💐ಪ್ರತಿಮಾನಾಟಕದ ಒಂದು  ಸುರಭಿ💐

*हा वत्स राम!  जगतां नयनाभिराम हा वत्स लक्ष्मण सलक्षणसर्वगात्र । हा साध्वि मैथिलि पतिस्थितचित्तवृत्ते हा हा गता: किल वनं बत मे तनूजा: ।।*

_ದಶರಥ ವಿಲಪಿಸುವ ಶ್ಲೋಕವಿದು. ಅಯ್ಯೋ ರಾಮ, ಜಗದ ಜನರೆಲ್ಲ ಎವೆಯಿಕ್ಕದೆ ನಿನ್ನ ಮುಖಕಮಲವನ್ನು ನೋಡಿ ಆನಂದಿಸುತ್ತಿದ್ದರು. ಹಾಗಾಗಿ ನೀನು ಕಣ್ಣುಗಳಿಗೊಂದು ಹಬ್ಬ,ನೀನು ಹೊರಟು ಹೋದಿಯಲ್ಲ! ಅಯ್ಯೋ ಲಕ್ಷ್ಮಣ ಸಾಮುದ್ರಿಕ ಶಾಸ್ತ್ರದ ರೀತಿಯಲ್ಲಿ ದೇಹದ ಅಂಗಾಂಗಗಳಲ್ಲಿ ಉತ್ತಮ ಲಕ್ಷಣಗಳನ್ನು ಹೊಂದಿ ಶ್ರೇಷ್ಠನೆನಿಸಿಕೊಂಡವನೇ ನೀನೂ ಹೊರಟು ನಿಂತೆಯಲ್ಲ! ಅಯ್ಯೋ ಪತಿವ್ರತೆ ಸೀತೆ,  ಪತಿಯನ್ನು ಬಿಟ್ಟು ಅನ್ಯರನ್ನು ಚಿಂತಿಸದ ಸಾಧ್ವಿ ಅಥವಾ ಪತಿಯನ್ನು ಮಾತ್ರ ಪ್ರೀತಿಸುವ ಪತಿವ್ರತೆ, ನೀನೂ ರಾಮನೊಡನೆ ಹೊರಟು ನಿಂತೆಯಲ್ಲ, ಅಯ್ಯೋ ಅಯ್ಯೋ ಈ ಹತಭಾಗ್ಯನಾದ ಅಥವಾ ಅದೃಷ್ಟಹೀನನಾದ ನನ್ನನ್ನು ಈ ಮಕ್ಕಳು ಬಿಟ್ಟುಹೋಗುತ್ತಿರುವರಲ್ಲ! ನನಗಿನ್ನಾರು ಗತಿ! ನನ್ನನ್ನು ಸಲಹುವವರು ಯಾರೂ ಇಲ್ಲವೇ! ದಶರಥನ ಅಳು ನಿಲ್ಲುತ್ತಲೇ ಇಲ್ಲ. ನಾವೂ ದಶರಥನಂತೆಯೇ ರಾಮಸೀತಾಲಕ್ಷ್ಮಣರ ಸ್ಮರಣೆ ಸದಾ ನಡೆಸೋಣ. ಈ ಶ್ಲೋಕದಲ್ಲಿ ಕವಿ ಆ ಹೆಸರುಗಳ ಅರ್ಥವನ್ನೂ ಸೂಚಿಸಿದ್ದಾನೆ. ರಾಮ ಸಂತೋಷ ನೀಡುವವನು, ಲಕ್ಷ್ಮಣ ಲಕ್ಷಣವಾಗಿರುವವನು, ಸೀತೆ ಪತಿವ್ರತೆ ಎಂದು ವಿವರಣೆ ನೀಡಿರುವುದು ಸಮಂಜಸವಾಗಿದೆ. ಇಂತಹ ಮಹನೀಯರು ಬಿಟ್ಟು ಹೊಗುತ್ತಿರುವರಲ್ಲ ಎಂದೇ ದಶರಥ ಚಿಂತಿಸುತ್ತಿರುವನು._

📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩