धर्मशास्त्रम्
ಧರ್ಮಶಾಸ್ತ್ರ
ಊರ್ಧ್ವಂ ವಿವಾಹಾತ್ ಪುತ್ರಸ್ಯ ತಥಾ ಚ ವ್ರತಬಂಧನಾತ್ | ಆತ್ಮನೋ ಮುಂಡನಂ ನೈವ ವರ್ಷಂ ವರ್ಷಾರ್ಧಮೇವ ಚ|| ಮಾಸಮನ್ಯತ್ರ ಸಂಸ್ಕಾರೇ ತ್ರಿಮಾಸಂ ಚೌಲಕರ್ಮಣಿ | ಪಿಂಡದಾನಂ ಮೃದಾ ಸ್ನಾನಂ ನ ಕುರ್ಯಾತ್ತಿಲತರ್ಪಣಮ್|| ಧರ್ಮಶಾಸ್ತ್ರ ಕರದೀಪಿಕಾ||
ಮಗನ/ಮಗಳ ವಿವಾಹ ಅಥವಾ ಉಪನಯನ ನಡೆದು ಒಂದು ವರ್ಷ ಅಥವಾ ಆರು ತಿಂಗಳು ಮುಂಡನ ಕೂಡದು. ಆಯುಷ್ಕರ್ಮವು ಕೆಲವು ನಿಷಿದ್ಧ ಸಮಯದಲ್ಲಿ ಆಯುಷ್ಯವನ್ನು ಕಳೆಯಬಹುದು.ಬೇರೆ ಸಂಸ್ಕಾರಗಳಲ್ಲಿ ಒಂದು ತಿಂಗಳು ಮಾಡುವಂತಿಲ್ಲ. ಚೂಡಾಕರ್ಮವಾದರೆ ಮೂರು ತಿಂಗಳು ಮಾಡುವಂತಿಲ್ಲ. ಇದಿಷ್ಟೇ ಅಲ್ಲದೆ ಪಿಂಡಪ್ರಧಾನ, ಮೃತ್ತಿಕಾಸ್ನಾನ, ತಿಲತರ್ಪಣಗಳೂ ಕೂಡ ನಿಷಿದ್ಧವಾಗಿವೆ. ತ್ರಿಪುರುಷರ ಜ್ಞಾತಿಗಳಿಗೆ ಅಂದರೆ ಪಿತೃ-ಪಿತಾಮಹ-ಪ್ರಪಿತಾಮಹ ಸಂಬಂಧಿಗಳಿಗೆ ಅನ್ವಯಿಸುತ್ತದೆ. ಕಟ್ಟಿಂಗ್ , ಶೇವಿಂಗ್ ಮಾಡುವ ಮುನ್ನವೂ ಇಂತಹ ವಿಷಯಗಳನ್ನು ಗಮನಿಸುವುದು ಒಳಿತು.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ