धर्मशास्त्रम्
ಧರ್ಮಶಾಸ್ತ್ರ
प्रत्युद्वाहो नैव कार्यो नैकस्मै दुहितृद्वयम् ।
न चैकजन्ययोः पुंसोः एकजन्ये तु कन्यके।।
ತನ್ನ ಮಗಳನ್ನು ಯಾರ ಮಗನಿಗೆ ಮದುವೆ ಮಾಡಿಕೊಟ್ಟಿರುತ್ತಾರೋ ಅಲ್ಲಿಯ ಕನ್ಯೆಯನ್ನು ತನ್ನ ಮಗನಿಗೆ ತಂದುಕೊಳ್ಳುವುದು ಸರಿಯಲ್ಲ. ಕೊಡುಕೊಳ್ಳುವ ವ್ಯಾಪಾರವಾಗುವುದು. ಒಂದು ಕೊಟ್ಟು ಒಂದು ತರುವುದು ವ್ಯಾಪಾರದಲ್ಲಿ ಮಾತ್ರವೇ ಹೊರತು ವಿವಾಹಾದಿಗಳಲ್ಲಿ ಸಲ್ಲದು. ಒಬ್ಬನಿಗೇ ಇಬ್ಬರನ್ನು ಧಾರೆಯೆರೆಯಬಾರದು. ಇಬ್ಬರು ಸೋದರರಿಗೆ ಇಬ್ಬರು ಸೋದರಿಯರನ್ನು ಎಂದಿಗೂ ದಾನಮಾಡಬಾರದು. ಸೋದರ/ಸೋದರಿ= ಒಂದೇ ಹೊಟ್ಟೆಯಲ್ಲಿ ಹುಟ್ಟಿದ.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ