ಪದಶಕ್ತಿ ೪೬

ಪದಶಕ್ತಿ ೪೬🌄📔🖋️📕

*ಪ್ರಾಣ*

_ಈ ಶಬ್ದದ ಪ್ರಸಿದ್ಧ ಅರ್ಥ ಜೀವ. ಅಬ್ಬಾ ಪ್ರಾಣ ಹೋಗ್ತಿತ್ತು, ಪ್ರಾಣ ಈಗ ತಾನೇ ಹೋಯ್ತು ಇತ್ಯಾದಿ ಪ್ರಯೋಗಗಳಲ್ಲಿ ಸಹಜವಾಗಿ ಬಳಸುತ್ತೇವೆ._

_ಇನ್ನೊಂದು ಅರ್ಥ ಪಂಚ ಪ್ರಾಣಗಳು ಶರೀರವನ್ನು ಆಶ್ರಯಿಸಿರುತ್ತವೆ. ಪ್ರಾಣ-ಅಪಾನ-ವ್ಯಾನ- ಉದಾನ ಹಾಗೂ ಸಮಾನ. ಹೃದಯದಲ್ಲಿ ಇರುವ ಗಾಳಿಯ ರೂಪ ಅದು ಪ್ರಾಣ._

_ಮೂರನೆಯದಾಗಿ ಭಗವಂತನ ಇನ್ನೊಂದು ಹೆಸರು ಪ್ರಾಣ.*ಸರ್ವಾನಿ ಹವಾ ಇಮಾನಿ ಭೂತಾನಿ ಪ್ರಾಣಮೇವಾಭಿಸಂವಿಶಂತಿ* ಎಂಬ ಉಪನಿಷತ್ತು ಭಗವಂತನನ್ನು ಪ್ರಾಣ ಎನ್ನುತ್ತದೆ. ನಾಲ್ಕನೆಯ ಅರ್ಥ ಶಕ್ತಿ. ಕನ್ನಡದ ತ್ರಾಣವೂ ಈ ಪ್ರಾಣವೂ ಸಮಾನಾರ್ಥಕ. ಐದನೆಯದಾಗಿ ಮೇದಿನೀ ಕೋಶದ ಪ್ರಕಾರ ಪೂರ್ಣಗೊಂಡಿರುವುದನ್ನು ಪ್ರಾಣ ಎನ್ನಬಹುದು. ಶರೀರವು ಆತ್ಮದ ಜೊತೆಗಿದ್ದಾಗ ಪ್ರಾಣ. ಇಲ್ಲದಿದ್ದಾಗ ಅದೊಂದು ಕಸ._

_ಆರನೆಯದಾಗಿ ನಮಗೆಲ್ಲ ತಿಳಿದಿರುವಂತೆ ಗಾಳಿ. ಮುಖ್ಯಪ್ರಾಣ ಎನ್ನುವುದು ಅವನಿಗೇ ಅಲ್ಲವೇ! ಹೀಗೆ ಅನೇಕ ಅರ್ಥಗಳಿಂದ ಕೂಡಿದ ಈ ಪ್ರಾಣ ನಮ್ಮಲ್ಲಿ ನೆಲೆನಿಂತು ಪ್ರಾಣಿಜಗತ್ತಿನಲ್ಲಿ ತ್ರಾಣದಿಂದ ನೆಲೆಸಲೆಂದು ಆ ಮುಖ್ಯಪ್ರಾಣನನ್ನು ನೆನೆಯೋಣ._

_ಸಂಸ್ಕೃತ ಕನ್ನಡ ಸಾಹಿತ್ಯದಲ್ಲಿ ಸಾವಿರಾರು ಕಡೆ ಈ ಪದ ಪ್ರಸಿದ್ಧ. प्राणीह माता प्राणः पितेति ವೇದದ ಮಾತು._

*ಪಲ್ಲಕ್ಕಿಯ ಸಾನಂದದೊಳೇರುಹಲ್ಲಣಿಸದ ಕರಿತುರಗವನೇರುಎಲ್ಲಾಭರಣವನಿಟ್ಟು ಸುಖದಿ ಪ್ರಾಣದೊಲ್ಲಭಸಹಿತ ಸಂತೋಷದೊಳಿರು ಶ್ರೀಕೊಲ್ಲೂರ ಮೂಕಾಂಬೆಯ ಕೃಪೆಯಿಂದಾ* ಕೆಳದಿ ವೆಂಕಣ್ಣಯ್ಯನವರ ಕೀರ್ತನೆಯಿದು. ಅರ್ಥ ಸರಳವಾಗಿ ಇರುವ ಕಾರಣ ವಿವರಣೆ ಬೇಡ.


ತಪ್ಪುಗಳಿದ್ದರೆ ತಿದ್ದಿ.

ಎಲ್ಲಾ ಲೇಖನಗಳಿಗೆ ಒಮ್ಮೆ ಇಣುಕಿ ಈ ಕೆಳಗಿನ ಕೊಂಡಿಗೆ

ಸಂಗ್ರಹ: ಶ್ರೀನಿಧಿ ಅಭ್ಯಂಕರ್.

http://shreenidhiabhyankar.blogspot.com.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩