💐 ಪ್ರತಿಮಾ ನಾಟಕದ ಒಂದು ಕುಸುಮ 💐
*शून्य: प्राप्तो यदि रथो भग्नो मम मनोरथ: । नूनं दशरथं नेतुं कालेन प्रेषितो रथ: ।।*
_ಸುಮಂತ್ರ ಹಿಂದಿರುಗಿದ್ದಾನೆ. ದಶರಥ ಕಂಚುಕಿಯ ಬಳಿ ಕೇಳುತ್ತಾನೆ. ಹಿಂದಿರುಗಿದರೇ ನನ್ನ ಮಕ್ಕಳು? ಆಗ ಕಂಚುಕಿ ಕೇವಲ ಸುಮಿತ್ರನೊಬ್ಬನೇ ಬಂದಿದ್ದಾನೆ ಎಂದು ಅರುಹುತ್ತಾನೆ. ಆಗ ಶೋಕ ಹೆಚ್ಚಾಗಿ ದಶರಥ ನುಡಿಯುವ ಮಾತು. ರಥವು ಶೂನ್ಯವಾಗಿಯೇ ಬಂದಿತೇ! ನನ್ನ ಬಾಳೂ ಇಂದಿಗೆ ಶೂನ್ಯವಾಯಿತು. ನನ್ನ ಮನದ ಅಭಿಲಾಷೆ ಅಸುನೀಗಿತು. ಕವಿ ಇಲ್ಲಿ ಮನೋರಥಕ್ಕೂ ರಥಕ್ಕೂ ಸಂಬಂಧ ಕಲ್ಪಿಸಿ ಸುಂದರವಾಗಿಸಿದ್ದಾನೆ. ರಥವು ಶೂನ್ಯವಾಗಿ ಹಿಂತಿರುಗಿದ್ದರಿಂದ ನನ್ನ ಮನೋರಥವು ಭಗ್ನವಾಯಿತು ಅಥವಾ ಶೂನ್ಯವಾಯಿತು. ಆಸೆಗಳೆಲ್ಲ ಬತ್ತಿ ಹೋದವು. ಈ ರಥ ಬಂದ ಉದ್ದೇಶವೇ ಬೇರೆ. ಈ ದಶರಥನ ಪ್ರಾಣವನ್ನು ಕರೆದೊಯ್ಯಲು ಕಾಲನೇ ಶೂನ್ಯವಾದ ರಥದಲ್ಲಿ ಬಂದಿರುವನು. ನನ್ನ ಕಾಲ ಇನ್ನು ಖಾಲಿಯಾಗುವುದು ರಥದಂತೆ. ರಾಮನಿಲ್ಲದ ಈ ದಶರಥನ ಬಾಳೆಂಬ ರಥ ಸಾಗಲಾರದು. ಪ್ರಾಣಗಳೆಂಬ ಸಾರಥಿ ಕಾಲನನ್ನು ಅನುಸರಿಸುತ್ತಾನೆಯೋ ಏನೋ! ಕವಿ ಇಲ್ಲಿ ಅವನ ಅಂತ್ಯವು ಸಮೀಪಿಸಿತೆಂಬ ಧ್ವನಿಯನ್ನು ನೀಡಿದ್ದಾನೆ. ಭಾಸನ ಮಾತು ಪುಟ್ಟದಾದರೂ ಪುಟಕ್ಕಿಟ್ಟ ಚಿನ್ನದಂತೆ ಧ್ವನಿಪೂರ್ಣ. ಉತ್ಪ್ರೇಕ್ಷೆ ಅಲಂಕಾರ. ಯಮನೇ ರಥದ ರೂಪದಲ್ಲಿ ಬಂದನೆಂಬ ಭಾವ._
📜ಸಂಗ್ರಹ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ