದ್ದರೆ ತೊಂದರೆ ಇರುತ್ತಿರಲಿಲ್ಲ. ನಾನು ಮಕ್ಕಳಿಲ್ಲದವನಾಗಿಯೇ ಇದ್ದು, ಅಥವಾ ರಾಮನು ಬೇರೋಬ್ಬ ರಾಜನ ಮಗನಾಗಿದ್ದರೆ, ಅಥವಾ ಈ ಕೈಕೇಯಿ ಕಾಡಿನಲ್ಲಿ ಹೆಣ್ಣು ಹುಲಿಯಾಗಿದ್ದರೆ ಹೀಗೆ ನಡೆಯುತ್ತಲೇ ಇರಲಿಲ್ಲ. ವಿಧಿಯೇ ನೀನು ಯಾಕೆ ಈ ಮೂರನ್ನು ನಡೆಸದೇ ಹೋದೆ! ಮಕ್ಕಳಿಲ್ಲವೆಂದು ಕೊರಗಿ ಪತ್ನಿಯರನ್ನು ಕಟ್ಟಿಕೊಂಡ ಯಜ್ಞ ಗಳನ್ನಾಚರಿಸಿದ ಮಕ್ಕಳನ್ನು ತನ್ನ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸಿದ ದಶರಥನ ಮಾತಿದು. ವಿಧಿಯ ನಿರ್ಣಯವನ್ನು ತಪ್ಪಿಸಲು ಸಾಧ್ಯವಿಲ್ಲ. ನೀನು ಈ ಮೂರನ್ನು ಮಾಡಿದ್ದರೆ ನನ್ನ ಈಗಿನ ದು:ಖ ಅಸಂಭವವಾಗುತ್ತಿತ್ತು. ಒಂದು ವೇಳೆ ನನಗೆ ಮಕ್ಕಳೇ ಆಗದೇ ಇದ್ದಿದ್ದರೆ ಇಂತಹ ಗುಣಪೂರ್ಣ ಪುತ್ರನನ್ನು ಕಾಡಿಗಟ್ಟುವ ಸಂದರ್ಭ ಒದಗುತ್ತಿತ್ತೇ! ಖಂಡಿತ ಇಲ್ಲ. ಅಥವಾ ರಾಮನಂತಹ ಧರ್ಮ ಭೂಯಿಷ್ಠನು ಬೇರೆಯವರ ಮಗನಾಗಿದ್ದರೆ ಅವನಿಗೆ ವನವಾಸದ ಕಷ್ಟ ಒದಗುತ್ತಿರಲಿಲ್ಲ. ಅಥವಾ ಈ ಕೈಕೇಯಿಯಂತಹ ದುಷ್ಟ ಮಹಿಳೆ ಕಾಡಿನಲ್ಲಿ ಹುಲಿಯಾಗಿಯಾದರೂ ಹುಟ್ಟಿದ್ದರೆ ನನ್ನ ಈ ಗೋಳಾಟ ರಾಮನ ಅರಣ್ಯ ಗಮನ ಎರಡೂ ಆಗುತ್ತಿರಲಿಲ್ಲ. ವಿಧಿಯೇ ಯಾಕಿದನ್ನು ನೀನು ಅನುಸರಿಸದೇ ನನ್ನ ಪಾಲಿನ ನಿಧಿಯನ್ನು ದೂರ ಮಾಡಿರುವೆಯಲ್ಲ. ಅಯ್ಯೋ! ನಾವೂ ದಶರಥನಂತೆ ಅನೇಕ ತಪ್ಪು ಹೆಜ್ಜೆಗಳನ್ನು ಇಟ್ಟು ಅನಂತರ ಹೀಗಾಗಿದ್ದರೆ ಹಾಗಾಗಿದ್ದರೆ ಎಂದೆಲ್ಲ ಹಲುಬುತ್ತೇವೆ. ಆದರೆ ಮೊದಲೇ ಸಾವಧಾನದಿ ಯೋಚಿಸಿ ಕಾರ್ಯದಲ್ಲಿ ತೊಡಗಿದರೆ ಮುಂದೆ ದು:ಖಿಸುವ ಪ್ರಮೇಯ ಇರಲಾರದು. ರಾಮನ ನಾಮವು ನಮ್ಮ ನಿರ್ಧಾರಗಳನ್ನು ಗಟ್ಟಿಗೊಳಿಸಲಿ, ಮುಂದೆ ಪರಿತಪಿಸದಿರುವಂತೆ ಪ್ರಚೋದಿಸಲಿ ಎಂದು ಆಶಿಸೋಣ._
📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ