🌹ಶಾಕುಂತಲದ ಒಂದು ಶ್ಲೋಕ🌹

*मूढ: स्यामहमेषा वा वदेन्मिथ्येति संशये । दारत्यागी भवाम्याहो परस्त्रीस्पर्शपांसुल: ।।*

_ದುಷ್ಯಂತನು ಶಾರ್ಙರವನನ್ನು ಕುರಿತು ಕೇಳುವ ಮಾತು. ಶಕುಂತಲೆಯ ತಪ್ಪೋ ನನ್ನ ತಪ್ಪೋ ಅರಿಯೆ ನಾನು. ಈಗ ನಾನು ಅವಳನ್ನು ವರಿಸಿ ಮರೆತಿರುವೆನೋ, ಅಥವಾ ಇವಳು ಸುಳ್ಳು ಹೇಳುತ್ತಿರುವಳೋ ಎಂಬ ಸಂಶಯ ಕಂಡುಬಂದಿದೆ. ಇಂತಹ ಸಮಯದಲ್ಲಿ ನಾನು ಏನು ಮಾಡಿದರೂ ಕಷ್ಟವೇ ಸರಿ. ಸ್ವಂತ ಕೈಹಿಡಿದ ಪತ್ನಿಯನ್ನು ನಡುನೀರಿನಲ್ಲಿ ಕೈ ಬಿಡುವುದು ಉಚಿತವೇ? ಅಥವಾ ಪರಸ್ತ್ರೀ ಸ್ಪರ್ಶ ಬಯಸಿದ ದೋಷಿಯಾಗುವುದು ಉಚಿತವೇ? ಎರಡೂ ಸಾಧ್ಯತೆಗಳು ಕಷ್ಟವೇ ಸರಿ. ನಾನು ಮರೆತಿದ್ದರೆ ಅವಳ ಕೈ ಹಿಡಿದಿರುವುದನ್ನು ಅದು ತಪ್ಪು. ಅಂತಹ ಪತ್ನಿಯನ್ನು ತ್ಯಜಿಸಿದ ಅದೂ ಗರ್ಭ ಧರಿಸಿದ ಕಾಲದಲ್ಲಿಯ ತ್ಯಾಗ ನನಗೆ ಕಟುಕತ್ವವನ್ನು ತಂದು ಕೊಟ್ಟೀತು. ಇದು ಯಾವಾಗ ಸಾಧ್ಯ ಅವಳ ಮಾತಿನಲ್ಲಿ ವಿಶ್ವಾಸವಿಟ್ಟಾಗ ಮಾತ್ರ. ಒಂದು ವೇಳೆ ಅವಳು ಸುಳ್ಳು ನುಡಿಯುತ್ತಿದ್ದಾಳೆ ಎಂದರೆ ಸುಂದರಿಯಾದ ಪರ ಪತ್ನಿಯ ಸ್ಪರ್ಶ ಹಂಬಲಿಸಿದ ಕಾಮಿಯೆಂಬ ಬಿರುದನ್ನು ನಾನು ಸಂಪಾದಿಸಲೋ? ಎರಡೂ ನುಂಗಲಾರದ ಬಿಸಿ ತುಪ್ಪದಂತಿದೆ. ಈಗ ನಾನು ಮಾಡಬೇಕಾಗಿರುವುದಾದರೂ ಏನನ್ನು ಎಂಬುದನ್ನು ನೀವೇ ನಿರ್ಣಯಿಸಿ. ಲೋಕದ ದೃಷ್ಟಿಯಲ್ಲಿ ಕಟುಕತ್ವವೂ ಕಾಮಿತ್ವವೂ ಕೆಟ್ಟದೇ. ಹಾಗಾಗಿ ನಿಮ್ಮನ್ನು ಪ್ರಶ್ನಿಸುತ್ತಿದ್ದೇನೆ. ಇದರಲ್ಲಿ ಯಾವುದು ಹೆಚ್ಚು ಅಪರಾಧ ? ಈ ಸನ್ನಿವೇಶದಲ್ಲಿ ದುಷ್ಯಂತನು ನೈತಿಕ ಪ್ರಶ್ನೆಯನ್ನು ಮಾಡಿ ತನ್ನ ತಪ್ಪಿಲ್ಲದಿರುವುದನ್ನು ತೋರಿಸುತ್ತಿದ್ದಾನೆ. ಸ್ವಂತ ಪತ್ನಿಯನ್ನು ಸ್ವೀಕರಿಸಿದ ರಾಮನನ್ನೇ ಬಿಡದ ಜನರು ಪರ ಪತ್ನಿಯನ್ನು ಸ್ವೀಕರಿಸಿದರೆ ನನ್ನ ಬಗ್ಗೆ ಆಡಿಕೊಳ್ಳಲಾರರೇ! ನಮಗೂ ಅನೇಕ ಸಂದರ್ಭಗಳಲ್ಲಿ ಇಂತಹ ಕ್ಲಿಷ್ಟಕರ ಹೆಜ್ಜೆ ಎದುರಾದಾಗ ದೇವನನ್ನು ಧ್ಯಾನಿಸಿ ಗುರು ಹಿರಿಯರನ್ನು ಗೌರವಿಸಿ ಮುಂದಡಿ ಇಡೋಣ._

📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩