धर्मशास्त्रम्

                ಧರ್ಮಶಾಸ್ತ್ರन ज्येष्ठयोर्विवाहः स्यात् ज्येष्ठमासे विशेषतः। द्वौ ज्येष्ठौ मध्यमौ प्रोक्तौ एकज्येष्ठं सुखावहम् ।।ಹುಡುಗನು ಮನೆಯಲ್ಲಿ ಹಿರಿಯ,  ಹುಡುಗಿಯೂ ಜ್ಯೇಷ್ಠಳು. ಹೀಗಿರುವಾಗ ಅವರ ನಡುವೆ ಜಾತಕಾದಿಗಳು ಹೊಂದಿಕೆ ಆದರೂ ಮದುವೆ ಮಾಡುವಂತಿಲ್ಲ. ಒಂದು ವೇಳೆ ಮಾಡುವುದೇ ಆದರೂ ಜ್ಯೇಷ್ಠ ಮಾಸದಲ್ಲಿ ಯಾವ ಕಾರಣಕ್ಕೂ ಮಾಡಕೂಡದು. ಮೂರು ಜ್ಯೇಷ್ಠಗಳ ಸಂಗಮವು ನಾಶಕಾರಕ‌. ಎರಡು ಮಧ್ಯಮ. ಒಂದು ಮಾತ್ರ ಶಾಸ್ತ್ರಸಮ್ಮತ ಅಂದರೆ ಜ್ಯೇಷ್ಠ ಮಾಸದಲ್ಲಿ ಮಾಡುವುದಾದರೆ ಮಕ್ಕಳು ಕನಿಷ್ಠರೂ, ಬೇರೆ ಮಾಸದಲ್ಲಿ ಮಾಡುವುದಾದರೆ ಒಬ್ಬ ಜ್ಯೇಷ್ಠ ಇನ್ನೊಬ್ಬಳು ಮಧ್ಯಮ ಅಥವಾ ಕನಿಷ್ಠ. ಒಬ್ಬರೇ ಮಕ್ಕಳಿರುವಲ್ಲಿ ಈ ನಿಯಮ ಅನ್ವಯಿಸುವುದಿಲ್ಲ. ಒಬ್ಬರಿಗಿಂತ ಹೆಚ್ಚು ಮಕ್ಕಳಿದ್ದರೆ ಮಾತ್ರ ಜ್ಯೇಷ್ಠ ಕನಿಷ್ಠ ಎಂಬ ವಿಭಾಗ. ಲೇಖನ: ಶ್ರೀನಿಧಿ ಅಭ್ಯಂಕರ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩