धर्मशास्त्रम्
ಧರ್ಮಶಾಸ್ತ್ರ
यद्ददासि विशिष्टेभ्यो यदश्नासि दिने दिने। तत्ते वित्तमहं मन्ये शेषं कस्यापि रक्षसि।। व्यासः।
ಸಂಪಾದಿಸಿದ ದುಡ್ಡನ್ನು ಪಾತ್ರರಿಗೆ ದಾನ ಮಾಡಿದಾಗ ಹಾಗೂ ಹಸಿದವರಿಗೆ ಉಣಿಸಿದಾಗ ಆ ಧನವು ನಮ್ಮದೆಂದು ಕರೆಸಿಕೊಂಡು ಸಾರ್ಥಕವಾಗುವುದು. ಇದೆರಡಕ್ಕೂ ಉಪಯೋಗವಿಲ್ಲದ ದಾನಕ್ಕೂ- ಉಣಿಸಲೂ ಪ್ರಯೋಜನಕ್ಕೆ ಬಾರದ ದುಡ್ಡು ನಮ್ಮದೆಂದು ಹೇಗೆ ಕರೆಸಿಕೊಳ್ಳುವುದು! ಧನ ಸಂಪಾದನೆಯ ಉದ್ದೇಶ ಭೋಗವಲ್ಲ. ಹಂಚಿ ತಿನ್ನುವುದೇ ಪ್ರಧಾನ ಉದ್ದೇಶ. ಜೇನಿನಂತೆ ಕೇವಲ ಸಂಗ್ರಹದಲ್ಲಿ ರತನಾದರೆ ಕಡೆಗೊಮ್ಮೆ ಯಾರಾದರೂ ಕೊಂಡೊಯ್ಯುವರು.
ಸಂಗ್ರಹ:
ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ